ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹುದಿಕೇರಿಯಲ್ಲಿ ಕೆರೆ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಇಟ್ಟೀರ ಕೆ. ಬಿದ್ದಪ್ಪ, ಚಂಗುಲAಡ ಕರುಂಬಯ್ಯ, ಲೀಲಾವತಿ ಮತ್ತಿತರರು ಇದ್ದರು.
ಪೊನ್ನಂಪೇಟೆ ತಾಲೂಕು ಹುದಿಕೇರಿ ಕಾರ್ಯಕ್ಷೇತ್ರದಲ್ಲಿ 938ನೇ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ಹುದಿಕೇರಿ ಗ್ರಾಮದ ಕೆರೆ ಆವರಣದಲ್ಲಿ ನಡೆಯಿತು.
ಗೋಣಿಕೊಪ್ಪಲು ಕಾವೇರಿ ಕಾಲೇಜು ನಿವೃತ್ತ ಪ್ರಾಂಶುಪಾಲ ಇಟ್ಟೀರ ಕೆ. ಬಿದ್ದಪ್ಪ ನಾಮಫಲಕ ಅನಾವರಣ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾದೇವ ಪೆಗ್ಗೆರೆ ಕೆರೆ ಅಧ್ಯಕ್ಷ ಚಂಗುಲAಡ ಕರುಂಬಯ್ಯ ವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದ್ದ
ಮುಖ್ಯ ವಿದ್ಯುತ್ ಪರಿವೀಕ್ಷಕ ತೀತಿರ ರೋಷನ್ ಅಪ್ಪಚ್ಚು ಬಾಗಿನ ಅರ್ಪಣೆ ನೆರವೇರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಗು ಜಿಲ್ಲೆಯ ನಿರ್ದೇಶಕಿ ಲೀಲಾವತಿ ಕೆರೆಯನ್ನು ಸಮುದಾಯಕ್ಕೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡಾ. ಡಿ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಸಾವಿರಕ್ಕೂ ಹೆಚ್ಚು ಕೆರೆಗಳ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ನಮ್ಮೂರು ನಮ್ಮ ಕೆರೆ ಯೋಜನೆ ಗ್ರಾಮೀಣಾಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ. ನಮ್ಮೂರು ನಮ್ಮ ಕೆರೆ ಯೋಜನೆ ಕೇವಲ ಸಾಲ ಸೌಲಭ್ಯಕ್ಕೆ ಸೀಮಿತವಾಗದೆ, ಸಮಗ್ರ ಸಮುದಾಯ ಅಭಿವೃದ್ಧಿಗೆ ದಾರಿಯಾಗುತ್ತಿರುವ ಮಹತ್ವದ ಕಾರ್ಯಕ್ರಮವೆಂದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆರ್.ಜೆ. ಪುಟ್ಟರಾಜು, ಜಿಲ್ಲಾ ಜನಜಾಗೃತಿ ವೇದಿಕೆಯ ಅರುಣ್ ಬಾನಾಂಗಡ, ಶ್ರೀ ಮಹಾದೇವ ದೇವಸ್ಥಾನ ಕೂಡಿಗೆರೆಯ ತಕ್ಕ ಮುಖ್ಯಸ್ಥ ಚೆಕ್ಕೆರೆ ರಾಜೇಶ್, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕಿರಿಯಮಾಡ ಮಿಲನ್ ಗಣಪತಿ, ಕೆರೆ ಸಮಿತಿ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಸ್ಥಳೀಯರು ಇದ್ದರು.