ಎಸ್.ಜೆ. ಸೋಮಶೇಖರ್, ಕೊಡಗು ಜಿಲ್ಲಾಧಿಕಾರಿ 
ಕೊಡಗು

58 ಸಾವಿರ ಮತದಾರರಿಗೆ ನೊಟೀಸ್

ಮಡಿಕೇರಿ
ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯ ಭರದಿಂದ ಸಾಗುತ್ತಿದ್ದು, ಲೋಪದೋಷ ಮತ್ತು ಮ್ಯಾಪಿಂಗ್ ಆಗದಿರುವ ಒಟ್ಟು 58,893 ಮತದಾರರಿಗೆ ನೊಟೀಸ್ ಜಾರಿಗೊಳಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ತಿಳಿಸಿದ್ದಾರೆ. ಈ ಸಂಬAಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಕಟಿತ ಕರಡು ಮತದಾರರ ಪಟ್ಟಿಯನ್ವಯ, ಈ ಪ್ರಕ್ರಿಯೆಯನ್ನು ವೇಗವಾಗಿ ಪೂರ್ಣಗೊಳಿಸಲು 73 ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಗುರುವಾರದ (ಸೆ.17) ಮಾಹಿತಿ ಪ್ರಕಾರ ಈಗಾಗಲೇ 58,093 ನೊಟೀಸ್‌ಗಳನ್ನು ಮತದಾರರಿಗೆ ತಲುಪಿಸಲಾಗಿದೆ. 26,204 ಮತದಾರರ ವಿಚಾರಣೆಯನ್ನು ಪೂರ್ಣಗೊಳಿಸಲಾಗಿದೆ. ಮಡಿಕೇರಿ ಕ್ಷೇತ್ರದಲ್ಲಿ ಒಟ್ಟು 18,785 ನೊಟೀಸ್‌ಗಳ ಪೈಕಿ 18,264 ನೊಟೀಸ್ ಸಂಬAಧಿಸಿದವರಿಗೆ ತಲುಪಿಸಲಾಗಿದ್ದು, 7,431 ವಿಚಾರಣೆಗಳು ಪೂರ್ಣಗೊಂಡಿವೆ. ವಿರಾಜಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 40,108 ನೊಟೀಸ್‌ಗಳ ಪೈಕಿ 39,829 ನೊಟೀಸ್ ನೀಡಲಾಗಿದ್ದು, 18,773 ವಿಚಾರಣೆ ಮುಕ್ತಾಯಗೊಂಡಿದೆ.
ಮತತಗಟ್ಟೆ ಅಧಿಕಾರಿಗಳು ಮನೆ ಮನೆ ಭೇಟಿ ಗಣತಿ ವೇಳೆ ನಮೂನೆ ಸಲ್ಲಿಸದ, ಮೃತಪಟ್ಟ 13,731, ಶಾಶ್ವತವಾಗಿ ಸ್ಥಳಾಂತರಗೊAಡ 33,381, ಎರಡು ಕಡೆ ಹೆಸರಿರುವ 6,046 ಮತ್ತು ಗೈರುಹಾಜರಾದ 9,580 ಸೇರಿದಂತೆ ಒಟ್ಟು 62,854 ಮತದಾರರನ್ನು ಎಸ್‌ಡಿಡಿಒ ಪಟ್ಟಿಯಲ್ಲಿ ಗುರುತಿಸಲಾಗಿದೆ. ಈ ಪಟ್ಟಿಯನ್ನು ಬಿಎಲ್‌ಒ ಬಳಿ ಹಾಗೂ ಜಿಲ್ಲೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರ ಪರಿಶೀಲನೆಗೆ ಲಭ್ಯಗೊಳಿಸಲಾಗಿದೆ.
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ (ನಮೂನೆ-6), ಹೆಸರು ತೆಗೆದುಹಾಕುವುದು (ನಮೂನೆ-7) ಮತ್ತು ತಿದ್ದುಪಡಿಗಳಿಗೆ (ನಮೂನೆ-8) ಸೆ. 23ರ ವರೆಗೆ ಅವಕಾಶವಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಶನಿವಾರ (ಸೆ.19) ಮತ್ತು ಭಾನುವಾರ (ಸೆ.20) ವಿಶೇಷ ಮತದಾರರ ಅಭಿಯಾನ ನಡೆಯಲಿದೆ. ಸಾರ್ವಜನಿಕರು ಓಟರ್ ಹೆಲ್ಪ್ಲೈನ್ ಆ್ಯಪ್ ಅಥವಾ ಓಟರ್ ಸರ್ವಿಸ್ ಪೋರ್ಟಲ್ ಮೂಲಕವೂ ಆನ್‌ಲೈನ್ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ.