ಮಹೇಶ್ ಜೈನಿ 
ಕೊಡಗು

ಪ್ರವಾಹ ಸಂತ್ರಸ್ತರಿಗೆ ಮನೆ ಕೊಡಿ

ಸುನಿಲ್ ಪೊನ್ನೇಟಿ
ಮಡಿಕೇರಿ:
ಕೊಡಗಿನಲ್ಲಿ 2018ರ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಅನೇಕರಿಗೆ ಮನೆ ಕೊಡದ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಂಗಳೂರಿನಲ್ಲಿ ಅಕ್ರಮ ಒತ್ತುವರಿ ಮಾಡಿಕೊಂಡಿದ್ದ ಜನತೆಗೆ ವಸತಿ ಭಾಗ್ಯ ಕೊಡುವ ಮೂಲಕ ಕೇರಳ ಲಾಬಿಗೆ ಮಣಿದಂತಾಗಿದೆ ಎಂದು ಜಿಲ್ಲಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬAದ ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಕೊಡಗಿನಲ್ಲಿ ಈ ಹಿಂದೆ ನಡೆದ ಪ್ರಕೃತಿ ವಿಕೋಪದ ನೈಜ ನಿರಾಶ್ರಿತರಿಗೆ ಮನೆ ನೀಡದ ಕಾಂಗ್ರೆಸ್ ಸರ್ಕಾರ ಕೇರಳದ ಲಾಬಿಗೆ ಮಣಿದು ಅಕ್ರಮ ವಲಸಿಗರಿಗೆ ಮನೆ ಕೊಡುವ ಮೂಲಕ ಈ ಸರ್ಕಾರ ಅಕ್ರಮ ವಲಸಿಗ ಅಲ್ಪಸಂಖ್ಯಾತರ ಪರ ಎಂಬುದನ್ನು ಎತ್ತಿ ತೋರಿಸುತ್ತಿದೆ. ಇನ್ನು ಕೂಡ 2018ರ ಸೂತಕದ ಛಾಯೆಯಿಂದ ಕೊಡಗಿನ ನಿರಾಶ್ರಿತರು ಹೊರಗೆ ಬಂದಿಲ್ಲ. ಈ ಸಂದರ್ಭದಲ್ಲಿ ತಮಗೆ ಮತ ನೀಡಿ ಸರ್ಕಾರ ಬರಲು ಕಾರಣವಾಗಿರುವ ಕೊಡಗಿನ ಜನರ ಕೂಗಿಗೆ ಕಿವಿ ಕೊಡದೇ ಪಕ್ಕದ ಕೇರಳ ರಾಜ್ಯದವರ ಮನವಿಗೆ ಸ್ಪಂದಿನೆ ನೀಡಿದ ಕಾಂಗ್ರೆಸ್ ಸರ್ಕಾರ ಕೊಡಗಿನ ನೈಜ ನಿರಾಶ್ರೀತರಿಗೆ ಅನ್ಯಾಯ ಮಾಡಿದೆ.
ಅಕ್ರಮವಾಗಿ ಸರ್ಕಾರದ ಜಮೀನುಗಳಿಗೆ ಕನ್ನ ಹಾಕಿ ಬೇರೆ ಬೇರೆ ದೇಶಗಳಿಂದ ಇಲ್ಲಿಗೆ ಬಂದು ದೇಶ ದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸುವ ಇಂಥ ವ್ಯಕ್ತಿಗಳ ಮನೆ ತೆರವುಗೊಳಿಸಿದ ಸಂದರ್ಭದಲ್ಲಿ ಪಾಕಿಸ್ತಾನದ ಮಾಧ್ಯಮಗಳಲ್ಲಿ ಕೂಡ ಸುದ್ದಿ ಬಿತ್ತರಗೊಂಡಿದ್ದು ಇಂಥ ಅಕ್ರಮ ವಲಸಿಗರುಗಳಿಗೆ ಪಾಕಿಸ್ತಾನವೂ ಬೆಂಬಲ ನೀಡುತ್ತಿರುವ ಬಗ್ಗೆ ಸಂಶಯ ಮೂಡಿ ಬರುತ್ತಿದೆ. ಇಂಥ ವಲಸಿಗರ ಪರ ಕೇರಳ ಮತ್ತು ಕರ್ನಾಟಕದ ರಾಜ್ಯ ಸರ್ಕಾರಗಳು ಮೃದು ಧೋರಣೆ ತೋರುತಿರುವುದು ಕೂಡ ಖಂಡನಿಯ ಎಂದಿದ್ದಾರೆ.