ತುಮಕೂರಿನಲ್ಲಿ ನಡೆದ ಕರ್ನಾಟಕ ಕ್ರೀಡಾಕೂಟದ ಟೆಕ್ವಾಂಡೋ ವಿಭಾಗದಲ್ಲಿ ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್ ವಿದ್ಯಾರ್ಥಿ ಎನ್.ಕೆ. ಪ್ರಜ್ಞಾ ಕಂಚಿನ ಪದಕ ಗೆದ್ದುಕೊಂಡಿದ್ದಾಳೆ. ಮಾಸ್ಟರ್ ಕುಶಾಲ್ ಕುಮಾರ್ ಇದ್ದಾರೆ. 
ಕೊಡಗು

ಟೆಕ್ವಾಂಡೋದಲ್ಲಿ ಪ್ರಜ್ಞಾಗೆ ಕಂಚಿನ ಪದಕ

ಮಡಿಕೇರಿ:
ತುಮಕೂರಿನಲ್ಲಿ ಈಚೆಗೆ ನಡೆದ ಕರ್ನಾಟಕ ಕ್ರೀಡಾಕೂಟದ ಟೆಕ್ವಾಂಡೋ ವಿಭಾಗದಲ್ಲಿ ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್ ವಿದ್ಯಾರ್ಥಿ ಎನ್.ಕೆ. ಪ್ರಜ್ಞಾ ಕಂಚಿನ ಪದಕ ಗೆದ್ದುಕೊಂಡಿದ್ದಾಳೆ. ಕರ್ನಾಟಕ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಸಹಯೋಗದಲ್ಲಿ ಆರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಅಂಡರ್ 73 ಕೆ.ಜಿ ವಿಭಾಗದಲ್ಲಿ ಎನ್.ಕೆ. ಪ್ರಜ್ಞಾ ಕೊಡಗನ್ನು ಪ್ರತಿನಿಧಿಸಿದ್ದಳು.
ಮಂಗಳೂರಿನ ಶ್ರೀಚೈತ್ಯನ್ಯ ಕಾಲೇಜ್‌ನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಪ್ರಜ್ಞಾ ಮಡಿಕೇರಿ ನಗರದ ದೇಚೂರು ನಿವಾಸಿ ಎನ್.ಎನ್. ಕುಶಾಲ್ ಕುಮಾರ್ ಮತ್ತು ಸಿ.ಪುಷ್ಪಲತ ದಂಪತಿಯ ಪುತ್ರಿ. ಈಕೆ ಟೆಕ್ವಾಂಡೋ ಕ್ಲಬ್‌ನ ಮಾಸ್ಟರ್ ಕುಶಾಲ್ ಕುಮಾರ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ.