ಕೋಲಾರದ ಬಂಗಾರಪೇಟೆ ಸೇರಿದಂತೆ ರಾಜ್ಯದ ವಿವಿಧೆಡೆ ನಡೆಯುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ಸಂಘಟನೆ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ರಿಶಾನಾ, ತಾಹಿರಾ ಅಲಿ, ಝಾಕಿಯಾ, ಮೇರಿ ವೇಗಸ್, ಶಕೀನಾ, ಆಯಿಷಾ ಮತ್ತಿತರರು ಇದ್ದರು.
ಕೋಲಾರದ ಬಂಗಾರಪೇಟೆ ಸೇರಿದಂತೆ ರಾಜ್ಯದ ವಿವಿಧೆಡೆ ನಡೆಯುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ಹಾಗೂ ಅಪರಾಧಿಗಳಿಗೆ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ಸಂಘಟನೆ ವತಿಯಿಂದ ಮಡಿಕೇರಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಇಂದಿರಾಗಾAಧಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕರರು, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭ ಮಾತನಾಡಿದ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷೆ ರಿಶಾನಾ, ಕಳೆದ ವಾರ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ 6 ವರ್ಷದ ಪುಟ್ಟ ಕಂದಮ್ಮ ಸಂಜೆ ಹಾಲು ತರಲು ಅಂಗಡಿಗೆ ಹೋದ ಸಂದರ್ಭ ಅಲ್ಲಿನ ಅಂಗಡಿ ಮಾಲೀಕ ದೌರ್ಜನ್ಯವೆಸಗಿದ್ದಾನೆ. ಆ ಪುಟ್ಟ ಕಂದಮ್ಮ ಇಂದಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಹೆತ್ತ ತಾಯಿ ಆಸ್ಪತ್ರೆಯಲ್ಲಿ ಅಲೆದಾಡುತ್ತಾ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಅಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆದರೆ, ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದು, ಈ ಸಂಬAಧ ಸೂಕ್ತ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಬೇಕೆAದು ಒತ್ತಾಯಿಸಿದರು.
ಈ ಘಟನೆ ಬಂಗಾರಪೇಟೆಗೆ ಮಾತ್ರ ಸೀಮಿತವಾಗಿಲ್ಲ. ಶಾಂತಿಯ ಜಿಲ್ಲೆ, ಪ್ರವಾಸಿಗರ ಸ್ವರ್ಗವೆಂದು ಕರೆಸಿಕೊಳ್ಳುವ ಕೊಡಗಿನಲ್ಲಿಯೂ ಇಂತಹ ಪ್ರಕರಣ ಹೆಚ್ಚುತ್ತಿದೆ. ಗೋಣಿಕೊಪ್ಪಲು, ಸಿದ್ದಾಪುರ ಸೇರಿದಂತೆ ವಿವಿಧೆಡೆ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ. ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗದಿರುವುದರಿಂದಲೇ ಇಂತಹ ಘಟನೆ ಹೆಚ್ಚುತ್ತಿದ್ದು, ಅರಬ್ ದೇಶಗಳಲ್ಲಿರುವಂತೆಯೇ ಕಠಿಣ ಕಾನೂನನ್ನು ಇಲ್ಲಿಯೂ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ತಾಹಿರಾ ಅಲಿ, ಉಪಾಧ್ಯಕ್ಷೆ ಝಾಕಿಯಾ, ಕಾರ್ಯದರ್ಶಿ ಮೇರಿ ವೇಗಸ್, ಪ್ರಮುಖರಾದ ಶಕೀನಾ, ಆಯಿಷಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.