ಮೈಸೂರು-ಬೆಳಗೊಳ- ಕುಶಾಲನಗರ ರೈಲ್ವೇ ಮಾರ್ಗ ನಿರ್ಮಾಣಕ್ಕೆ ಸಂಬAಧಿಸಿದAತೆ ರೈಲ್ವೆ ಮಾರ್ಗ ಹಾದು ಹೋಗಲಿರುವ ಸ್ಥಳದ ಭೂಮಿಯ ಗುಣ ಲಕ್ಷಣಗಳ ಬಗ್ಗೆ ಮಾಹಿತಿ ಕಲೆ ಹಾಕಲು 2022ರ ನ. 8ರಂದು ನಡೆದಿದ್ದ ಸರ್ವೇ ಕಾರ್ಯ 
ಕೊಡಗು

ಕೊಡಗಿಗಿಲ್ಲ ರೈಲು ಸಂಪರ್ಕ ಯೋಜನೆ

ಪ್ರಮುಖ ಮುಖ್ಯಾಂಶಗಳು

  • ರೈಲು ಸಂಪರ್ಕ ಇಲ್ಲದ ದೇಶದ ಏಕೈಕ ಜಿಲ್ಲೆ
  • ಮೈಸೂರು-ಕುಶಾಲನಗರ ರೈಲ್ವೇ ಯೋಜನೆ ರದ್ದು ?
  • 87.2 ಕಿಮೀ ಉದ್ದ 1854.62 ಕೋಟಿ ರೂ. ಅಂದಾಜು ವೆಚ್ಚ
ಮಡಿಕೇರಿ:
ರೈಲ್ವೇ ಸಂಪರ್ಕ ಇಲ್ಲದ ದೇಶದ ಏಕೈಕ ಜಿಲ್ಲೆ ಎನ್ನುವ ಹಣೆಪಟ್ಟಿ ಕೊಡಗಿಗೆ ಶಾಶ್ವತವಾಗಿ ಉಳಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಕೊಡಗಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ ಮೈಸೂರು-ಕುಶಾಲನಗರ ನಡುವಿನ ರೈಲ್ವೆ ಮಾರ್ಗ ನಿರ್ಮಾಣ ಯೋಜನೆ ರದ್ದಾಗಿರುವುದಾಗಿ ರೈಲ್ವೇ ಇಲಾಖೆ ಮೂಲಗಳು ತಿಳಿಸಿವೆ. ಈ ಯೋಜನೆ ಲಾಭದಾಯಕ ಅಲ್ಲ ಎನ್ನುವುದು ಇಲಾಖೆ ಕೊಡುತ್ತಿರುವ ಕಾರಣ. ಮೈಸೂರು-ಬೆಳಗೊಳ- ಕುಶಾಲನಗರ ರೈಲ್ವೇ ಮಾರ್ಗ ಮೈಸೂರು ಜಿಲ್ಲೆಯ ಕೊಪ್ಪ ತನಕದ 87.2 ಕಿ.ಮೀ. ಉದ್ದಕ್ಕೆ ನಿರ್ಮಾಣ ಮಾಡುವ ಸಂಬAಧ ಎಲ್ಲಾ ಪೂರಕ ಕೆಲಸಗಳು ನಡೆದಿದ್ದವು.
ಒಟ್ಟು 1854.62 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಗೆ 2019ರ ಫೆಬ್ರವರಿ 27ರಂದು ರೈಲ್ವೇ ಸಚಿವಾಲಯ ಅನುಮೋದನೆ ಕೊಟ್ಟಿತ್ತು. ನಂತರ 2020ರ ಅಕ್ಟೋಬರ್‌ನಲ್ಲಿ ನೈಋತ್ಯ ರೈಲ್ವೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ನಿರ್ಮಾಣ) ಈ ರೈಲ್ವೇ ಮಾರ್ಗದ ಸರ್ವೆಗೆ ಸೂಚನೆ ನೀಡಿದ್ದರು. 2018-19ರಲ್ಲಿ ರೈಲ್ವೇ ಇಲಾಖೆಯ ಪಿಂಕ್ ಬುಕ್‌ನಲ್ಲಿ ಈ ಯೋಜನೆಯನ್ನು ದಾಖಲಿಸಲಾಗಿತ್ತು. ಉದ್ದೇಶಿತ ರೈಲ್ವೆ ಮಾರ್ಗದ ಸರ್ವೆಗೆ 2021ರ ಆಗಸ್ಟ್ ತಿಂಗಳಲ್ಲಿ ಖಾಸಗಿ ಸಂಸ್ಥೆಯೊAದಕ್ಕೆ ಟೆಂಡರ್ ನೀಡಲಾಗಿತ್ತು.
"

ಸಿ .ಕೆ. ಜಾಫರ್ ಷರೀಫ್ ರೈಲ್ವೇ ಮಂತ್ರಿಯಾಗಿದ್ದಾಗ ಕುಶಾಲನಗರಕ್ಕೆ ರೈಲ್ವೇ ಸಂಪರ್ಕ ಯೋಜನೆ ಜನ್ಮ ತಾಳಿತ್ತು. ಕೆ.ಎಚ್. ಮುನಿಯಪ್ಪ ರೈಲ್ವೇ ಮಂತ್ರಿಯಾಗಿದ್ದಾಗ ಈ ಯೋಜನೆಗೆ ಪೂರಕ ವೇಗ ದೊರೆತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ರಾಜಕೀಯ ಕಾರಣಗಳಿಗೋಸ್ಕರ ಇದು ನೆನೆಗುದಿಗೆ ಬಿದ್ದು ಯೋಜನೆಯೇ ತಳ ಕಂಡಿದೆ. ಪಕ್ಷ ಭೇದವಿರದೇ ಇದಕ್ಕಾಗಿ ಪ್ರಯತ್ನಿಸಿದ್ದಲ್ಲಿ ಈ ಯೋಜನೆ ಕಾರ್ಯಗತವಾಗುತ್ತಿತ್ತು.

