ಪ್ರಧಾನ ಮಂತ್ರಿ ನರೇಂದ್ರ ಮೋದಿ 76ನೇ ಜನ್ಮ ದಿನ ಹಿನ್ನೆಲೆಯಲ್ಲಿ ವಿರಾಜಪೇಟೆ ಶ್ರೀ ಗಣಪತಿ ದೇವಾಲಯದಲ್ಲಿ ಕೊಡಗು ಯುವ ಸೇನಾ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಕುಲದೀಪ್ ಪೂಣಚ್ಚ, ಮಾಚಟ್ಟಿರ ಸಚಿನ್ ಮಂದಣ್ಣ, ತೆಕ್ಕೆರ ಜೀವನ್ ನಾಣಯ್ಯ, ಪೂಜಿತ್ ರೈ ಮತ್ತಿತರರು ಇದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ 76ನೇ ಜನ್ಮ ದಿನವನ್ನು ಕೊಡಗು ಯುವ ಸೇನಾ ವತಿಯಿಂದ ಜಿಲ್ಲೆಯ ವಿವಿಧೆಡೆ ಆಚರಿಸಲಾಯಿತು.
ವಿರಾಜಪೇಟೆ ಶ್ರೀ ಗಣಪತಿ ದೇವಾಲಯದಲ್ಲಿ ಕೊಡಗು ಯುವ ಸೇನಾ ವಿರಾಜಪೇಟೆ ತಾಲೂಕು ಸಮಿತಿ ವತಿಯಿಂದ ಪುಷ್ಪರ್ಚನೆ ಸಲ್ಲಿಸಿ ವಿಶೇಷ ಪೂಜೆ ನಡೆಸಲಾಯ್ತು. ಈ ಸಂದರ್ಭದಲ್ಲಿ ಮಾತನಾಡಿದ ಯುವ ಸೇನಾ ಮುಖಂಡ ಕುಲದೀಪ್ ಪೂಣಚ್ಚ ನರೇಂದ್ರ ಮೋದಿ 25 ವರ್ಷಗಳಿಂದ ರಾಜಕೀಯದಲ್ಲಿದ್ದು, ಯಾವುದೇ ಬಿಡುವಿಲ್ಲದೆ ದೇಶಕೋಸ್ಕರ ಕೆಲಸ ಮಾಡುತ್ತಿದ್ದಾರೆ. ಅವರ ದೀರ್ಘಾಯಷ್ಯಕ್ಕಾಗಿ ಎಲ್ಲರೂ ಪ್ರಾರ್ಥಿಸಬೇಕಿದೆ ಎಂದರು. ಈ ಸಂದರ್ಭ ಜಿಲ್ಲಾ ಸಂಚಾಲಕ ಮಾಚಟ್ಟಿರ ಸಚಿನ್ ಮಂದಣ್ಣ, ತಾಲೂಕು ಅಧ್ಯಕ್ಷ ತೆಕ್ಕೆರ ಜೀವನ್ ನಾಣಯ್ಯ, ಪ್ರಮುಖರಾದ ಪೂಜಿತ್ ರೈ, ವೇಣು ಮಂಜಪ್ಪ ಹಾಗೂ ಸ್ಥಳೀಯ ಕಾರ್ಯಕರ್ತರು ಇದ್ದರು.
ಸೋಮವಾರಪೇಟೆ ತಾಲೂಕು ಕೊಡಗು ಯುವ ಸೇನಾ ಮೂಲಕ ನಗರದ ಶ್ರೀ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ನೆರೆದಿದ್ದ ಭಕ್ತದಿಗಳಿಗೆ ಸಿಹಿ ಹಂಚಲಾಯಿತು. ಈ ಸಂದರ್ಭದಲ್ಲಿ ಯುವ ಸೇನಾ ಜಿಲ್ಲಾ ಉಪಾಧ್ಯಕ್ಷ ಕೆ.ವಿ. ಮಂಜುನಾಥ್, ತಾಲೂಕು ಅಧ್ಯಕ್ಷ ಶೇಖರ್, ಕಾರ್ಯದರ್ಶಿ ಕೆ.ವಿ. ಪ್ರಭಾಕರ್, ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷ ಡಿ. ನೆಹರೂ, ಗಂಗಾಧರ, ಸಂಘಟರುಗಳಾದ ಗಣೇಶ್, ತೇಜು, ರಾಜು, ವಿನಿಲ್, ಅಮ್ಮಣ್ಣ ಇದ್ದರು.
ಮಡಿಕೇರಿ ತಾಲೂಕು ಕೊಡಗು ಯುವ ಸೇನಾ ವತಿಯಿಂದ ನಗರದ ಶ್ರೀ ಕೋಟೆ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಈ ಸಮದರ್ಭ ಸಿಹಿ ಹಂಚಲಾಯಿತು. ತಾಲೂಕು ಅಧ್ಯಕ್ಷ ಡಿ. ಜಯಣ್ಣ, ಕಾರ್ಯದರ್ಶಿ ಹೇಮಂತಕುಮಾರ್, ರಮೇಶ್ ಹಾಗೂ ಇತರರು ಇದ್ದರು.