ತೃತಿಯ ಭಾಷೆಗೆ ಅಂಕದ ಬದಲು ಗ್ರೇಡ್ ನೀಡಲು ತೀರ್ಮಾನಿಸಿರುವ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ಪೋಸ್ಟ್ ಕಾರ್ಡ್ ಚಳವಳಿ ಆರಂಭಿಸಲಾಯಿತು. ನಾಪಂಡ ರವಿಕಾಳಪ್ಪ, ಕೆ.ಜಿ. ಬೋಪಯ್ಯ, ಅನಿತಾಪೂವಯ್ಯ, ಮನು ಮುತ್ತಪ್ಪ, ಮಹೇಶ್ ಜೈನಿ ಮತ್ತಿತರರು ಇದ್ದರು. 
ಕೊಡಗು

ತೃತೀಯ ಭಾಷೆಗೆ ಗ್ರೇಡ್ ವಿರುದ್ಧ ಪೋಸ್ಟ್ ಕಾರ್ಡ್ ಚಳವಳಿ

ಸುನಿಲ್ ಪೊನ್ನೇಟಿ
ಮಡಿಕೇರಿ:
ತೃತಿಯ ಭಾಷೆಗೆ ಅಂಕದ ಬದಲು ಗ್ರೇಡ್ ನೀಡಲು ತೀರ್ಮಾನಿಸಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ಪೋಸ್ಟ್ ಕಾರ್ಡ್ ಚಳವಳಿ ಆರಂಭಿಸಲಾಗಿದೆ. ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಈ ಚಳವಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ ಈ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 6 ವಿಷಯಗಳಿಗೆ 625 ಅಂಕ ಗಳನ್ನು ನೀಡಲಾಗುತಿತ್ತು. ಇದನ್ನು ಫಲಿತಾಂಶಕ್ಕೂ ಪರಿಗಣಿಸಲಾಗುತಿತ್ತು. ಆದರೆ ಈಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಚೆಗೆ ಅದಿಸೂಚನೆಯೊಂದನ್ನು ಹೊರಡಿಸಿದ್ದು ಅದರಂತೆ ತೃತಿಯ ಭಾಷೆಗೆ ಅಂಕದ ಬದಲು ಗ್ರೇಡ್ ನೀಡಲು ತೀರ್ಮಾನಿಸಿದ್ದು ಇದು ಉತ್ತಿರ್ಣರಾಗಲು ಪರಿಗಣಿಸಲಾಗುವುದಿಲ್ಲ ಎಂದು ಅದೇಶಿಸಲಾಗಿದೆ. ಈ ಅದಿಸೂಚನೆಯಿಂದ ನಮ್ಮ ರಾಜ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿಯಲಿದ್ದು ಇದರಿಂದ ವಿದ್ಯಾರ್ಥಿಗಳಲ್ಲಿ ಭಾಷೆ ಮೇಲಿನ ಅಭಿಮಾನ ಕಡಿಮೆಯಾಗಲಿದೆ. ಹಾಗಾಗಿ ಈ ಅದಿಸೂಚನೆಯನ್ನು ಹಿಂಪಡೆಯುವAತೆ ಸರ್ಕಾರವನ್ನು ಒತ್ತಾಯಿಸಲು ಕೊಡಗು ಜಿಲ್ಲಾ ಬಿಜೆಪಿಯಿಂದ ಕಾರ್ಡ್ ಚಳವಳಿ ಆರಂಭಿಸಲಾಗಿದೆ ಎಂದು ತಿಳಿಸಿದರು.
ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾಪೂವಯ್ಯ, ಪ್ರಮುಖರಾದ ಮನು ಮುತ್ತಪ್ಪ, ಮಹೇಶ್ ಜೈನಿ, ಪಿ.ಎಂ. ರವಿ, ರಾಬಿನ್ ದೇವಯ್ಯ ಮತ್ತಿತರರು ಈ ಸಂದರ್ಭ ಇದ್ದರು.