ನಾಪೋಕ್ಲು ಮಹಾ ಶಕ್ತಿ ಕೇಂದ್ರದ ಪದಾಧಿಕಾರಿಗಳ ಅಯ್ಕೆ ಸಭೆಯು ಉಸ್ತುವಾರಿಗಳಾದ ಮಡಿಕೇರಿ ನಗರ ಪ್ರಧಾನ ಕಾರ್ಯದರ್ಶಿ ಗಳಾದ ಬಿ.ಕೆ.ಜಗದೀಶ್ ಅವರ ನೇತೃತ್ವದಲ್ಲಿ ನಡೆಯಿತು.
ನಾಪೋಕ್ಲು: ಇಲ್ಲಿನ ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರನ್ನಾಗಿ ಮುಕ್ಕಾಟಿರ ಎಂ.ವಿನಯ್ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ನಿಡುಮಂಡ ಕೃತಿ, ಸದಸ್ಯರಾಗಿ ಕಾಂಡಂಡ ಪ್ರತಿಜಾ ಅಚ್ಚಪ್ಪ, ತೀಯರ ಸುಕುಮಾರ, ಪೇರೂರು ವಿಶ್ವಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ರಾಜ್ಯ ಕಾರ್ಯಾಕಾರಿಣಿ ಸದಸ್ಯರಾದ ಎ.ಕೆ.ಮನು ಮುತ್ತಪ್ಪ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಜಗದೀಶ, ತಾಲೂಕು ಬಾಜಪ ಉಪಾಧ್ಯಕ್ಷ ಮನು ಮಹೇಶ, ಬಲ್ಲಮಾವಟಿ ಶಕ್ತಿ ಕೇಂದ್ರದ ಪ್ರಮುಖರಾದ ಕರವಂಡ ಲವ ನಾಣಯ್ಯ, ಸಹ ಪ್ರಮುಖ್ ದೀಪಕ್, ನಾಪೋಕ್ಲು ಸಹ ಪ್ರಮುಖ್ ನಿರನ್, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಹರೀಶ್ ಪೂವಯ್ಯ, ಭೂತ್ ಅಧ್ಯಕ್ಷರು, ಹಾಗೂ ಕಾರ್ಯಕರ್ತರು ಹಾಜರಿದ್ದರು.
ಪದಾಧಿಕಾರಿಗಳ ಅಯ್ಕೆ ಸಭೆಯು ಉಸ್ತುವಾರಿಗಳಾದ ಮಡಿಕೇರಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ.ಜಗದೀಶ್ ಅವರ ನೇತೃತ್ವದಲ್ಲಿ ನಡೆಯಿತು.