ಕುಶಾಲನಗರದ ಆರ್ಯವೈಶ್ಯ ಮಂಡಳಿ ಹಮ್ಮಿಕೊಂಡಿದ್ದ ಲಕ್ಷ ವೃಕ್ಷ ಆಂದೋಲನದಲ್ಲಿ ಮಂಡಳಿ ಅಧ್ಯಕ್ಷ ಬಿ. ಆರ್. ನಾಗೇಂದ್ರ ಪ್ರಸಾದ್, ಮಹಿಳಾ ಮಂಡಳಿ ಅಧ್ಯಕ್ಷೆ ವಾಣಿ ಮಹೇಶ್ ಮತ್ತು ಪದಾಧಿಕಾರಿಗಳು ಇದ್ದರು.
ಕುಶಾಲನಗರ : ಆರ್ಯವೈಶ್ಯ ಸಮುದಾಯದ ಕುಲದೇವತೆ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವದ ಅಂಗವಾಗಿ ಆರ್ಯವೈಶ್ಯ ಮಂಡಳಿಯು ಕುಶಾಲನಗರದ ಸುತ್ತಲಿನ ಪ್ರದೇಶದಲ್ಲಿ ಒಂದು ಲಕ್ಷ ಸಂಖ್ಯೆಯ ಗಿಡಗಳನ್ನು ನೆಟ್ಟು ಬೆಳೆಸುವ ಲಕ್ಷ ವೃಕ್ಷ ಆಂದೋಲನಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಪಟ್ಟಣದ ಕಾವೇರಿ ನದಿ ತಟದಲ್ಲಿ ಎರಡು ಸಂಸದ ಯದುವೀರ್ ಸಾಂಕೇತಿಕವಾಗಿ ಗಿಡ ನೆಟ್ಟು
ಆಂದೋಲನಕ್ಕೆ ಶುಭ ಕೋರಿದರು. ನಂತರ ಆರ್ಯವೈಶ್ಯ ಮಂಡಳಿ ಸದಸ್ಯರು ಪಟ್ಟಣದ ವಿವಿಧೆಡೆಗಳಲ್ಲಿ 64 ಗಿಡಗಳನ್ನು ನೆಟ್ಟರು. ಮುಂಬರುವ ದಿನಗಳಲ್ಲಿ ಪಟ್ಟಣದ ಸುತ್ತಮುತ್ತಲ ಪ್ರದೇಶದಲ್ಲಿ ಗಿಡ ನೆಡುವ ಯೋಜನೆ ಮುಂದುವರಿಯಲಿದ್ದು, ಸದಸ್ಯರು ಸಹಕರಿಸಬೇಕು ಎಂದು ಸಂಘಟಕರು ತಿಳಿಸಿದರು. ಈ ಸಂದರ್ಭದಲ್ಲಿ ಮಂಡಳಿ ಅಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್, ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ವಾಣಿ ಮಹೇಶ ಸೇರಿದಂತೆ ಯುವತಿ ಮಂಡಳಿ ಸದಸ್ಯರು ಹಾಜರಿದ್ದರು.