ವಿದ್ಯುತ್ ತಂತಿ ಮೇಲೆ ಮರದ ರೆಂಬೆ ಬಿದ್ದಿರುವುದು
ಕೊಡಗಿನಲ್ಲಿ ಮಳೆಗಾಲ ಸುಮಾರು ಒಂದು ತಿಂಗಳು ತಡವಾಗಿ ಆರಂಭವಾದರೂ ಸಂಬAಧಿಸಿದ ಇಲಾಖೆಗಳ ಜಡತ್ವದಿಂದಾಗಿ ಒಂದೊAದಾಗಿ ಸಮಸ್ಯೆಗಳು ಅನಾವರಣಗೊಳ್ಳುತ್ತಿವೆ. ಅಲಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕೆಲವು ಪ್ರದೇಶಗಳಲ್ಲಿ 5 ದಿನವಾದರೂ ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ. ರಸ್ತೆಗಳ ನಿರ್ವಹಣೆಯಲ್ಲಿ ತಾತ್ಸರ ತೋರಿಸಿದರ ಪರಿಣಾಮವಾಗಿ ಒಂದು ಹಂತಕ್ಕೆ ಸರಿಯಿದ್ದ ರಸ್ತೆಗಳೂ ಈಗ ಹಾಳಾಗಿದ್ದು, ವಾಹನ ಸಂಚಾರಕ್ಕೆ ಸಮಸ್ಯೆ ಆಗಿದೆ.
ಸಾಮಾನ್ಯವಾಗಿ ಜೂನ್‌ನಲ್ಲಿ ಮಳೆಗಾಲ ಶುರುವಾಗುವ ವಾಡಿಕೆ ಇರುವುದರಿಂದ ಏಪ್ರಿಲ್ ಅಂತ್ಯ ಮತ್ತು ಮೇ ತಿಂಗಳಿನಲ್ಲಿ ವಿವಿಧ ಇಲಾಖೆಗಳು ಮಳೆಗಾಲಕ್ಕೆ ಸಂಬAಧಿಸಿದ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಕೊಡಗಿನಲ್ಲಿ ಹಿಂದಿನಿAದಲೂ ನಡೆದುಕೊಂಡುಬAದಿದೆ. ಆದರೆ ಈ ವರ್ಷ ಅಂಥ ಯಾವುದೇ ಸಿದ್ಧತೆಗಳನ್ನು ನಡೆಸಿದಂತೆ ಕಂಡುಬರುತ್ತಿಲ್ಲ. ಜೂನ್ ಒಂದು ತಿಂಗಳು ಕಾಲ ಬಿಸಿಲಿನ ವಾತಾವರಣ ಇದ್ದರೂ ಈಗ ಮಳೆ ಶುರುವಾಗುತ್ತಿದಂತೆಯೇ ಒಂದೊAದಾಗಿ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿದೆ.
