ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದೆ ಎಂದು ಆರೋಪಿಸಿ ಕೂಡಿಗೆ ಗ್ರಾಮ ಪಂಚಾಯತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಗೋವಿಂದ ರಾಜ್ ದಾಸ್, ಬಿ.ಜೆ. ಅಣ್ಣಯ್ಯ, ಅರುಣ್ ರಾವ್, ಅನಂತ, ಶಿವಕುಮಾರ್ ಮತ್ತಿತರರು ಇದ್ದರು.
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದೆ ಎಂದು ಆರೋಪಿಸಿ ಕೂಡಿಗೆ ಗ್ರಾಮ ಪಂಚಾಯತಿ ಮುಂಭಾಗದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಸ್ಥಳೀಯ ಗ್ರಾಮಸ್ಥರು, ಶ್ರೀ ಬಸವೇಶ್ವರ ದೇವಾಲಯ ಸಮಿತಿ, ಸಾರ್ವಜನಿಕರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮಹಿಳಾ ಘಟಕದ ಪದಾಧಿಕಾರಿಗಳು ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಬೀದಿ ನಾಯಿಗಳು ಶಾಲಾ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರ ಮೇಲೂ ದಾಳಿ ಮಾಡುತ್ತಿವೆ. ಬೀದಿ ನಾಯಿಗಳಿಂದ ಸಾರ್ವಜನಿಕರನ್ನು ರಕ್ಷಿಸಬೇಕಿದೆ. ನಾಯಿಗಳ ಹಾವಳಿ ನಿಯಂತ್ರಿಸಬೇಕಿದೆ ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಲಾಯಿತು.
ಕೂಡಿಗೆ ಕೊಪ್ಪಲು ಗ್ರಾಮದ ರಂಗಣ್ಣ ಅವರ ಮೇಲೆ ದಾಳಿ ನಡೆಸಿದ ನಾಯಿಗಳು ಮಾರಣಾಂತಿಕವಾಗಿ ಘಾಸಿಗೊಳಿಸಿವೆ. ಜಾನುವಾರಿಗಳ ಮೇಲೂ ಬೀದಿ ನಾಯಿಗಳ ದಾಳಿ ನಡೆಸುತ್ತಿವೆ. ಪ್ರತಿಭಟನೆ ಬಗ್ಗೆ ಸೂಚನೆಯಿದ್ದರೂ ಕೂಡ ಅಭಿವೃದ್ಧಿ ಅಧಿಕಾರಿ ರಜೆ ಪಡೆದಿರುವುದು ಸಮಂಸವಲ್ಲ ಎಂದು ಪ್ರತಿಭಟನಾಕಾರರು, ಮನವಿ ಸ್ವೀಕರಿಸಿಲು ಮುಂದಾಗದಿರುವ ಕಾರ್ಯದರ್ಶಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಹಲವು ಬಾರಿ ನಾಯಿಗಳ ಹಾವಳಿ ಬಗ್ಗೆ ಎಚ್ಚರಿಸಿದ್ದರೂ ಕೂಡ ಸೂಕ್ತ ಕ್ರಮಕೈಗೊಂಡಿಲ್ಲ. ನಾಯಿ ದಾಳಿ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೇಲೆ ದೂರು ನೀಡಬೇಕಾಗುತ್ತದೆ. ಗಾಯಾಳು ಚಿಕಿತ್ಸೆಗೆ ಪಂಚಾಯಿತಿ ಯಿಂದ ಕ್ರಮವಹಿಸಬೇಕಿದೆ ಎಂದು ಟಿ.ಎ. ನಾರಾಯಣ ಗೌಡರ ಕರವೇ ಜಿಲ್ಲಾ ಸಂಚಾಲಕ ಗೋವಿಂದ ರಾಜ್ ದಾಸ್, ತಾಲೂಕು ಅಧ್ಯಕ್ಷ ಬಿ.ಜೆ. ಅಣ್ಣಯ್ಯ ಆಗ್ರಹಿಸಿದರು.
ಸ್ಧಳಕ್ಕೆ ಅಗಮಿಸಿದ ಗ್ರಾಮ ಪಂಚಾಯತಿ ಆಡಳಿತ ಅಧಿಕಾರಿ ಅವರಿಗೆ ಪ್ರತಿಭಟನಕಾರರು ಮನವಿ ಪತ್ರ ನೀಡಿ ಸಮಸ್ಯೆ ಪರಿಹಾರಕ್ಕೆ ಒಂದು ವಾರದ ಗಡುವು ನೀಡಿದರು. ಗ್ರಾಮ ಪಂಚಾಯತಿ ವತಿಯಿಂದ ನಿಯಮಾನುಸಾರ ಕ್ರಮಗಳನ್ನು ಕೈಗೊಳ್ಳಬೇಕು. ಕ್ರಮ ತೆಗೆದುಕೊಳ್ಳದಿದ್ದಾರೆ ಮುಂದಿನ ಸೋಮವಾರ ಗ್ರಾಮ ಪಂಚಾಯತಿ ಮುಂಭಾಗದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕರರು ಎಚ್ಚರಿಕೆ ನೀಡಿದರು.
ಗ್ರಾಮ ಪಂಚಾಯತಿ ಮಾಜಿ ಸದಸ್ಯ ಅರುಣ್ ರಾವ್, ಅನಂತ, ಶಿವಕುಮಾರ್, ಶ್ರೀ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್. ಚಂದ್ರು, ಉಪಾಧ್ಯಕ್ಷ ಪ್ರಕಾಶ್, ಜಿಲ್ಲಾ ಐ.ಎನ್ ಟಿ ಸಿ. ಅಧ್ಯಕ್ಷ ಅಣ್ಣಯ್ಯ, ಸಮಾಜ ಸೇವಕ ಉದ್ಯಮಿ ಹಕ್ಕೆಮೋಹನ್, ಕರವೇ ತಾಲೂಕು
ಉಪಾಧ್ಯಕ್ಷ ಫಯಾಜುದ್ದಿನ್, ಪ್ರಧಾನ ಕಾರ್ಯದರ್ಶಿ ಗೀತಾ, ಕಾರ್ಯದರ್ಶಿ ಕುಮಾರ್, ಖಜಾಂಚಿ ರೊನಾಲ್ಡ್, ಪ್ರಮುಖರಾದ ಕೆ.ಆರ್. ಗಣೇಶ್, ಬಿ.ಡಿ. ಅಣ್ಣಯ್ಯ, ಚಂದ್ರು, ಸುಬ್ಬಯ್ಯ, ನಾಗರಾಜು, ಮಹಮ್ಮದ್, ರಜಾಕ್, ಇಸ್ಮಾಯಿಲ್, ಧರ್ಮ ಮತ್ತಿತರರು ಇದ್ದರು.