ಪೆರಾಜೆ ಯಲ್ಲಿ ಎರಡು ಬೈಕುಗಳ ನಡುವೆ ಸಂಭವಿಸಿದ ರಸ್ತೆ ಅಪಘಾತ. 
ಕೊಡಗು

ಬೈಕ್‌ಗಳು ಡಿಕ್ಕಿಯಾಗಿ ಕೇರಳದ ಯುವಕ ಸಾವು

ನಾಪೋಕ್ಲು: ಪೆರಾಜೆಯಲ್ಲಿ ಭಾನುವಾರ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕೇರಳ ಮೂಲದ ಸವಾರರೊಬ್ಬರು ಮೃತಪಟ್ಟಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮೈಸೂರು-ಮಾಣಿ ರಾಜ್ಯ ಹೆದ್ದಾರಿಯ ಮಡಿಕೇರಿ ದಕ್ಷಿಣ ಕನ್ನಡ ಗಡಿ ಭಾಗವಾಗಿರುವ ಪೆರಾಜೆಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಕೇರಳದ ಪಯ್ಯನೂರಿನ ನಿವಾಸಿ ಕಂಟ್ರಾಕ್ಟರ್ ಎಂ.ಪ್ರದೀಪನ್ ಮೃತಪಟ್ಟವರು.
ಕಣ್ಣೂರಿನ ಪಯ್ಯನೂರಿನ ಮುಂಡಾತನ್ನ್ ಮನೆಗೆ ಸೇರಿದ ಅವರು ಪ್ರೈವೇಟ್ ಬಿಲ್ಡಿಂಗ್ ಕನಸ್ಟ್ರಕ್ಷನ್ ಅಸೋಸಿಯೇಷನ್ ರಾಜ್ಯ ಸಮಿತಿಯ ಸದಸ್ಯರಾಗಿದ್ದರು. ಕೆಲಸದ ನಿಮಿತ್ತ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಕಲ್ಲುಗುಂಡಿಯ ಸುಮಂತ್ ಹಾಗೂ ಸಂಪಾಜೆಯ ಚೆಡಾವಿನ ರವಿಚಂದ್ರನ್ ಎಂಬ ಯುವಕರಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಪೊಲೀಸರು ಕೇಸು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.