ಮಹಿಳಾ ಗ್ರಾಮ ಸಭೆಯಲ್ಲಿ ಪಾಲ್ಗೊಂಡ ಮಹಿಳೆಯರು. 
ಕೊಡಗು

ಮಹಿಳಾ ಗ್ರಾಮ ಸಭೆ, ಸಂತೆ ಮೇಳ

ಶನಿವಾರಸಂತೆ: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚೆಗೆ ಮಹಿಳಾ ಗ್ರಾಮ ಸಭೆ ಹಾಗೂ ಸಂತೆ ಮೇಳ ಜರುಗಿತು.
ಪಂಚಾಯಿತಿ ಅವರಣದಲ್ಲಿ ಏರ್ಪಡಿಸಿದ ಮಹಿಳಾ ಗ್ರಾಮ ಸಭೆಯಲ್ಲಿ ಪಂಚಾಯಿತಿ ವ್ಯಾಪ್ತಿಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಮೂಲಸೌಲಭ್ಯಗಳ ಕುರಿತು ಅಹವಾಲು ಸಲ್ಲಿಸಿದರು.
ಸಭೆಯ ನೋಡಲ್ ಆದಿಕಾರಿಯಾಗಿ ಭಾಗವಹಿಸಿ ಮಾತನಾಡಿದ ಕೊಡ್ಲಿಪೇಟೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಬ್ದುಲ್ ರಬ್ಬ್ ಅವರು ದೇಶ ಮತ್ತು ರಾಷ್ಟ್ರದಲ್ಲಿ ಎಲ್ಲ ರೀತಿಯ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರ ಪ್ರಾತಿನಿತ್ಯ ಇದೆ. ಮಹಿಳೆಯರು ಜಾಗ್ರತ ರಾಗಿದ್ದಾರೆ. ಮಹಿಳೆಯರ ಸಮಸ್ಯೆಗಳನ್ನು ಮಾತ್ರ ಆಲಿಸಲು ಮಹಿಳಾ ಗ್ರಾಮ ಸಭೆಗಳನ್ನು ಆಯೋಜಿಸಲಾಗುತ್ತದೆ ಎಂದು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಲು ಸಲಹೇ ನೀಡಿದರು.
ಸಭೆಯ ನಂತರ ಸಂಜಿವಿನಿ ಮಹಿಳಾ ಸ್ವಸಹಾಯ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಸಂತೆಮೇಳವನ್ನು ಜನಪ್ರತಿನಿದಿಗಳು ಟೇಪ್ ಕತ್ತರಿಸುವ ಮೂಲಕ ಉದ್ಬಾಟಿಸಿದರು. ಒಕ್ಕೂಟದ ಮಹಿಳಾ ಸದಸ್ಯರು ಮನೆಯಲ್ಲಿ ಸಿದ್ಧಪಡಿಸಿದಂತಹ ತಿಂಡಿ ತಿನಿಸುಗಳು ಹಾಗೂ ಹಣ್ಣು ತರಕಾರಿಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಸಂಘದ ಇತರ ಮಹಿಳಾ ಸದಸ್ಯರು,ಸ್ಥಳೀಯ ನಿವಾಸಿಗಳು ,ಪಂಚಾಯಿತಿ ಜನಪ್ರತಿನಿಧಿಗಳು ಖರೀದಿಸಿದರು.
ಒಕ್ಕೂಟದ ತಾಲೂಕು ವ್ಯವಸ್ಥಾಪಕ ಜಯಚಂದ್ರ, ವಲಯ ಮೆಲ್ವಿಚಾರಕಿ ಪದ್ಮಶ್ರೀ, ಸ್ಥಳೀಯ ಅಧ್ಯಕ್ಷರಾದ ಸರೋಜಮ್ಮ ,ಗ್ರಾ.ಪಂ.ಉಪಾಧ್ಯಕ್ಷೆ ದ್ರಾಕ್ಷಾಯಿಣಿ, ಸದಸ್ಯರಾದ ಹನೀಫ್ ,ದಿನೇಶ್‌ಕುಮಾರ್ ,ದೊಡ್ಡಯ್ಯ ,ಮೊಕ್ಷಿತ್‌ರಾಜ್ ,ರೇಣುಕಾ ,ವಿನೋದಾ,ಪಂಚಾಯತ್ ಅಭಿವೃದ್ಧಿ ಆದಿಕಾರಿ ಎಚ್.ಎಸ್ ಹರೀಶ್, ಪ್ರಮುಖರಾದ ಶ್ವೇತಾ ,ಹರಿಣಾಕ್ಷಿ ,ಜ್ಯೋತಿ ,ಶ್ವೆತಾ ಪ್ರದೀಪ್ ಇದ್ದರು.