ಸೋಮವಾರಪೇಟೆಯಲ್ಲಿ ರಾಮನವಮಿ ಉತ್ಸವ ಸಮಿತಿ ವತಿಯಿಂದ ರಾಮನವಮಿ ಆಚರಣೆ ಕುರಿತು ಅಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ಸುಭಾಷ್ ತಿಮ್ಮಯ್ಯ ಮಾತನಾಡಿದರು. ತಿಮ್ಮಯ್ಯ, ಉಮೇಶ್, ನಂದ ಇದ್ದರು. 
ಕೊಡಗು

ಸೋಮವಾರಪೇಟೆಯಲ್ಲಿ 27ರಂದು ಬೃಹತ್ ಶೋಭಾಯಾತ್ರೆ

ಸೋಮವಾರಪೇಟೆ : ಇಲ್ಲಿನ ರಾಮನವಮಿ ಉತ್ಸವ ಸಮಿತಿ ವತಿಯಿಂದ ರಾಮನವಮಿ ಆಚರಣೆ ನಿಮಿತ್ತ ಮಾ. 27ರಂದು ಪಟ್ಟಣದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಸುಭಾಷ್ ತಿಮ್ಮಯ್ಯ ತಿಳಿಸಿದ್ದಾರೆ.
ಪಟ್ಟಣದಲ್ಲಿ ರಾಮನವಮಿ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವತಯಾರಿ ಸಭೆಯ ಅಧ್ಯಕತೆ ವಹಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ನಡೆಯುವ ಶ್ರೀ ರಾಮನವಮಿಯಂದು ರಾಮನ ವಿಗ್ರಹವನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ, ಪಟ್ಟಣದ ಮುಖ್ಯ ಬೀದಿಗಳಲ್ಲಿ ಶೋಭಾಯಾತ್ರೆ ನಡೆಸುವುದು ಸಂಪ್ರದಾಯವೇ ಆಗಿದೆ. ಈ ವರ್ಷವೂ ಇದೇ ಸಂದರ್ಭ ವೀರಗಾಸೆ, ಹುಲಿವೇಷ, ಭಜನೆ ಕುಣಿತ, ಕೀಲು ಕುದುರೆ, ತಮಟೆ, ನಾಸಿಕ್ ಬ್ಯಾಂಡ್, ಕೊಡಗು ವಾದ್ಯ, ಕಂಸಾಳೆ, ಡೊಳ್ಳು ಕುಣಿತ, ಜಾನಪದ ಕಲಾ ತಂಡಗಳ ನೃತ್ಯ ಪ್ರದರ್ಶನ ನಡೆಯಲಿದೆ.ಆಕರ್ಷಕ ಪಟಾಕಿ ಸಿಡಿಮದ್ದಿನ ಪ್ರದರ್ಶನವೂ ಇರಲಿದೆ ಎಂದರು.
ರಾಮನವಮಿ ಉತ್ಸವ ಸಮಿತಿ ವತಿಯಿಂದ ಜ್ಞಾನವಿಕಾಸ ಶಾಲಾ ಆವರಣದಲ್ಲಿ ಸಾರ್ವಜನಿಕರಿಗೆ ಹಾಗೂ ಭಕ್ತಾದಿಗಳಿಗೆ ಅನ್ನದಾನವಿರುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಎ.ಹೆಚ್.ತಿಮ್ಮಯ್ಯ, ಉಪಾಧ್ಯಕ್ಷ ಎಂ.ಬಿ.ಉಮೇಶ್, ಖಜಾಂಚಿ ಸಿ.ಸಿ.ನಂದ ಇದ್ದರು.