ಹೊದವಾಡ ಗ್ರಾಮದ ಕಲ್ಯಾಟ ಹಬ್ಬದಲ್ಲಿ ದೇವರ ಕೋಲ. 
ಕೊಡಗು

ಭಗವತಿ ಅಮ್ಮೆವಪ್ಪ ಉತ್ಸವ ಸಂಪನ್ನ

ನಾಪೋಕ್ಲು: ಸಮೀಪದ ಕುಯ್ಯಂಗೇರಿ ನಾಡಿನ ಹೊದವಾಡ ಗ್ರಾಮದ ಭಗವತಿ ಅಮ್ಮೆವಪ್ಪ ದೇವಸ್ಥಾನದ ಎರಡು ವರ್ಷಗಳಿಗೊಮ್ಮೆ ನಡೆಯುವ ಕಲ್ಯಾಟ ಹಬ್ಬವು ಎರಡು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ಜರುಗಿತು.
ಭಾನುವಾರ ಮಧ್ಯಾಹ್ನ ಬೇಟೆಗಾರ ಅಯ್ಯಪ್ಪ ದೇವರ ಕೋಲ ಸಂಜೆ ಪ್ರಸಾದ ವಿತರಣೆ ನಡೆಯಿತು. ಸೋಮವಾರ ಮಧ್ಯಾಹ್ನ ಬೋಡ್ ನಮ್ಮೆ ಜರುಗಿತ್ತು. ಉತ್ಸವದಲ್ಲಿ ಭಗವತಿ ಅಮ್ಮೆವಪ್ಪ ದೇವಸ್ಥಾನದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ, ತಕ್ಕ ಮುಖ್ಯಸ್ಥರು, ಸದಸ್ಯರು, ಊರ ಮತ್ತು ಪರ ಊರಿನ ಭಕ್ತಾದಿಗಳು ಪಾಲ್ಗೊಂಡಿದ್ದರು.