ಪ್ರತಿಷ್ಠಿತ ರಾಷ್ಟ್ರೀಯ ಜಲಪ್ರಶಸ್ತಿ 2024ರ ಗೌರವಕ್ಕೆ ಪಾತ್ರವಾದ ತಂಡದ ನೇತೃತ್ವ ವಹಿಸಿದ್ದ ಕೊಡಗು ಮೂಲದ ಅರಣ್ಯಕೃಷಿ ವಿಜ್ಞಾನಿ ಡಾ. ಎ.ಆರ್. ಉತ್ತಪ್ಪ
ಕೊಡಗು ಮೂಲದ ಅರಣ್ಯಕೃಷಿ ವಿಜ್ಞಾನಿ ಡಾ. ಎ.ಆರ್. ಉತ್ತಪ್ಪ ಮತ್ತು ತಂಡ ಪ್ರತಿಷ್ಠಿತ ರಾಷ್ಟಿçÃಯ ಜಲಪ್ರಶಸ್ತಿ 2024ರ ಗೌರವಕ್ಕೆ ಪಾತ್ರವಾಗಿದೆ.
ಗೋವಾದ ಕೇಂದ್ರ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ (ಐಸಿಎಆರ್-ಸಿಸಿಎಆರ್‌ಐ) ಹಿರಿಯ ವಿಜ್ಞಾನಿ ಆಗಿರುವ ಡಾ. ಎ.ಆರ್. ಉತ್ತಪ್ಪ ನೇತೃತ್ವದ ತಂಡ ಶಾಲೆ-ಕಾಲೇಜುಗಳಿಂದ ಹೊರತಾದ ಅತ್ಯುತ್ತಮ ವಿದ್ಯಾಸಂಸ್ಥೆ ವಿಭಾಗದಲ್ಲಿ ಈ ಪ್ರಶಸ್ತಿ ಗೆದ್ದುಕೊಂಡಿದೆ. ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯ ಸ್ಥಾಪಿಸಿದ ಈ ಪ್ರಶಸ್ತಿಯನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಸಮ್ಮುಖದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು
ಮಳೆನೀರು ಕೊಯ್ಲು, ಕೃಷಿ ಅರಣ್ಯೀಕರಣದಲ್ಲಿ ಸ್ಥಳದಲ್ಲೇ ನೀರಿನ ಸಂರಕ್ಷಣೆ, ಅಂತರ್ಜಲ ಮರುಪೂರಣ, ಗೋಡಂಬಿ ಮತ್ತು ತೆಂಗಿನಕಾಯಿ ಆಧಾರಿತ ಕೃಷಿ ಅರಣ್ಯ ವ್ಯವಸ್ಥೆಗಳು ಮತ್ತು ಜಲಚರ ಸಾಕಣೆ ಆಧಾರಿತ ಸಮಗ್ರ ಕೃಷಿ ವ್ಯವಸ್ಥೆಗಳಿಗೆ ಕೊಯ್ಲು ಮಾಡಿದ ನೀರಿನ ಉತ್ಪಾದಕ ಬಳಕೆ ಹಾಗೂ ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ಪರಿಸರ ವ್ಯವಸ್ಥೆಗಳಿಗೆ ಸೂಕ್ತವಾದ ಹವಾಮಾನ-ಸ್ಥಿತಿಸ್ಥಾಪಕ ತಂತ್ರಗಳ ಪ್ರದರ್ಶನಕ್ಕಾಗಿ ಡಾ. ಎ.ಆರ್. ಉತ್ತಪ್ಪ ನೇತೃತ್ವದ ತಂಡ ಈ ಪ್ರಶಸ್ತಿ ಪಡೆದುಕೊಂಡಿದೆ.
ಮಡಿಕೇರಿ ಸಮೀಪದ ಗಾಳಿಬೀಡುವಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ (ಜೆಎನ್‌ವಿ) ತಮ್ಮ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಡಾ. ಎ.ಆರ್. ಉತ್ತಪ್ಪ ಪೊನ್ನಂಪೇಟೆಯ ಅರಣ್ಯ ಕಾಲೇಜಿನಿಂದ ಬಿ.ಎಸ್ಸಿ. ಅರಣ್ಯ ಪದವಿ ಪಡೆದರು. ನಂತರ ಉತ್ತರಾಖಂಡದ ಪಂತನಗರದ ಜಿಬಿಪಿಯುಎ ಮತ್ತು ಟಿ ಸಂಸ್ಥೆಯಿAದ ಕೃಷಿ ಅರಣ್ಯ ವಿಷಯದಲ್ಲಿ ಎಂಎಸ್ಸಿ ಮಾಡಿದರು. ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಿಂದ ಅರಣ್ಯಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದರು. ಇವರು ಪೊನ್ನಂಪೇಟೆ ಸಮೀಪದ ಕುಟ್ಟಂದಿ ಗ್ರಾಮದ ಅಪ್ಪಂಡೆರAಡ ರಾಮುಣಿ ಮತ್ತು ಅಪ್ಪಂಡೆರAಡ ಶಾರದ ದಂಪತಿ ಪುತ್ರ.