ಬಲಮುರಿ ಗ್ರಾಮದ ನಿವಾಸಿ ಮೇಡತನ ಎನ್.ಶಾಂತಿ ಅವರಿಗೆ ಸೇರಿದ ಬಾವಿ ಕುಸಿದಿರುವುದು. 
ಕೊಡಗು

ಬಲಮುರಿಯಲ್ಲಿ ಮಳೆಗೆ ಕುಸಿದ ಬಾವಿ

ನಾಪೋಕ್ಲು: ಹೋಬಳಿ ವ್ಯಾಪ್ತಿಯ ಬಲಮುರಿ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಬಾವಿ ಕುಸಿದಿದೆ.


ಪಾರಾಣೆ ಕೋಣಂಜಗೇರಿ ಪಂಚಾಯಿತಿ ವ್ಯಾಪ್ತಿಯ ಬಲಮುರಿ ಗ್ರಾಮದ ನಿವಾಸಿ ಮೇಡತನ ಎನ್.ಶಾಂತಿ ಅವರಿಗೆ ಸೇರಿದ ಬಾವಿ ಇದಾಗಿದೆ.
ಅತಿಯಾದ ಮಳೆಯಿಂದ ಭೂಮಿ ಸಡಿಲಗೊಂಡು ಸಿಮೆಂಟ್ ರಿಂಗ್‌ಗಳು ಕುಸಿದಿದ್ದಲ್ಲದೆ, ಅದರ ಅಡಿಯಲ್ಲಿ ನೀರು ಸರಬರಾಜು ಮಾಡಲು ಅಳವಡಿಸಿದ್ದ ಪಂಪ್ ಮಣ್ಣಿನ ಅಡಿಯಲ್ಲಿ ಸಿಲುಕಿದೆ.
ಅಂತರ್ಜಲ ಮಟ್ಟದಲ್ಲಿ ಏರುಪೇರಾದಾಗ ಬಾವಿ ಸಂಪೂರ್ಣವಾಗಿ ಕುಸಿಯುವ ಹಂತಕ್ಕೆ ತಲುಪಿದ್ದು, ಇದೀಗ ದಿನಬಳಕೆಗೆ ಮಳೆ ನೀರನ್ನೇ ಆಶ್ರಯಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.