ಮೂರ್ನಾಡಿನ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಯಕ್ಷೋತ್ಸವದ ಪೂರ್ವಭಾವಿ ಸಭೆಯಲ್ಲಿ ಮುಖಂಡರು ಪಾಲ್ಗೊಂಡಿದ್ದರು.
- ಮೂರ್ನಾಡಿನ ಆಪ್ತಮಿತ್ರ ಬಳಗ
- ಸಮುದಾಯ ಭವನ
- ಪೂರ್ವಭಾವಿ ಸಭೆ
ನಾಪೋಕ್ಲು: ಮೂರ್ನಾಡಿನ ಆಪ್ತಮಿತ್ರ ಬಳಗ ವತಿಯಿಂದ ಫೆ.1ರಂದು ಮೂರ್ನಾಡು ಯಕ್ಷೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮೂರ್ನಾಡಿನ ಸಮುದಾಯ ಭವನದಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
ಮೂರ್ನಾಡಿನ ಪಾಂಡಾಣೆ ನಾಡು ಮಂದ್ ಮತ್ತು ಸರ್ಕಾರಿ ಶಾಲಾ ಮೈದಾನದಲ್ಲಿ ಶ್ರೀ ಹನುಮಗಿರಿ ಮೇಳದವರಿಂದ ಸಂಪೂರ್ಣ ಶ್ರೀದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.
ಮೂರು ವರ್ಷದಿಂದ ನಡೆಯುವ ಮೂರ್ನಾಡು ಯಕ್ಷೋತ್ಸವವನ್ನು ಸಾವಿರಾರು ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಊಟೋಪಚಾರ, ಪಾರ್ಕಿಂಗ್ ವ್ಯವಸ್ಥೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಂಬಂಧಪಟ್ಟ ವ್ಯವಸ್ಥೆಗೆ ಪ್ರತ್ಯೇಕ ಸಮಿತಿ ರಚಿಸಲು ನಿರ್ಧರಿಸಲಾಯಿತು.
ಆಪ್ತಮಿತ್ರ ಬಳಗದ ವಿನಯ್ ಕಗೋಡ್ಲು, ವಾಸು ಹೊದ್ದೂರು, ನವೀನ್ ಮೂರ್ನಾಡು, ರಮೇಶ್ ಕಿಗ್ಗಾಳು, ಅಶ್ವತ್ಥ್ ರೈ ಬಾಡಗ, ಜಿತಿನ್ ಕಬಡಕೇರಿ, ಜಯಂತ್ ಚೆಟ್ಟಿಮಾಡ ಮೂರ್ನಾಡು, ಗಿರೀಶ್ ರೈ ಮೂರ್ನಾಡು , ಮೋಹನ್ ಪೂಜಾರಿ ಮುರ್ನಾಡು, ಕುಶನ್ ರೈ ಮೂರ್ನಾಡು , ಚಂಗಪ್ಪ ಮೂರ್ನಾಡು, ವಿಶ್ವನಾಥ್, ಚಂದ್ರಶೇಖರ್ ಕುಲಾಲ್ , ಸುಂದರ್, ಪುರುಷೋತ್ತಮ್ ಕುಲಾಲ್ ಹೆಮ್ಮಾಡು, ತನ್ಮಯ್ ