ಪಾಲಿಬೆಟ್ಟ ವರ್ತಕರ ಸಂಘದಿಂದ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ.ನವೀನ್, ಎಂ.ಯು. ಮುನೀರ್, ಶೀಬಾ, ಶಿವರಾಜ್, ಅಬೂಬಕರ್ ಇತರರು ಇದ್ದರು.
ಸಿದ್ದಾಪುರ : ವಿಶ್ವ ಪರಿಸರ ದಿನದ ಅಂಗವಾಗಿ ಪಾಲಿಬೆಟ್ಟ ವರ್ತಕರ ಸಂಘದಿಂದ ಪಾಲಿಬೆಟ್ಟ ಪಶುವೈದ್ಯ ಆಸ್ಪತ್ರೆ ಆವರಣದಲ್ಲಿ ಗುರುವಾರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪಶುವೈದ್ಯಾಧಿಕಾರಿ ಡಾ.ನವೀನ್ ಮಾತನಾಡಿ, ಸಸಿ ನೆಡುವುದರಿಂದ ಮುಂದಿನ ಪೀಳಿಗೆಗೆ ಅಮೂಲ್ಯ ಕೊಡುಗೆ ನೀಡಿದಂತಾಗುತ್ತದೆ. ಉತ್ತಮ ಗಾಳಿ, ಸ್ವಚ್ಛ ಪರಿಸರ ಮತ್ತು ಪ್ರಕೃತಿ ಸಮತೋಲನ ಕಾಪಾಡಲು ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವರ್ತಕರ ಸಂಘದ ಅಧ್ಯಕ್ಷ ಎಂ.ಯು. ಮುನೀರ್ ವಹಿಸಿದ್ದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶೀಬಾ, ಚೆಶೈರ್ ಹೋಂ ಮುಖ್ಯೋಪಾಧ್ಯಾಯ ಶಿವರಾಜ್, ವರ್ತಕರ ಸಂಘದ ಖಜಾಂಚಿ ಅಬೂಬಕರ್, ಉಪಾಧ್ಯಕ್ಷರಾದ ಟಿ.ಜಿ. ವಿಜೇಶ್ ಹಾಗೂ ಮೈಕಲ್, ಪ್ರಧಾನ ಕಾರ್ಯದರ್ಶಿ ಶಮೀರ್, ಕಾರ್ಯದರ್ಶಿಗಳಾದ ಫೈಜಲ್, ಎಚ್.ಡಿ.ಅಯ್ಯಪ್ಪ, ಸಲಹೆಗಾರ ಪುತ್ತಂ ಪ್ರದೀಪ್ ಇತರರು ಇದ್ದರು.
ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಸಿಗಳನ್ನು ನೆಟ್ಟು ಅವುಗಳ ಸಂರಕ್ಷಣೆಯ ಸಂಕಲ್ಪ ಮಾಡಲಾಯಿತು.