ಮಳೆಗಾಲಕ್ಕೂ ಮುಂಚಿತವಾಗಿ ರಸ್ತೆ ಬದಿಯಲ್ಲಿ ಚರಂಡಿಗಳ ನಿರ್ವಹಣೆ, ಹೊಸ ಚರಂಡಿಗಳನ್ನು ಮಾಡುವುದಲ್ಲದೆ, ರಸ್ತೆಗೆ ಬಾಗಿಕೊಂಡಿರುವ ಮರದ ರೆಂಬೆ, ಕೊಂಬೆಗಳನ್ನು ಕತ್ತರಿಸುವ ಮೂಲಕ ಮಳೆಗಾಲದಲ್ಲಿ ಸಂಭವಿಸಬಹುದಾದ ಅಪಾಯಗಳನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತದೆ. ಆದರೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಈ ಬಾರಿ ಅಂಥ ಯಾವುದೇ ಕೆಲಸ ನಡೆದಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ಸೂಕ್ತ ಚರಂಡಿ ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಮಳೆಗಾಲ ಮುಗಿಯುವುದರೊಳಗೆ ಈ ರಸ್ತೆಗಳು ಹಾಳಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಚಿಕ್ಕ ಮಳೆ, ಗಾಳಿಗೂ ಅಲ್ಲಲ್ಲಿ ಮರದ ರೆಂಬೆಗಳು ಮುರಿದು ರಸ್ತೆ ಮೇಲೆ ಬೀಳುವುದು ಈಗ ಸಾಮಾನ್ಯವಾಗಿದೆ. ಮುಖ್ಯವಾಗಿ ಕುಶಾಲನಗರ-ಮಡಿಕೇರಿ, ಮಡಿಕೇರಿ-ಚೆಟ್ಟಳ್ಳಿ ಮಾರ್ಗದಲ್ಲಿ ಕಳೆದ ಒಂದು ವಾರದಿಂದ ಈಚೆಗೆ ಅಲ್ಲಲ್ಲಿ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ವಿರಾಜಪೇಟೆ ಬಳಿ ಸ್ಕೂಟರ್ ಚಾಲಿಸುತ್ತಿದ್ದ ಮಹಿಳೆಯೊಬ್ಬರ ಮೇಲೆಯೇ ಮರ ಬಿದ್ದಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆಗಾಲಕ್ಕೂ ಮೊದಲು ರಸ್ತೆ ಬದಿಯ ಮರ, ಮರದ ರೆಂಬೆಗಳನ್ನು ಸವರಿದ್ದರೆ ಇಂಥ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ.
ವಿದ್ಯುತ್ ಕಡಿತದ ಸಮಸ್ಯೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಈಗ ಕಂಡು ಬರುತ್ತಿದೆ. ಮಳೆಗಾಲದ ನಿರ್ವಹಣೆಯ ನೆಪ ಹೇಳಿ ಬೇಸಿಗೆಯಲ್ಲಿ ಸೆಸ್ಕ್ ಆಗಾಗ್ಗೆ ದಿನಪೂರ್ತಿ ವಿದ್ಯುತ್ ಕಡಿತ ಮಾಡುತ್ತಿತ್ತು. ಆದರೆ ಈಗ ಸಾಧಾರಣ ಮಳೆ ಬರುತ್ತಿದ್ದಂತೆಯೇ ಜಿಲ್ಲೆಯ ಅಲ್ಲಲ್ಲಿ ವಿದ್ಯುತ್ ಸಮಸ್ಯೆ ಕಂಡುಬರುತ್ತಿದೆ. ಭಾಗಮಂಡಲ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ 5 ದಿವಸಗಳಿಂದ ವಿದ್ಯುತ್ ಸಂಪರ್ಕ ಕೈಕೊಟ್ಟಿರುವ ಬಗ್ಗೆ ಸ್ಥಳೀಯರು ದೂರಿಕೊಂಡಿದ್ದಾರೆ. ವಿರಾಜಪೇಟೆ ಸಮೀಪದ ಕೆಲವು ಗ್ರಾಮಗಳಲ್ಲೂ ಇದೇ ಪರಿಸ್ಥಿತಿ ಇರುವ ಬಗ್ಗೆ ಅಲ್ಲಿಯ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಪೊನ್ನಂಪೇಟೆ ತಾಲೂಕಿನ ಕೆಲವ ಭಾಗಗಳಲ್ಲೂ ವಿದ್ಯುತ್ ಕಣ್ಣಾಮುಚ್ಚಾಲೆ ನಡೆಯುತ್ತಿದೆ.
