ಅರಕಲಗೂಡು ತಾಲೂಕಿನ ಮರಡಿ ಗ್ರಾಮದಲ್ಲಿ ಆಯೋಜಿಸಿದ್ದ ಸಂಪೂರ್ಣ ರಾಮಾಯಣ ಅಥವಾ ಪಿತೃವಾಕ್ಯ ಪರಿಪಾಲನೆ ಪೌರಾಣಿಕ ನಾಟಕ ಸಮಾರಂಭವನ್ನು ಸಮಾಜ ಸೇವಕ ಎಂ.ಟಿ. ಕೃಷ್ಣೇಗೌಡ ಉದ್ಘಾಟಿಸಿದರು. ಸೋಮಶೇಖರ್, ಜವರೇಗೌಡ, ವೆಂಕಟೇಶ್, ಪರಮೇಶ್ ಇತರರಿದ್ದರು. 
ಕೊಡಗು

ಸಾಮರಸ್ಯ ಮೂಡಿಸಲು ಪೌರಾಣಿಕ ನಾಟಕಗಳು ಸಹಕಾರಿ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಸಮಾಜ ಸೇವಕ ಎಂ.ಟಿ.ಕೃಷ್ಣೇಗೌಡ ಅಭಿಪ್ರಾಯ
  • ಸಂಪೂರ್ಣ ರಾಮಾಯಣ, ಪಿತೃವಾಕ್ಯ ಪರಿಪಾಲನೆ ಪೌರಾಣಿಕ ನಾಟಕ ಸಮಾರಂಭ ಉದ್ಘಾಟನೆ
ಅರಕಲಗೂಡು: ಸಮಾಜದಲ್ಲಿ ಉತ್ತಮ ಸಂಸ್ಕೃತಿ, ಸಾಮರಸ್ಯ ಬಿತ್ತಲು ಪೌರಾಣಿಕ ನಾಟಕಗಳು ಸಹಕಾರಿಯಾಗಿವೆ ಎಂದು ಸಮಾಜ ಸೇವಕ ಎಂ.ಟಿ. ಕೃಷ್ಣೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಮರಡಿ ಗ್ರಾಮದಲ್ಲಿ ಶನಿವಾರ ಶ್ರೀ ಆಂಜನೇಯ ಕೃಪಾಪೋಷಿತ ನಾಟಕ ಮಂಡಳಿ ಸಹಯೋಗದಲ್ಲಿ ಆಯೋಜಿಸಿದ್ದ ಸಂಪೂರ್ಣ ರಾಮಾಯಣ ಅಥವಾ ಪಿತೃವಾಕ್ಯ ಪರಿಪಾಲನೆ ಪೌರಾಣಿಕ ನಾಟಕ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪೌರಾಣಿಕ ನಾಟಕಗಳಲ್ಲಿ ಸತ್ಯ, ಪ್ರಾಮಾಣಿಕತೆ, ವಸ್ತು ನಿಷ್ಠತೆಯ ತಿರುಳಿದ್ದು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ತಿಳಿಸಿದರು.
ನಿವೃತ್ತ ಇಂಜಿನಿಯರ್ ಎಂ.ಜಿ.ಸೋಮಶೇಖರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹಿಂದಿನ ಕಾಲದಿಂದಲೂ ಪೌರಾಣಿಕ ನಾಟಕಗಳನ್ನು ಅಭಿನಯಿಸುವ ಕಲೆ ದೈವಭಕ್ತಿ ಜತೆಗೆ ಒಂದು ಪುಣ್ಯದ ಕಾಯಕವಿದ್ದಂತೆ ಎಂದು ಜನರು ಭಾವಿಸಿದ್ದಾರೆ. ಅದರಂತೆ ಎಲ್ಲರೂ ಸತ್ಯದ ಹಾದಿಯಲ್ಲಿ ಸಾಗಬೇಕಾಗಿದೆ ಎಂದು ನುಡಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿವೃತ್ತ ಅಧಿಕಾರಿ ಬಿ.ಟಿ. ಜವರೇಗೌಡ, ಜಿಂದಾಲ್ ಮಾಜಿ ಉಪಾಧ್ಯಕ್ಷ ಬಸವನಹಳ್ಳಿ ಪರಮೇಶ್, ಮುಖಂಡರಾದ ಕೆ.ಟಿ.ಲೋಕೇಶ್, ರಂಗಸ್ವಾಮಿ, ಚಂದ್ರೇಗೌಡ, ಶಶಿಕುಮಾರ್, ವೆಂಕಟೇಶ್, ನರಸೇಗೌಡ, ಪ್ರಭು ಶ್ರೀಧರ್ ಇತರರು ಇದ್ದರು. ಇದಕ್ಕೂ ಮುನ್ನ ಶಾಸಕ ಎ.ಮಂಜು ಭೇಟಿ ನೀಡಿದ್ದರು.