"

ಮೈಸೂರು-ಕುಶಾಲನಗರ ರೈಲ್ವೆ ಮಾರ್ಗ ಸೇರಿದಂತೆ ಹಲವು ಯೋಜನೆಗಳಿಗೆ ಅಗತ್ಯವಿರುವ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಕಾರಣ ನೀಡಿ ಯೋಜನೆಯನ್ನು ವಿಳಂಬ ಮಾಡಲಾಗುತ್ತಿದೆ. ಇದರಿಂದಾಗಿಯೇ ಮೈಸೂರು-ಕುಶಾಲನಗರ ರೈಲ್ವೆ ಮಾರ್ಗ ನಿರ್ಮಾಣ ಯೋಜನೆ ಸ್ಥಗಿತಗೊಳ್ಳುವಂತಾಗಿದೆ. ಆದರೆ ಯೊಜನೆ ರದ್ದಾಗಿಲ್ಲ. ರೈಲ್ವೇ ಇಲಾಖೆ ಮಾನದಂಡಗಳ ಪ್ರಕಾರ ಮೈಸೂರು-ಕುಶಾಲನಗರ ರೈಲ್ವೆ ಮಾರ್ಗ ಲಾಭದಾಯಕ ಅಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಇಲ್ಲಿ ಲಾಭಕ್ಕಿಂತ ಸಾಮಾಜಿಕ ದೃಷ್ಟಿಕೋನವೂ ಮುಖ್ಯವಾಗಿದ್ದು ವಿಷಯವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ ಯೋಜನೆಗೆ ಮರುಜೀವ ಕೊಡಲಾಗುವುದು. ಈ ಯೋಜನೆಯಲ್ಲಿ ರೈಲು ಕುಶಾಲನಗರ ತನಕ ಮಾತ್ರ ಬರುವುದರಿಂದ ಕೊಡಗಿನ ಪರಿಸರದ ಮೇಲೆ ಯಾವುದೇ ಹಾನಿ ಆಗುವುದಿಲ್ಲ.

"

ಸೂಕ್ತ ಆದಾಯ ಬರುವುದಿಲ್ಲ ಎನ್ನುವ ಕಾರಣಕ್ಕೆ ಮೈಸೂರು-ಕುಶಾಲನಗರ ರೈಲ್ವೇ ಯೋಜನೆ ರದ್ದಾಗಿದೆ. ರೈಲ್ವೇ ಅಧಿಕಾರಿಗಳೇ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆ ನಡೆಯದ್ದರಿಂದ ಯೋಜನೆ ರದ್ದಾಗಿದೆ ಎನ್ನುವುದು ಸರಿಯಲ್ಲ. 87 ಕಿಮೀ ಉದ್ದದ ಈ ರೈಲ್ವೇ ಯೋಜನೆಗಾಗಿ 1,379 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಈಗಾಗಲೇ ಪೂರ್ಣಗೊಳಿಸಿದೆ.

"

ಮೈಸೂರು-ಕುಶಾಲನಗರ ರೈಲ್ವೇ ಮಾರ್ಗ ನಿರ್ಮಾಣ ಯೋಜನೆ ರದ್ದಾಗಿರುವುದೇ ಉತ್ತಮ. ಈ ಯೋಜನೆಯಿಂದ ಪರಿಸರಕ್ಕೆ ಹಾನಿ ಇಲ್ಲ ಎಂದು ಹೇಳುತ್ತಾರೆ. ಆದರೆ ಕೊಡಗಿನ ಸಾಮಾಜಿಕ ವ್ಯವಸ್ಥೆ ಮೇಲೆ ದೊಡ್ಡ ಪ್ರಮಾಣದಲ್ಲಿ ದುಷ್ಪರಿಣಾಮ ಬೀರಲಿದೆ. ಅಕ್ರಮ ವಲಸಿಗರು ದೊಡ್ಡ ಪ್ರಮಾಣದಲ್ಲಿ ಜಿಲ್ಲೆಗೆ ಬರಲಿದ್ದಾರೆ. ಬಸ್, ಲಾರಿ ಸೇರಿದಂತೆ ರಸ್ತೆ ಸಾರಿಗೆ ವ್ಯವಸ್ಥೆ ಚೆನ್ನಾಗಿದ್ದು, ಎಲ್ಲಾ ಕಡೆಗೂ ಸುಲಭ ಸಂಪರ್ಕ ಇರುವುದರಿಂದ ರೈಲ್ವೇಯಂಥ ದುಬಾರಿ ವೆಚ್ಚದ ಯೋಜನೆ ಕೊಡಗಿಗೆ ಬೇಕಿಲ್ಲ. ಈ ಹಣವನ್ನು ಬೇರೆ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗಿಸಲಿ. ಯೋಜನೆ ಶಾಶ್ವತವಾಗಿ ರದ್ದಾಗಲಿ.