ಕಳೆದ ವರ್ಷದ ಮಳೆಗಾಲದಲ್ಲಿ ಗುಂಡಿಬಿದ್ದಿದ್ದ ರಸ್ತೆಗಳನ್ನೇ ಮುಚ್ಚದಿರುವ ಕಾರಣ ಅಂಥ ರಸ್ತೆಗಳು ಈಗ ಕೆಸರಿನ ಗದ್ದೆಯಂತಾಗಿವೆ. ಕೆಲವು ಕಡೆ ಅಲ್ಲಲ್ಲಿ ತಾತ್ಕಾಲಿಕವಾಗಿ ನಡೆದಿದ್ದ ಗುಂಡಿ ಮುಚ್ಚುವ ಕಾಮಗಾರಿಯ ಬಣ್ಣ ಈಗಿನ ಮಳೆಗೆ ಬಯಲಾಗಿದ್ದು ಸಾರ್ವಜನಿಕರು ವ್ಯವಸ್ಥೆಗೆ ಹಿಡಿಶಾಪ ಹಾಕಿಕೊಂಡು ತಿರುಗುವಂತಾಗಿದೆ. ಕೆಲವು ಕಡೆ ನಡೆದಿರುವ ಅರ್ಧಂಬರ್ಧ ರಸ್ತೆ, ಸೇತುವೆ ಕಾಮಗಾರಿಗಳಿಂದಾಗಿ ವಾಹನ ಸಂಚಾರ ಅಸಾಧ್ಯವಾಗಿದೆ. ಇದೀಗ ಮಳೆ ಸರಿಯಾಗಿ ಶುರುವಾಗಿ ಒಂದು ವಾರದಲ್ಲೇ ಇಂಥ ಪರಿಸ್ಥಿತಿ ಆದರೆ ಮಳೆ ಹೀಗೆಯೇ ಮುಂದುವರಿದರೆ ಮುಂದೆ ಹೇಗೆ ಎನ್ನುವ ಚಿಂತೆಯಲ್ಲಿ ಸಾರ್ವಜನಿಕರು ಇದ್ದಾರೆ.
"
ಮಳೆ ಶುರುವಾದ ಕೂಡಲೇ ಭಾಗಮಂಡಲದಲ್ಲಿ ವಿದ್ಯುತ್ ಕಡಿತವಾಗುತ್ತದೆ. 5 ದಿನಗಳಿಂದ ಇಲ್ಲಿ ಕರೆಂಟ್ ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಆದಷ್ಟು ಶೀಘ್ರ ಕುಂದಚೇರಿ ಗ್ರಾಮದಲ್ಲಿ ಪವರ್ ಸ್ಟೇಷನ್ ಆರಂಭಿಸಿದರೆ ಇಲ್ಲಿಯ ಈ ಸಮಸ್ಯೆ ಪರಿಹಾರ ಆಗುತ್ತದೆ. ಕುಂದಚೇರಿ ಪವರ್ ಸಟೇಷನ್‌ಗೆ ಸರ್ವೇ ಮಾಡಿ ಮೂರು ವರ್ಷ ಆದರೂ ಅಲ್ಲಿ ಯಾವುದೇ ಕಾಮಗಾರಿ ಶುರುವಾಗಿಲ್ಲ. ಕುಂದಚೇರಿಯಲ್ಲಿ ಪವರ್ ಸ್ಟೇಷನ್ ಬಂದರೆ ಭಾಗಮಂಡಲ, ಅಯ್ಯಂಗೇರಿ, ಕುಂದಚೇರಿ, ಚೇರಂಬಾಣೆ ಗ್ರಾಮ ಪಂಚಾಯಿತಿಗಳ ಜನರಿಗೆ ವಿದ್ಯುತ್ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
— ಕಾಳನ ರವಿ, ಮಾಜಿ ಅಧ್ಯಕ್ಷ, ಗ್ರಾಮ ಪಂಚಾಯಿತಿ, ಭಾಗಮಂಡಲ
"
