ನಾಪೋಕ್ಲುವಿನ ಅಂಗನವಾಡಿ ಕೇಂದ್ರದಲ್ಲಿ ಭಾನುವಾರ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಅಂಗನವಾಡಿ ಸ್ಥಳದಾನಿ ಕುಲೇಟಿರ ಅರುಣ್ ಬೇಬ ಉದ್ಘಾಟಿಸಿದರು.
ನಾಪೋಕ್ಲು: ಕಡ್ಡಾಯವಾಗಿ ಐದು ವರ್ಷ ಒಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಿಸುವುದರ ಮೂಲಕ ದೇಶವನ್ನು ಪೋಲಿಯೋ ಮುಕ್ತ ದೇಶವನ್ನಾಗಿ ಮಾಡಲು ಪ್ರತಿಯೊಬ್ಬರೂ ಸಂಕಲ್ಪ ತೊಡಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಅಂಗನವಾಡಿ ಸ್ಥಳದಾನಿ ಕುಲೇಟಿರ ಅರುಣ್ ಬೇಬ ಹೇಳಿದರು.
ಇಲ್ಲಿನ ಹಳೇ ತಾಲೂಕಿನ ಅಂಗನವಾಡಿ ಕೇಂದ್ರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಗುವಿಗೆ ಲಸಿಕೆ ಹನಿ ಹಾಕುವುದರೊಂದಿಗೆ ಉದ್ಘಾಟಿಸಿ ಮಾತನಾಡಿದರು.
ಒಂದು ಹನಿ ಪಲ್ಸ್ ಪೋಲಿಯೋದಿಂದ ಏನಾಗುತ್ತದೆ ಎಂಬ ನಿರ್ಲಕ್ಷೃ ಬೇಡ. ಪ್ರತಿಯೊಂದು ಮಗುವಿಗೂ ಪಲ್ಸ್ ಪೋಲಿಯೋ ಹನಿಯನ್ನು ಹಾಕಿಸುವುದು ಎಲ್ಲರ ಜವಾಬ್ದಾರಿ ಎಂದರು.
ಸ್ತ್ರೀಶಕ್ತಿ ಒಕ್ಕೂಟದ ತಾಲೂಕು ಕಾರ್ಯದರ್ಶಿ ಅನಿತಾ ಹಾಗೂ ಆಶಾ ಕಾರ್ಯಕರ್ತೆ ರಮ್ಯಾ ಹಾಗೂ ಮಕ್ಕಳೊಂದಿಗೆ ಪಾಲಕರು ಉಪಸ್ಥಿತರಿದ್ದರು. ಬಳಿಕ ಪಾಲಕರು ತಮ್ಮ ತಮ್ಮ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಿಕೊಂಡರು . ಇದೇ ಸಂದರ್ಭ ಹೋಬಳಿ ವ್ಯಾಪ್ತಿಯ ವಿವಿಧೆಡೆ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.