ಕೊಡಗು ಜಿಲ್ಲಾ ಮಲೆಯ ಸಮಾಜದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. ಎಂ.ಕೆ. ಅಶೋಕ್, ಎಂ.ಎಸ್. ಮುತ್ತಣ್ಣ, ಎಂ.ಪಿ. ಬಿದ್ದಪ್ಪ , ರೀನಾ ರೋಶನ್ ಮತ್ತಿತರರು ಇದ್ದರು. 
ಕೊಡಗು

ಮಲೆಯ ಸಮಾಜದ ನೂತನ ಅಧ್ಯಕ್ಷ ಎಂ.ಕೆ. ಅಶೋಕ್

ಮಡಿಕೇರಿ:
ಕೊಡಗು ಜಿಲ್ಲಾ ಮಲೆಯ ಸಮಾಜದ ನೂತನ ಅಧ್ಯಕ್ಷರಾಗಿ ಎಂ.ಕೆ. ಅಶೋಕ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಎಂ.ಎಸ್. ಮುತ್ತಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಪಿ. ಬಿದ್ದಪ್ಪ , ಸಹಕಾರ್ಯದರ್ಶಿಯಾಗಿ ರೀನಾ ರೋಶನ್, ಖಜಾಂಚಿಯಾಗಿ ಎಂ.ಎ. ಮಂಜುನಾಥ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಬಿ. ಗಣೇಶ್, ಎಂ.ಕೆ. ಯತೀಶ್, ಎಂ.ಜಿ. ವಿಜಿತ್, ಎಂ.ಯು. ದರ್ಶನ್, ಎಂ.ಎA. ಹ್ಯಾರಿ, ಎಂ.ಯು. ಬೆಲ್ಲು ಅವರನ್ನು ಆಯ್ಕೆ ಮಾಡಲಾಯಿತು.