ಸೋಮವಾರಪೇಟೆ ತಾನ್ಯಾ ಮುರಳೀಧರ್ ಬೆಂಗಳೂರಿನಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಗೌರವ ರಕ್ಷೆ ಸಲ್ಲಿಸಿದ ರಾಷ್ಟ್ರೀಯ ಸೇವಾದಳ ತಂಡದಲ್ಲಿರುವುದು.(ಮುಂದಿನ ಮೊದಲ ಲೈನ್‌ನಲ್ಲಿ ಮೂರನೆಯವರು)
ಸೋಮವಾರಪೇಟೆ: ಬೆಂಗಳೂರು ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಗೌರವ ರಕ್ಷೆ ಸಲ್ಲಿಸಿದ ಪರೇಡ್‌ನಲ್ಲಿ ಸೋಮವಾರಪೇಟೆ ನಿವಾಸಿ ತಾನ್ಯಾ ಮುರಳೀಧರ್ ರಾಜ್ಯ ರಾಷ್ಟ್ರೀಯ ಸೇವಾದಳ ತಂಡದೊಂದಿಗೆ ಪಾಲ್ಗೊಂಡಿದ್ದರು. ಪರೇಡ್‌ನಲ್ಲಿ ತಂಡ ಪ್ರಥಮ ಬಹುಮಾನಕ್ಕೂ ಭಾಜನವಾಗಿದೆ. ಅವರು ಬಿಎಸ್‌ಸಿ ಫಾರೆಸ್ಟ್ ಸೈನ್ಸ್ ವಿದ್ಯಾರ್ಥಿನಿಯಾಗಿದ್ದಾರೆ.