ಪೊನ್ನಂಪೇಟೆ ವತಿಯಿಂದ ನಡೆದ ಕ್ರೀಡಾ ದಿನಾಚರಣೆಯಲ್ಲಿ ಅರುಣ್ ಮಾಚಯ್ಯ, ಸಿ.ಎಸ್.ಪೂಣಚ್ಚ, ಸುಬ್ಬಯ್ಯ ಇತರರಿದ್ದರು. 
ಕೊಡಗು

ರಾಷ್ಟ್ರೀಯ ಕ್ರೀಡಾ ದಿನಾಚರಣೆ

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಕ್ರೀಡಾ ದಿನಾಚರಣೆ

ಗೋಣಿಕೊಪ್ಪ: ಭಾರತೀಯ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕ್ರೀಡಾ ವಸತಿ ನಿಲಯ, ಪೊನ್ನಂಪೇಟೆ ವತಿಯಿಂದ ಕ್ರೀಡಾ ದಿನಾಚರಣೆಯನ್ನು ಇತ್ತೀಚೆಗೆ ಆಚರಿಸಲಾಯಿತು.

ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಹಾಗೂ ಒಲಿಂಪಿಯನ್ ಸಿ.ಎಸ್.ಪೂಣಚ್ಚ ಅವರು ಯುವ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿ, ತಮ್ಮ ಅಮೂಲ್ಯ ಅನುಭವ, ಮಾರ್ಗದರ್ಶನ ಹಾಗೂ ಪ್ರೋತ್ಸಾಹವನ್ನು ಹಂಚಿಕೊಂಡರು. ಕ್ರೀಡಾಪಟುಗಳಿಗೆ ಕಠಿಣ ಪರಿಶ್ರಮ, ಶಿಸ್ತು, ಆತ್ಮವಿಶ್ವಾಸ ಹಾಗೂ ನಿರಂತರ ತರಬೇತಿಯ ಮಹತ್ವವನ್ನು ತಿಳಿಸಿ, ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವಂತೆ ಪ್ರೇರೇಪಿಸಿದರು.
ಕಾರ್ಯಕ್ರಮದ ಅಂಗವಾಗಿ ಯುವ ಕ್ರೀಡಾಪಟುಗಳಿಗೆ ಕ್ರೀಡಾ ಕಿಟ್‌ಗಳನ್ನು ವಿತರಿಸಲಾಯಿತು. ಕ್ರೀಡಾ ದಿನಾಚರಣೆಯು ಯುವ ಕ್ರೀಡಾಪಟುಗಳಲ್ಲಿ ಕ್ರೀಡಾ ಸ್ಫೂರ್ತಿ, ತಂಡ ಮನೋಭಾವ, ಶಿಸ್ತು, ಪರಿಶ್ರಮ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವಲ್ಲಿ ಪ್ರೇರಣಾದಾಯಕವಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲು ಅವರಿಗೆ ಉತ್ತೇಜನ ನೀಡಿತು.
ತರಬೇತುದಾರರಾದ ಸುಬ್ಬಯ್ಯ, ಗಣಪತಿ, ಸನ್ನು ಗಣಪತಿ ಹಾಗೂ ವಸತಿ ನಿಲಯದ ವಾರ್ಡನ್ ದಿನೇಶ್ ಅವರು ಸಹ ಉಪಸ್ಥಿತರಿದ್ದರು.