ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಂದೀಲು ಸಿನಿಮಾದ ನಿರ್ದೇಶಕಿ ಕೊಟ್ಟುಕತ್ತಿರ ಯಶೋಧಾ ಪ್ರಕಾಶ್ ಮತ್ತು ಕೊಟ್ಟುಕತ್ತಿರ ಪ್ರಕಾಶ್ ದಂಪತಿಯನ್ನು ತವರೂರು ಕೋಪಟ್ಟಿ ಗ್ರಾಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಪೊಡನೋಳನ ಶ್ರೀನಿವಾಸ್, ಪೊಡನೋಳನ ದಿನೇಶ್, ಕಾಡಂಡ ಭೀಮಯ್ಯ, ಬಾಳುವಂಡ ರಮೇಶ್, ಪರವಂಡ ರಾಕೇಶ್, ಕಾಡಂಡ ಪ್ರಕಾಶ್, ಪೊಡನೋಳನ ಲೋಕನಾಥ್, ದಾಯನ ರಾಮಕೃಷ್ಣ ಮತ್ತಿತರರು ಇದ್ದರು.
- ಕೊಟ್ಟುಕತ್ತಿರ ಯಶೋಧಾ ಪ್ರಕಾಶ್ ಮತ್ತು ಕೊಟ್ಟುಕತ್ತಿರ ಪ್ರಕಾಶ್ ದಂಪತಿಗೆ ಸನ್ಮಾನ
- ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಂದೀಲು ಸಿನಿಮಾದ ನಿರ್ದೇಶಕಿ
- ತವರೂರು ಕೋಪಟ್ಟಿ ಗ್ರಾಮದಲ್ಲಿ ಸನ್ಮಾನ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಂದೀಲು ಸಿನಿಮಾದ ನಿರ್ದೇಶಕಿ ಕೊಟ್ಟುಕತ್ತಿರ ಯಶೋಧಾ ಪ್ರಕಾಶ್ ಮತ್ತು ಕೊಟ್ಟುಕತ್ತಿರ ಪ್ರಕಾಶ್ ದಂಪತಿಯನ್ನು ತವರೂರು ಮಡಿಕೇರಿ ತಾಲೂಕಿನ ಕೋಪಟ್ಟಿಯಲ್ಲಿ ಮಂಗಳವಾರ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಿನಿಮಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿ ರಾಷ್ಟçಪತಿಗಳಿಂದ ರಾಷ್ಟಿçÃಯ ಪ್ರಶಸ್ತಿ ಸ್ವೀಕರಿಸಿದ ತಮ್ಮೂರಿನ ಹೆಮ್ಮೆಯ ಪ್ರತಿಭೆಗಳನ್ನು ಗ್ರಾಮದ ಶ್ರೀ ಮಹಾ ವಿಷ್ಣು ದೇವಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಗೌರವಿಸಿ ಸಂಭ್ರಮಿಸಿದರು.
ಈ ಸಂದರ್ಭ ಮಾತನಾಡಿದ ಯಶೋಧಾ ಪ್ರಕಾಶ್ ತವರಿನಲ್ಲಿ ನಡೆದಿರುವ ಈ ಸನ್ಮಾನ ಕಾರ್ಯದಿಂದ ಮತ್ತೊಂದು ರಾಷ್ಟçಪ್ರಶಸ್ತಿ ದೊರೆತಷ್ಟೇ ಖುಷಿಯಾಗಿದೆ. ಈ ರೀತಿಯ ಕಾರ್ಯಕ್ರಮಗಳು ಮತ್ತಷ್ಟು ಸಾಧನೆಗೆ ಸ್ಫೂರ್ತಿ ಕೊಡುತ್ತದೆ. ಸಿನಿಮಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರಣೆ ನೀಡಿದೆ ಎಂದರು.
ಕೊಟ್ಟುಕತ್ತಿರ ಪ್ರಕಾಶ್ ಮಾತನಾಡಿ ಊರಿನ ನೆನಪುಗಳೇ ನಮ್ಮ ಸಿನಿಮಾ ಜೀವನಕ್ಕೆ ಸ್ಫೂರ್ತಿಯಾಗಿದೆ. ಇಲ್ಲಿನ ಪರಿಸರವೂ ಸೃಜನಾತ್ಮಕ ಚಟುವಟಿಕೆಗಳಿಗೆ ಪೂರಕವಾಗಿದೆ ಎಂದರು. ಕೊಟ್ಟುಕತ್ತಿರ ಪೆಮ್ಮಯ್ಯ ಸಾಧಕರ ಪರಿಚಯ ಮಾಡಿದರು.
ಕೋಪಟ್ಟಿ ಗ್ರಾಮದ ಶ್ರೀ ಮಹಾವಿಷ್ಣು ದೇವಾಲಯ ಜೀರ್ಣೋದ್ಧಾರ ಅಭಿವೃದ್ಧಿ ಸಮಿತಿ ಮತ್ತು ಗ್ರಾಮಸ್ಥರು ಸೇರಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಪೊಡನೋಳನ ಶ್ರೀನಿವಾಸ್, ಕುಂದಚೇರಿ ಗ್ರಾ.ಪಂ. ಅಧ್ಯಕ್ಷ ಪೊಡನೋಳನ ದಿನೇಶ್, ತಕ್ಕ ಮುಖ್ಯಸ್ಥರಾದ ಕಾಡಂಡ ಭೀಮಯ್ಯ, ಬಾಳುವಂಡ ರಮೇಶ್, ಪ್ರಮುಖರಾದ ಪರವಂಡ ರಾಕೇಶ್, ಕಾಡಂಡ ಪ್ರಕಾಶ್, ಪೊಡನೋಳನ ಲೋಕನಾಥ್, ದಾಯನ ರಾಮಕೃಷ್ಣ, ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು, ಕೊಟ್ಟುಕತ್ತೀರ ಕುಟುಂಬಸ್ಥರು ಇದ್ದರು.