ನಂಜರಾಯಪಟ್ಟಣ ಗ್ರಾಮದ ಐತಿಹಾಸಿಕ ನಂಜುAಡೇಶ್ವರ ಹಾಗೂ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ ಸಂದರ್ಭ ದೇವತಾ ಮೂರ್ತಿ ಹೊತ್ತೊಯ್ದ ಭಕ್ತರು ಕೊಂಡ ತುಳಿದು ಭಕ್ತಿ ಸಮರ್ಪಿಸಿದರು.
ಕುಶಾಲನಗರ ತಾಲೂಕು ನಂಜರಾಯಪಟ್ಟಣ ಗ್ರಾಮದ ಕಾವೇರಿ ನದಿ ದಂಡೆಯ ಐತಿಹಾಸಿಕ ನಂಜುAಡೇಶ್ವರ ಹಾಗೂ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ ಮಂಗಳವಾರ ಶ್ರದ್ದಾಭಕ್ತಿಯಿಂದ ನಡೆಯಿತು. ಸೋಮವಾರ ಸಂಜೆ ಗ್ರಾಮದ ಪಟೇಲ್ ಮೋಹನ ಕುಮಾರ್ ಎಂಬವರ ಮನೆಯಿಂದ ಕನ್ನಂಬಾಡಮ್ಮ ದೇವರ ಆಭರಣಗಳನ್ನು ಧಾರ್ಮಿಕ ವಿಧಿಗಳೊಂದಿಗೆ ಮಂಗಳವಾದ್ಯ ಹಾಗೂ ಪೂರ್ಣಕುಂಭದೊAದಿಗೆ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಬಳಿಕ ಮಂಗಳವಾರ ಬೆಳಗ್ಗೆ ಬಸವೇಶ್ವರ ಹಾಗೂ ಕನ್ನಂಬಾಡಮ್ಮ ದೇವತಾ ಮೂರ್ತಿಗಳನ್ನು ಕಾವೇರಿ ನದಿಗೆ ಕೊಂಡೊಯ್ದು ಗಂಗಾ ಪೂಜೆ ನೆರವೇರಿಸಲಾಯಿತು. ನಂತರ ವೀರಗಾಸೆ ಮಂಗಳವಾದ್ಯದೊAದಿಗೆ ಮೆರವಣಿಗೆಯಲ್ಲಿ ದೇವಾಲಯದ ಆವರಣಕ್ಕೆ ದೇವರನ್ನು ತರಲಾಯಿತು.
ದೇವಾಲಯದ ಮುಂಬದಿ ಕೊಂಡೋತ್ಸವ ಪೂಜೆ ಬಳಿಕ ದೇವತಾ ಮೂರ್ತಿ ಹೊತ್ತೊಯ್ದ ಭಕ್ತರು ವೀರಗಾಸೆಯವರೊಂದಿಗೆ ಬರಿಗಾಲಲ್ಲಿ ಕೊಂಡ ತುಳಿದು ಭಕ್ತಿ ಸಮರ್ಪಿಸಿದರು.
ಪೂಜೋತ್ಸವದಲ್ಲಿ ವಿರಾಜಪೇಟೆ ಅರಮೇರಿ ಮಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ದಿಂಡಗಾಡು ಬಸವಜ್ಯೋತಿ ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ ಆಶೀರ್ವಚನ ನೀಡಿದರು.
ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ, ಕಾರ್ಯದರ್ಶಿ ಕೆ.ವಿ. ಪ್ರೇಮಾನಂದ, ಖಜಾಂಚಿ ಮುರುಳಿ ಮಾದಯ್ಯ ಪದಾಧಿಕಾರಿಗಳಾದ ಕೆ.ಎಸ್. ರತೀಶ್, ಬಾಲಕೃಷ್ಣ, ವಿಜುಚೆಂಗಪ್ಪ, ಲೀಲಾವತಿ, ಬಿ.ಸಿ. ಕಾಳಯ್ಯ, ಕೆಮ್ಮಾರನ ಲೋಕನಾಥ್ ಮೊದಲಾದವರಿದ್ದರು.
ಸೋಮವಾರಪೇಟೆಯ ಕೆ.ಪಿ. ಯೋಗೇಶ್, ಎಸ್.ಎ. ಹರೀಶ್ ಪೂಜಾ ವಿಧಿ ನಡೆಸಿಕೊಟ್ಟರು.
ಪಾಂಡವಪುರದ ವಿಶ್ವರುದ್ರ, ರವಿಕುಮಾರ್, ಪ್ರಜ್ವಲ್ ತಂಡದಿAದ ವೀರಗಾಸೆ ಭಕ್ತರನ್ನು ಆಕರ್ಷಿಸಿತು.
ಮಹಾಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ, ಮಹಾ ಪ್ರಸಾದ ವಿತರಿಸಲಾಯಿತು.