ಶ್ರೀ ಮಲೆತಿರಿಕೆ ಮಹಾದೇಶ್ವರ ಬೆಟ್ಟದ ಬಸವನ ಕಟ್ಟೆ ಪುನರ್ ಪ್ರತಿಷ್ಠಾಪನೆಯ ಪೂಜಾ ಕೈಂಕರ್ಯ ನೆರವೇರ ಕಣ್ಣರುವುದು. 
ಕೊಡಗು

ಮಹದೇಶ್ವರ ಬೆಟ್ಟದ ಬಸವನ ಕಟ್ಟೆ ಮರು ಪ್ರತಿಷ್ಠಾಪನೆ

ವಿರಾಜಪೇಟೆ : ಇತಿಹಾಸ ಪ್ರಸಿದ್ಧ ಶ್ರೀ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಬಸವನ ಕಟ್ಟೆಯನ್ನು ಮರು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ತಾಲೂಕಿನ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಈಶ್ವರ ದೇವನಿಗೆ ಅಭಿಮುಖವಾಗಿ ನೆಲೆಸಿರುವ ಬಸವನ ಕಟ್ಟೆಗೆ ನೂರಾರು ವರ್ಷಗಳ ಇತಿಹಾಸವಿದೆ. ಮಾರ್ಚ್‌ನಲ್ಲಿ ನಡೆಯುವ ಶ್ರೀ ಮಲೆ ಮಹದೇಶ್ವರ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಬಸವನಿಗೂ ವಿಶೇಷ ಪೂಜೆಗಳು ಸಲ್ಲಿಸಲಾಗುತ್ತದೆ.
ಇತ್ತೀಚೆಗೆ ಬಸವನಕಟ್ಟೆ ಶಿಥಿಲಗೊಂಡಿದ್ದರಿಂದ ಮತ್ತು ರಸ್ತೆ ವಿಸ್ತರಣೆ ವೇಳೆ ಬಸವನಿಗೆ ಹಾನಿಯಾಗುವ ಹಿನ್ನೆಲೆಯಲ್ಲಿ ಶ್ರೀ ಮಲೆ ಮಹದೇಶ್ವರ ದೇಗುಲದ ಆಡಳಿತ ಮಂಡಳಿಯು ಸ್ಥಳಾಂತರ ಮಾಡಲು ತೀರ್ಮಾನ ಮಾಡಿತ್ತು.
ಕುಕ್ಲೂರು ಮಾಳೇಟಿರ ಕುಟುಂಬಸ್ಥರು ಬಸವನ ಕಟ್ಟೆಯ ಆರಾಧಕರಾಗಿದ್ದು, ದೇಗುಲ ಸಮಿತಿ ಮನವಿಯ ಮೇರೆಗೆ ಕುಟುಂಬಸ್ಥರು ನೂತನ ಬಸವನ ಕಟ್ಟೆ ಮರು ಸ್ಥಾಪನೆಗೆ ಮುಂದಾದರು. ಈಗ ಇರುವ ಜಾಗದ 100 ಮೀಟರ್ ಹಿಂಭಾಗದಲ್ಲೇ ಬಸವನ ಕಟ್ಟೆಯಲ್ಲಿ ಮರು ನಿರ್ಮಿಸಲಾಯಿತು. ತಂತ್ರಿವರ್ಯರಾದ ಹರೀಶ್ ಪಂಡರೀಶ ಅವರ ನೇತೃತ್ವದಲ್ಲಿ ಬಸವನನ್ನು ಪ್ರತಿಷ್ಠಾಪಿಸಿ ವಿವಿಧ ಧಾರ್ಮಿಕ ಪೂಜೆ ನೆರವೇರಿಸಲಾಯಿತು.
ಪೂಜೆ ಕಾರ್ಯದಲ್ಲಿ ಮಾಳೇಟಿರ ಕುಟುಂಬದ ಅಧ್ಯಕ್ಷ ಅಭಿನ್ ಕುಶಾಲಪ್ಪ, ಕಾರ್ಯದರ್ಶಿ ಪೃಥ್ವಿ ಪೊನ್ನಪ್ಪ, ಹಿರಿಯರಾದ ವಿಧುರ ತಿಮ್ಮಯ್ಯ, ಸರಸ್ವತಿ ತಿಮ್ಮಯ್ಯ, ಕೊಳುವಂಡ ರಾಜರಾಮ್, ಟ್ರಸ್ಟ್ ಅಧ್ಯಕ್ಷ ವಾಟೇರಿರ ಶಂಕರ್ ಪೂವಯ್ಯ, ಬೊಳ್ಳಚಂಡ ಪ್ರಕಾಶ್, ಚೋಕಂಡ ರಮೇಶ್, ಕುಪ್ಪಚ್ಚೀರ ಐಯ್ಯಪ್ಪ, ಚಾರಿಮಂಡ ಗಪ್ಪಣ್ಣ, ಬೊಳ್ಳಚಂಡ ಸೋಮಣ್ಣ ಇತರರು ಇದ್ದರು.