ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ವತಿಯಿಂದ ಲೀಡಿಂಗ್ ಎಡ್ಜ್ ಅಡ್ವರ್ಟೈಸಿಂಗ್ ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ನಡೆದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಬಹುಮಾನ ವಿಜೇತ ಮಕ್ಕಳು. ಉ.ರಾ. ನಾಗೇಶ್, ಕೆ.ಬಿ. ಗೌರಿ, ಚಿದಾನಂದ, ವಿ.ವಿ. ಶಿವಪ್ಪ ಇದ್ದರು.
ಚಿತ್ರಕಲೆ ಅಂದರೆ ಕೇವಲ ಗೆರೆ ಎಳೆಯುವುದು ಅಲ್ಲ, ಅದು ನಮ್ಮ ಮನಸ್ಸಿನ ಮಾತು. ಮನುಷ್ಯನ ಮೊಟ್ಟ ಮೊದಲ ಭಾಷೆಯೇ ಚಿತ್ರಕಲೆ ಎಂದು ನಿವೃತ್ತ ಚಿತ್ರಕಲಾ ಶಿP್ಷÀಕ ಉ.ರಾ. ನಾಗೇಶ್ ಹೇಳಿದರು. ವಿಶ್ವ ಪರಿಸರ ದಿನದ ಅಂಗವಾಗಿ ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ವತಿಯಿಂದ ಲೀಡಿಂಗ್ ಎಡ್ಜ್ ಅಡ್ವರ್ಟೈಸಿಂಗ್ ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ನಗರದ ಜೂನಿಯರ್ ಕಾಲೇಜಿನ ಫೀ. ಮಾರ್ಷಲï ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ಶುಕ್ರ‍್ರವಾರ ನಡೆದ ಚಿತ್ರ ಬಿಡಿಸುವ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೋಪಗೊಂಡಾಗ ಖಾಲಿ ಹಾಳೆಯಲ್ಲಿ ನಮಗೆ ತೋಚಿದಂತೆ ರೇಖೆ ಎಳೆಯುತ್ತೇವೆ. ಆ ರೇಖೆಗಳು ಆಕಾರವಾಗುತ್ತವೆ. ಆಕಾರಗಳನ್ನು ಜೋಡಿಸಿದಾಗ ಆಕೃತಿಗಳಾಗುತ್ತವೆ. ಆಕೃತಿಗಳನ್ನು ಸೃಷ್ಟಿಸುತ್ತಾ ಹೋದಾಗ ವಿನ್ಯಾಸ ಮೂಡುತ್ತದೆ. ಭಾವನೆಗಳನ್ನು ಹೊರಹಾಕಲು ಚಿತ್ರಕಲೆ ಸಹಕಾರಿಯಾಗುತ್ತದೆ.
ಬಹಳಷ್ಟು ಜನ ನನಗೆ ಚಿತ್ರ ಬಿಡಿಸಲು ಬರಲ್ಲ ಎಂದು ಹೇಳುತ್ತಾರೆ. ಇದು ದೊಡ್ಡ ಸುಳ್ಳು. 3 ವರ್ಷದ ಮಗು ಗೋಡೆಯ ಮೇಲೆ ಗೀಚಿದ ಗೆರೆಯೂ ಒಂದು ಚಿತ್ರವೇ. ಪ್ರತಿ ಮಗುವೂ ಕಲಾವಿದನಾಗಿಯೇ ಹುಟ್ಟುತ್ತದೆ. ಚಿತ್ರಕಲೆಗೆ ದುಬಾರಿ ಬಣ್ಣ ಬೇಕಿಲ್ಲ. ಒಂದು ಪೆನ್ಸಿಲï, ಒಂದು ಹಾಳೆ ಸಾಕು. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಗೀಚಿ. ಅದು ಕೆಟ್ಟದಾಗಿದ್ದರೂ ಪರವಾಗಿಲ್ಲ. ಏಕೆಂದರೆ ಅದು ನಿಮ್ಮದು ಎಂದರಲ್ಲದೆ ವಿಜಯವಾಣಿ ಪತ್ರಿಕೆ ಸುದ್ದಿಯ ಜತೆಗೆ ಮಕ್ಕಳ ಪ್ರತಿಭೆ ಹೊರತರಲು ಚಿತ್ರಕಲಾ ಸ್ಪರ್ಧೆ ಆಯೋಜಿಸಿ, ಮಕ್ಕಳಿಗೆ ಶಿP್ಷÀಣ ನೀಡುತ್ತಿದೆ, ಸ್ಫೂರ್ತಿ ತುಂಬುತ್ತಿದೆ. ಚಿತ್ರಕಲೆ ನಮ್ಮನ್ನು ಪರಿಸರದೊಂದಿಗೆ ಬೆಸೆಯುವ ಕೆಲಸ ಮಾಡುತ್ತದೆ. ಚಿತ್ರಕಲೆ ಒಂದು ಸೃಜನಶೀಲ ಶಿP್ಷÀಣ. ಈ ಚಿತ್ರಕಲಾ ಸ್ಪರ್ಧೆ ಪರೋP್ಷÀವಾಗಿ ನಮ್ಮಲ್ಲಿ ಚೈತನ್ಯ ತುಂಬುತ್ತದೆ.
