ಅರೆಭಾಷೆ ಗೌಡ ವಿಕಾಸ ವೇದಿಕೆ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಗಣ್ಯರು. 
ಕೊಡಗು

ಜ್ಞಾನಾಭಿವೃದ್ಧಿಗೆ ರಸಪ್ರಶ್ನೆ ಕಾರ್ಯಕ್ರಮ ಅವಶ್ಯ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಅರೆಭಾಷೆ ಗೌಡ ವಿಕಾಸ ವೇದಿಕೆಯ ನಿರ್ದೇಶಕ ಪೊಕ್ಕುಳಂಡ್ರ ಪ್ರಹ್ಲಾದ್ ಅಭಿಮತ
ನಾಪೋಕ್ಲು: ಅರೆಭಾಷೆ ಗೌಡ ವಿಕಾಸ ವೇದಿಕೆ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೋಮವಾರ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು.
ಅರೆಭಾಷೆ ಗೌಡ ವಿಕಾಸ ವೇದಿಕೆಯ 11ನೇ ಕಾರ್ಯಕ್ರಮದಲ್ಲಿ ಸುಮಾರು 15 ಶಾಲೆಗಳಿಂದ ಭಾಗವಹಿಸಿದ ಮಕ್ಕಳಿಗೆ ಮೊದಲಿಗೆ ಲಿಖಿತ ಪರೀಕ್ಷೆ, ನಂತರ ಆಯ್ಕೆಯಾದ 4 ಉತ್ತಮ ತಂಡಗಳ ಮಧ್ಯೆ ಅಂತಿಮ ಹಂತದಲ್ಲಿ ಸ್ಟೇಜ್ ಮೇಲೆ ಭಜರ್ ರೌಂಡ್‌ನಲ್ಲಿ ಮುಖಾಮುಖಿ ಪೈಪೋಟಿ ಭರ್ಜರಿಯಾಗಿ ನಡೆಯಿತು.
ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ರತ್ನಕರ ರೈ ಮಾತನಾಡಿ, ಮಕ್ಕಳಿಗೆ ಸ್ಫೂರ್ತಿ ತುಂಬಿದರು.
ಅರೆಭಾಷೆ ಗೌಡ ವಿಕಾಸ ವೇದಿಕೆಯ ನಿರ್ದೇಶಕ ಪೊಕ್ಕುಳಂಡ್ರ ಪ್ರಹ್ಲಾದ್ ಅವರು ವಿಜೇತರಿಗೆ ನಗದು ಬಹುಮಾನ ಮತ್ತು ಟ್ರೋಫಿ ನೀಡಿ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಅವರು, ಸೋಶಿಯಲ್ ಮಿಡಿಯಾದಿಂದಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡುತ್ತಾ, ಮಕ್ಕಳ ಜ್ಞಾನಾಭಿವೃದ್ಧಿಗೆ ರಸಪ್ರಶ್ನೆಯಂತಾ ಕಾರ್ಯಕ್ರಮಗಳು ಎಷ್ಟು ಅತ್ಯವಶ್ಯ ಎಂದು ಮನವರಿಕೆ ಮಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿಂದ ಗಣ್ಯರು ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಹಾಗೂ ಟ್ರೋಫಿಯನ್ನು ವಿತರಿಸಿ ಶುಭ ಹಾರೈಸಿದರು.
ವಿಜೇತರು: ಪ್ರಥಮ ಸ್ಥಾನ: ಕೆ.ಎಸ್.ರಿಷಿತ್ ಮತ್ತು ಎಂ.ಎಂ.ಸಂಸ್ಕಾರ್, ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್, ಮಡಿಕೇರಿ.
ದ್ವಿತೀಯ ಸ್ಥಾನ: ದಿವ್ಯಾಂಶಿ ಪಾತಿದಾರ್ ಮತ್ತು ಎಂ.ಟಿ. ಮನಿಷಾ, ಪಿಎಂಶ್ರೀ ಜವಹರ್ ನವೋದಯ ವಿದ್ಯಾಲಯ, ಗಾಳಿಬೀಡು ತೃತೀಯ ಸ್ಥಾನ : ಕಾನಡ್ಕ ಯಶಿಕ ದೇವಯ್ಯ ಮತ್ತು ಕೆ.ಎಂ.ಆದಿತ್ಯ, ಕೊಡಗು ವಿದ್ಯಾಲಯ, ಮಡಿಕೇರಿ.