ಕಿರುಗೂರು ಕುಟ್ಟಿಚಾತ ಅಂಬಲದಲ್ಲಿ ದೇವರನ್ನು ಪ್ರಾರ್ಥಿಸುವ ಮೂಲಕ ಪುತ್ತರಿ ಕೋಲ್ ನಮ್ಮೆಯನ್ನು ಗಣ್ಯರು ಉದ್ಘಾಟಿಸಿದರು. ಕೊರಕುಟ್ಟೀರ ರಾಜಪ್ಪ, ಚಾರಿಮಂಡ ಪಟ್ಟು, ಪ್ರಮುಖರಾದ ಕೊರಕುಟ್ಟಿರ ಚಂಗಪ್ಪ,ಪೊಕ್ಕಳಿಚಂಡ ಪೂಣಚ್ಚ, ಪಾನಿಕುಟ್ಟಿರ ಕಾರ್ಯಪ್ಪ, ಕಾಕೇರ ರವಿ, ಸವಿದೇವಯ್ಯ ಇದ್ದರು.
- ಕಿರುಗೂರು
- ಕುಟ್ಟಿಚಾತ ಕೊಲ್ ಮಂದ್
ಪೊನ್ನಂಪೇಟೆ: ತಾಲೂಕಿನ ಕಿರುಗೂರು ಕುಟ್ಟಿಚಾತ ಕೊಲ್ ಮಂದ್‌ನಲ್ಲಿ ಬೀಟಿವಾಡ, ಕಿರುಗೂರು ಮತ್ತೂರು ಗ್ರಾಮದವರನ್ನು ಒಳಗೊಂಡ ಕೊಡಗು ಹೆಗ್ಗಡೆ ಜನಾಂಗದವರ ಪುತ್ತರಿ ಕೋಲ್ ನಮ್ಮೆ ಇತ್ತೀಚೆಗೆ ಆಯೋಜಿಸಲಾಗಿತ್ತು.
ಕೋಲಾಟ್, ಉಮ್ಮತ್ತಾಟ್, ಪರೆಯ ಕಳಿ, ವಾಲಗತ್ ಆಟ್, ಕ್ರೀಡೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು. ಕುಟ್ಟಿಚಾತ ದೇವಸ್ಥಾನದ ಅಧ್ಯಕ್ಷ ಕೊರಕುಟ್ಟೀರ ರಾಜಪ್ಪ, ಕಾರ್ಯದರ್ಶಿ ಚಾರಿಮಂಡ ಪಟ್ಟು, ಪ್ರಮುಖರಾದ ಕೊರಕುಟ್ಟಿರ ಚಂಗಪ್ಪ,ಪೊಕ್ಕಳಿಚಂಡ ಪೂಣಚ್ಚ, ಪಾನಿಕುಟ್ಟಿರ ಕಾರ್ಯಪ್ಪ, ಕಾಕೇರ ರವಿ, ಸವಿದೇವಯ್ಯ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.