ಪೊನ್ನಂಪೇಟೆಯಲ್ಲಿ ಕೆಟಿಡಿಒ ವತಿಯಿಂದ ಶಬರಿಮಲೆ ಯಾತ್ರೆಗಳಿಗೆ ವಿಶ್ರಾಂತಿ ಗ್ರಹವನ್ನು ಕೆಟಿಡಿಒ ಜಿಲ್ಲಾ ಅಧ್ಯಕ್ಷ ಕಳ್ಳಿಚಂಡ ಪರಶುರಾಮ್ ಉದ್ಘಾಟಿಸಿದರು. ಕೆಂಪೇಗೌಡ, ಅಖಿಲ್ ಶಿವಾಜಿ, ಹೇಮಂತ್ ಕುಮಾರ್, ರವಿ ಇದ್ದರು.
ಪೊನ್ನಂಪೇಟೆ: ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಷನ್ ಹಾಗೂ ಪೊನ್ನಂಪೇಟೆ ತಾಲೂಕು ಘಟಕಗಳ ವತಿಯಿಂದ ಬುಧವಾರ ಮಂಡ್ಯ, ಮೈಸೂರು, ತುಮಕೂರು ಸೇರಿದಂತೆ ಸುಮಾರು 30ಕ್ಕೂ ಅಧಿಕ ಜಿಲ್ಲೆಗಳ ರಾತ್ರಿ ಪ್ರಯಾಣಿಸುವ ಶಬರಿಮಲೆ ಯಾತ್ರಾರ್ಥಿಗಳಿಗೆ ಹಾಗೂ ಪೊನ್ನಂಪೇಟೆ ಸುತ್ತಮುತ್ತಲಿನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಳೆದ ಮೂರು ವರ್ಷಗಳಿಂದ ಕೆಟಿಡಿಒ ಸಂಘಟನೆಯಿಂದ ರಾತ್ರಿ ಸಮಯದಲ್ಲಿ ಶಬರಿಮಲೆಗೆ ತೆರಳುವ ಯಾತ್ರಾರ್ಥಿಗಳಿಗೆ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಕಾಫಿ ಮತ್ತು ಲಘು ಉಪಾಹಾರ ನೀಡಿ ವಿಶ್ರಮಿಸಿ ಹೋಗುವ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರಂತೆ ಈ ವರ್ಷವೂ ಜನವರಿ 4ರಿಂದ ಪ್ರಾರಂಭವಾಗಿ ಹನ್ನೊಂದು ದಿನಗಳ ಕಾಲ ಯಾತ್ರಾರ್ಥಿಗಳಿಗೆ ಕಾಫಿ ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನ್ಸೆಂಟ್ ಬಾಬು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ರಾತ್ರಿ ಪ್ರಯಾಣಿಸುವ ಶಬರಿಮಲೆ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ತಾತ್ಕಾಲಿಕ ವಿಶ್ರಾಂತಿ ಗೃಹ ನಿರ್ಮಿಸಲಾಗಿದೆ. ಮುಂದಿನ ವರ್ಷವೂ ದಾನಿಗಳ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕೆಟಿಡಿಒ ಜಿಲ್ಲಾ ಅಧ್ಯಕ್ಷ ಕಳ್ಳಿಚಂಡ ಪರಶುರಾಮ್, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಸಂಘದ ಜಿಲ್ಲಾ ಉಪಾಧ್ಯಕ್ಷ ಅಖಿಲ್ ಶಿವಾಜಿ, ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಹೇಮಂತ್ ಕುಮಾರ್, ಉಪಾಧ್ಯಕ್ಷ ರವಿ, ಸಂಘಟನಾ ಕಾರ್ಯದರ್ಶಿ ಮಂಜುನಾಥ್, ಪೊನ್ನಂಪೇಟೆಯ ವಿಘ್ನೇಶ್ವರ ವಾಹನ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ಅಜ್ಜಿಕುಟ್ಟೀರ ಪೊನ್ನಪ್ಪ , ದಾನಿ ಹಾಗೂ ಉದ್ಯಮಿ ಚೇರಂಡ ಮೋಹನ್, ಶಕೀಲ್, ಯಶ್ವಂತ್ ,ಉಮೇಶ್, ಕೆಂಪೇಗೌಡ, ಮಂಜು, ಕಿಶನ್, ಬಿ.ಎಚ್.ಭವಿತ್, ಕರ್ತಮಾಡ ಅಶ್ವತ್, ಬಿ.ಎಂ.ಪ್ರವೀಣ್, ಎಂ ಎಂ.ಹರೀಶ್, ವರ್ಗಿಸ್, ತಡಿಯಂಗಡ ದಿನೇಶ್, ಗಗನ್, ವಿ.ಎಸ್.ಕೇಶವ, ವಿ.ಎಸ್ ಅಕ್ಷತ್, ಕೃಷ್ಣ, ಕೆ.ಮಂಜು, ಗೋಪಾಲ್ ನಾಯಕ್, ಸುನೀಲ್ ಗಣಪತಿ, ಪಿ.ಸಿ.ಅನೀಶ್, ಯಶವಂತ್ ಶೆಟ್ಟಿ, ಬಷೀರ್, ಮನೋಜ್, ತಾಲೂಕು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಗೂ ಅಯ್ಯಪ್ಪ ಮಾಲಾಧಾರಿಗಳು ಭಾಗವಹಿಸಿದ್ದರು.