ಮಳೆಗಾಲಕ್ಕೆ ಮೊದಲು ಮಾಡಬೇಕಾದ ಯಾವುದೇ ಕೆಲಸವನ್ನು ಸಂಬAಧಿಸಿದ ಇಲಾಖೆಗಳು ಮಾಡಲೇ ಇಲ್ಲ. ಮಳೆ ಶುರುವಾಗಲು ತಡವಾದಾಗಾಲೂ ಎಚ್ಚೆತ್ತುಕೊಂಡು ನಿರ್ವಹಣಾ ಕಾಮಗಾರಿಗಳನ್ನು ನಡೆಸಬೇಕಿತ್ತು. ರಸ್ತೆ ಬದಿಯ ಚರಂಡಿಗಳಲ್ಲಿ ಶುಚಿಗೊಳಿಸದ ಕಾರಣ ರಸ್ತೆ ಮೇಲೆಲ್ಲಾ ನೀರು ಹರಿಯುತ್ತಿದೆ. ಇದರಿಂದ ಈಗ ರಸ್ತೆಯೇ ಹಾಳಾಗುತ್ತಿದೆ. ಮರಗಳ ರೆಂಬೆ ಕತ್ತರಿಸಿರುವುದರಿಂದ ಚಿಕ್ಕ ಮಳೆ-ಗಾಳಿಗೂ ರಸ್ತೆ ಮೇಲೆ ಮರ ಬಿದ್ದು ಸಾಂಚಾರಕ್ಕೆ ಸಮಸ್ಯೆ ಆಗುತ್ತಿದೆ.
— ಶ್ರೀನಾಥ್ ನಾಯಕ್, ಭಾಗಮಂಡಲ
"
ಪಂಚಾಯತ್ ರಾಜ್ ಎಂಜಿನಿಯರಿAಗ್ ವಿಭಾಗಕ್ಕೆ ಸರ್ಕಾರದಿಂದ ಬಿಡುಗಡೆ ಮಾಡಿರುವ ಹಣವನ್ನು ಸಮರ್ಪಕವಾಗಿ ಖರ್ಚು ಮಾಡಬೇಕು. ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಗುಂಡಿಬಿದ್ದ ರಸ್ತೆಗಳನ್ನು ಮುಚ್ಚಬೇಕು. ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು. ಮಳೆಗಾಲದ ಸಂದರ್ಭ ಜನಸಾಮಾನ್ಯರಿಗೆ ತೊಂದರೆ ಆಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
— ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ
"
ಮಳೆಗಾಲದಲ್ಲಿ ಹೆದ್ದಾರಿ ಬದಿ ಬೀಳುವ ಮರವನ್ನು ತೆರವುಗೊಳಿಸಬೇಕು. ಬೀಳುವ ಮರದ ಕೊಂಬೆ ಕಡಿಯುವಂತಾಗಬೇಕು. ವಿದ್ಯುತ್ ಮಾರ್ಗಕ್ಕೆ ಮರದ ಕೊಂಬೆಗಳು ಬೀಳದಂತೆ ಕ್ರಮವಹಿಸಬೇಕು. ಗ್ರಾಮೀಣಾಭಿವೃದ್ಧಿ, ಸೆಸ್ಕ್ ಮತ್ತು ಅರಣ್ಯ ಮತ್ತಿತರ ಇಲಾಖೆ ಸಮನ್ವಯತೆ ಕಾರ್ಯನಿರ್ವಹಿಸಬೇಕು. ಕುಡಿಯುವ ನೀರು ಮತ್ತು ಸೆಸ್ಕ್ ವಿಭಾಗದ ಎಂಜಿನಿಯರ್‌ಗಳು ತಂಡವಾಗಿ ಕಾರ್ಯನಿರ್ವಹಿಸಬೇಕು. ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಗುಂಡಿಬಿದ್ದ ರಸ್ತೆಗಳಿಗೆ ವೆಟ್‌ಮಿಕ್ಸ್ ಅಳವಡಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಯು.ಟಿ. ಖಾದರ್, ಪ್ರಾಕೃತಿಕ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಚಿವ