ಮೂರ್ನಾಡುವಿನ ಪದವಿ ಪೂರ್ವ ಕಾಲೇಜಿನಲ್ಲಿ ಓಜಸ್ವಿ ಫೌಂಡೇಶನ್ ವತಿಯಿಂದ ನಡೆದ ಪ್ರೇರಣಾತ್ಮಕ ಕಾರ್ಯಾಗಾರದಲ್ಲಿ ಓಜಸ್ವಿ ಫೌಂಡೇಶನ್ ಟ್ರಸ್ಟಿ ಹಾಗೂ ಜಸ್ಟ್ ರೋಬಾಟಿಕ್ಸ್ ಸಂಸ್ಥೆಯ ಸಿಇಒ ಸಿ.ಎ. ಬ್ರಿಜೇಶ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. 
ಕೊಡಗು

ಓಜಸ್ವಿ ಪ್ರೇರಣಾತ್ಮಕ ಕಾರ್ಯಾಗಾರ

ಸುನಿಲ್ ಪೊನ್ನೇಟಿ
ಮಡಿಕೇರಿ
ಇಲ್ಲಿಗೆ ಸಮೀಪದ ಮೂರ್ನಾಡುವಿನ ಪದವಿ ಪೂರ್ವ ಕಾಲೇಜಿನಲ್ಲಿ ಓಜಸ್ವಿ ಫೌಂಡೇಶನ್ ವತಿಯಿಂದ 2026-27ರ ಶೈಕ್ಷಣಿಕ ಸಾಲಿನ ಓಜಸ್ವಿ ಚೈತನ್ಯ ಕಾರ್ಯಕ್ರಮ ಸರಣಿಯ ಭಾಗವಾಗಿ ಪ್ರೌಢಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ ಪ್ರೇರಣಾತ್ಮಕ ಕಾರ್ಯಾಗಾರವನ್ನು ಈಚೆಗೆ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ಕೊಡಗು ಗೌಡ ಸಮಾಜದ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯುಲ್ಡ್ ಎ ರೆಸ್ಯೂಮ್ ದಟ್ ಗೆಟ್ಸ್ ಯು ಅಹೀಡ್ ಎನ್ನುವ ವಿಷಯದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಓಜಸ್ವಿ ಫೌಂಡೇಶನ್ ಟ್ರಸ್ಟಿ ಹಾಗೂ ಜಸ್ಟ್ ರೋಬಾಟಿಕ್ಸ್ ಸಂಸ್ಥೆಯ ಸಿಇಒ ಸಿ.ಎ. ಬ್ರಿಜೇಶ್ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳು, ಸಾಧನೆಗಳು ಮತ್ತು ಭವಿಷ್ಯದ ಗುರಿಗಳನ್ನು ಪರಿಣಾಮಕಾರಿಯಾಗಿ ರೆಸ್ಯೂಮ್‌ನಲ್ಲಿ ರೂಪಿಸುವ ಕುರಿತು ಮಾಹಿತಿ ಕೊಟ್ಟರು.
ಮೋಟಿವೇಷನ್ ಮತ್ತು ಗೋಲ್ ಸೆಟ್ಟಿಂಗ್ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಫೌಂಡೇಶನ್‌ನ ಟ್ರಸ್ಟಿ ಡಾ. ಪಿ.ಸಿ. ಕವಿತಾ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸುವುದು, ಸ್ಪಷ್ಟ ಗುರಿ ನಿರ್ಧಾರ ಹಾಗೂ ಭವಿಷ್ಯದ ದೃಷ್ಟಿಕೋನ ರೂಪಿಸಿಕೊಳ್ಳುವ ಬಗ್ಗೆ ಮಾರ್ಗದರ್ಶನ ಮಾಡಿದರು.ನಿ
ಈ ಸಂದರ್ಭ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ದೇವಕಿ ಮತ್ತು ಮುಖ್ಯೋಪಾಧ್ಯಾಯ ಪ್ರಶಾಂತ್ ಓಜಸ್ವಿ ಫೌಂಡೇಶನ್ ಮತ್ತು ಪ್ರಾಯೋಜಕರ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ಆಯೋಜಕರು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜಿನ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.