ಸೋಮವಾರಪೇಟೆ ತಾಲೂಕಿನ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶಾಲಾ ಸಂಸತ್ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ರಾಜೇಶ್ವರಿ, ರತ್ನಕುಮಾರ್, ಉಮೇಶ್ ಇದ್ದರು. 
ಕೊಡಗು

ಪ್ರಜಾಪ್ರಭುತ್ವದ ಪಾಠ ಕಲಿಸಿದ ನೇರುಗಳಲೆ ಶಾಲೆ

ಪ್ರಮುಖ ಮುಖ್ಯಾಂಶಗಳು

  • ಶಾಲಾ ಸಂಸತ್ ಚುನಾವಣೆಯಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ
ಸೋಮವಾರಪೇಟೆ: ತಾಲೂಕಿನ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯಲ್ಲಿ 2026-27ನೇ ಸಾಲಿನ ಶಾಲಾ ಸಂಸತ್ ಚುನಾವಣೆ ಗುರುವಾರ ನಡೆಯಿತು.
ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ 16 ವಿದ್ಯಾರ್ಥಿಗಳ ಪೈಕಿ 8 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.
ಶಾಲಾ ಮುಖ್ಯ ಶಿಕ್ಷಕ ರಾಜೇಶ್ವರಿ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಈ ರೀತಿಯ ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಭಾರತದ ಚುನಾವಣೆ ಪ್ರಕ್ರಿಯೆ ಹಂತಗಳ ಪರಿಚಯವಾಗುತ್ತದೆ. ಜತೆಗೆ ಉತ್ತಮ ನಾಯಕರ ಆಯ್ಕೆ ಮಾಡಿಕೊಳ್ಳುವ ವಿಧಾನವನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಚುನಾವಣಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಆಧಾರ್ ಕಾರ್ಡ್‌ಗಳೊಂದಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮೊಬೈಲ್ ವೋಟಿಂಗ್ ಮಿಷನ್‌ನಲ್ಲಿ ಮತದಾನ ಮಾಡಿದರು.
ವಿದ್ಯಾರ್ಥಿಗಳಾದ ಸವಿತಾ, ಖುಷಿ, ವಿಜಯ್, ನಿಶ್ಚಿತ್, ಪ್ರಾರ್ಥನಾ, ಪೃಥ್ವಿ, ಸುಬ್ರಮಣ್ಯ, ಸಿಂಚನಾ ಶಾಸಕರುಗಳಾಗಿ ಆಯ್ಕೆಯಾದರು. ಕೆ.ಕೆ. ಸವಿತಾ ಮುಖ್ಯಮಂತ್ರಿಯಾದರು. ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಕೆ.ಆರ್.ರತ್ನಕುಮಾರ್, ಸಹ ಶಿಕ್ಷಕರಾದ ಎಚ್.ಕೆ.ಉಮೇಶ್, ಎಚ್.ಎನ್,ರತೀಶ್, ಲಿಖಿತಾ, ಭಾನುಮತಿ, ಸಿ.ಜೆ.ಆಶಾ, ಎಚ್.ಎನ್.ರುತೇಶ್ ಇದ್ದರು.