ಚಿತ್ರಕಲೆ ಮಕ್ಕಳಿಗೆ ಬೆಳಕು ಕೊಡುತ್ತದೆ. ಅಂತಹ ಬೆಳಕನ್ನು ಕೊಡುವ ಕೆಲಸವನ್ನು ಪತ್ರಿಕೆ ವತಿಯಿಂದ ಮಾಡಲಾಗಿದೆ. ಮಗುವಿನ ಬೆಳವಣಿಗೆ ಹಂತ ಚಿತ್ರಕಲೆಯಿಂದ ಕಾಣುತ್ತದೆ. ಚಿತ್ರಕಲಾವಿದರು ಸೂಕ್ಷö್ಮತೆಗಳನ್ನು ಗಮನಿಸಬೇಕು. ಜತೆಗೆ ಚಿತ್ರ ಬಿಡಿಸುವ ಮೊದಲು ನಮಗೆ ಬಣ್ಣಗಳ ಅರಿವಿರಬೇಕು. ಮಕ್ಕಳು ಬಿಡುವಿನ ವೇಳೆ ಚಿತ್ರಾಭ್ಯಾಸ ಮಾಡಬೇಕು. ಇದಕ್ಕೆ ಪಾಲಕರು ಪ್ರೋತ್ಸಾಹ ನೀಡುವಂತಾಗಬೇಕು.
ಚಿತ್ರ ಬಿಡಿಸುವುದು ಒಂದು ಕಲೆ ಮಾತ್ರವಲ್ಲ, ವಿಜ್ಞಾನವೂ ಹೌದು, ಗಣಿತವೂ ಹೌದು. ಒಂದು ಬಣ್ಣ ಹತ್ತಿರದಿಂದ ಹೇಗೆ ಕಾಣುತ್ತದೆ ? ದೂರದಿಂದ ಹೇಗೆ ಕಾಣುತ್ತದೆ ? ತುಂಬಿದ ಕೊಡ ತಲೆಯ ಮೇಲಿಟ್ಟುಕೊಂಡ ಮಹಿಳೆಯ ಚಿತ್ರ ಬಿಡಿಸಿದರೆ ಆ ಕೊಡದಲ್ಲಿ ನೀರು ಇರುವುದು ಗೊತ್ತಾಗುವುದು ಹೇಗೆ ಎನ್ನವುದನ್ನು ಚಿತ್ರಿಸಲು ವಿಜ್ಞಾನ ಅನ್ವಯಿಸಬೇಕಾಗುತ್ತದೆ. ಯಾವ ಬಣ್ಣ ಬೇಕಾದರೆ ಯಾವ ಯಾವ ಬಣ್ಣವನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎನ್ನುವುದನ್ನು ಗಣಿತ ಹೇಳಿಕೊಡುತ್ತದೆ ಎಂದು ಹೇಳಿದರು.
ತೀರ್ಪುಗಾರರಾಗಿ ಪಾಲ್ಗೊಂಡಿದ್ದ ಸರ್ಕಾರಿ ಜೂನಿಯರ್ ಕಾಲೇಜಿನ ಉಪನ್ಯಾಸಕಿ ಕೆ.ಬಿ. ಗೌರಿ ಮಾತನಾಡಿ, ಚಿತ್ರಕಲೆ ಸ್ಪರ್ಧೆ ಆಯೋಜಿಸುವ ಸಂದರ್ಭ ಪೋಷಕರು ಮಕ್ಕಳಿಗೆ ಪ್ರೇರಣೆ ನೀಡುವ ಕೆಲಸ ಮಾಡಬೇಕು. ಸ್ಪರ್ಧೆ ಅಂದ ಮೇಲೆ ಸೋಲು ಗೆಲುವು ಸಾಮಾನ್ಯ. ಗೆದ್ದವರು ಬೀಗದೇ ಸೋತವರು ಕುಗ್ಗದೇ ಸಮಾನವಾಗಿ ಸ್ವೀಕರಿಸಬೇಕು. ಆದರೆ, ಇಂದು ಮೊಬೈಲ್ ಗೀಳಿಗೆ ತುತ್ತಾಗಿರುವ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಹಿರಿಯ ಉಪನ್ಯಾಸಕ ಚಿದಾನಂದ, ತೀರ್ಪುಗಾರರಾಗಿ ಪಾಲ್ಗೊಂಡಿದ್ದ ಉಪನ್ಯಾಸಕರು ವಿ.ವಿ. ಶಿವಪ್ಪ ಇದ್ದರು. ಕೇಂದ್ರೀಯ ವಿದ್ಯಾಲಯದ ವೃಷ್ಠಿ ಪ್ರಾರ್ಥಿಸಿದರು.
ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ವತಿಯಿಂದ ಲೀಡಿಂಗ್ ಎಡ್ಜ್ ಅಡ್ವರ್ಟೈಸಿಂಗ್ ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ನಡೆದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಪ್ರಕೃತಿಯಿಂದ ಸ್ಫೂರ್ತಿ ಪಡೆಯೋಣ, ಹವಾಮಾನ ಸಂರಕ್ಷಣೆಗಾಗಿ, ನಮ್ಮೆಲ್ಲರ ಭವಿಷ್ಯಕ್ಕಾಗಿ ಎನ್ನುವ ವಿಷಯಕ್ಕೆ ಸಂಬAಧಿಸಿದAತೆ ಮಕ್ಕಳು ತಮ್ಮ ಕಲ್ಪನೆಯಲ್ಲಿ ಅರಳಿದ ಚಿತ್ರಗಳನ್ನು ಕಾಗದದ ಮೇಲೆ ಮೂಡಿಸಿದರು. ಮಕ್ಕಳ ಚಿತ್ರಗಳಲ್ಲಿ ಪರಿಸರ ಕಾಳಜಿ ಎದ್ದು ಕಾಣುತ್ತಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳು ಬಿಡಿಸಿದ ಎಲ್ಲಾ ಚಿತ್ರಗಳ ಬಗ್ಗೆಯೂ ತೀರ್ಪುಗಾರರು ಮೆಚ್ಚುಗೆ ವ್ಯಕ್ತಪಡಿಸಿದರು. ಅತ್ಯುತ್ತಮವಾದ ಚಿತ್ರಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಲಾಯಿತು. 5ರಿಂದ 7ನೇ ತರಗತಿ ವಿಭಾಗದಲ್ಲಿ ಮದೆನಾಡು ಬಿಜಿಎಸ್ ಪಬ್ಲಿಕ್ ಶಾಲೆಯ ಗಾನವಿ ಬಿ.ಸಿ. ಪ್ರಥಮ, ಸೆಂಟ್ ಆನ್ಸ್ ಶಾಲೆಯ ಅಬೆಲ್ ವರ್ಗೀಸ್ ದ್ವಿತೀಯ ಹಾಗೂ ಮಡಿಕೇರಿ ಪಿಎಂಶ್ರೀ ಶಾಲೆಯ ಶ್ರಾವಣಿ ತೃತೀಯ ಸ್ಥಾನ ಗಳಿಸಿದರು. 8ರಿಂದ 10ನೇ ತರಗತಿ ವಿಭಾಗದಲ್ಲಿ ವಿರಾಜಪೇಟೆ ಕಾವೇರಿ ಶಾಲೆಯ ಟಿ.ಎಸ್. ಸಾನ್ವಿ ಪ್ರಥಮ, ಮಡಿಕೇರಿ ಸೆಂಟ್ ಮೈಕೆಲ್ ಶಾಲೆಯ ಪಿ.ಎನ್. ಸಚಿನ್ ದ್ವಿತೀಯ ಹಾಗೂ ಇದೇ ಶಾಲೆಯ ಎಂ.ಎA. ಹಿತನ್ ತೃತೀಯ ಬಹುಮಾನ ಪಡೆದುಕೊಂಡರು. ಎರಡೂ ವಿಭಾಗದಲ್ಲೂ ಪ್ರಥಮ 1,500 ರೂ., ದ್ವಿತೀಯ 1,000 ರೂ. ಹಾಗೂ ತೃತೀಯ 500 ರೂ. ನಗದು ಬಹುಮಾನ ನೀಡಲಾಯಿತು.
"
ಚಿತ್ರ ರಚನೆ ಎನ್ನುವುದು ಮನಸ್ಸಿನ ಭಾವನೆಗಳ ಅಭಿವ್ಯಕ್ತಿಗೆ ಇರುವ ಒಂದು ಮಾಧ್ಯಮ. ಪರಿಸರದ ಬಗೆಗಿನ ತಮ್ಮ ಕಾಳಜಿಯನ್ನು ಮಕ್ಕಳು ಈ ಸ್ಪರ್ಧೆ ಮೂಲಕ ವಿವಿಧ ರೀತಿಯಲ್ಲಿ ಹೊರ ಹಾಕಿದ್ದಾರೆ. ವಿಜಯವಾಣಿ ದಿನಪತ್ರಿಕೆ ಸುದ್ದಿ ಪ್ರಕಟಣೆ ಜತೆಗೆ ಇಂಥ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಮಾದರಿ ಕಾರ್ಯ. ಜಿಲ್ಲೆಯ ಪ್ರತಿಭೆಗಳನ್ನು ಗುರುತಿಸಲು ಕೂಡ ಈ ಕಾರ್ಯಕ್ರಮ ನೆರವಾಗಿದೆ.
— ಎಡಿಕೇರಿ ಪ್ರಸನ್ನ, ನಿರ್ದೇಶಕ, ಲೀಡಿಂಗ್ ಎಡ್ಜ್ ಅಡ್ವರ್ಟೈಸಿಂಗ್ ಇಂಡಿಯಾ ಲಿಮಿಟೆಡ್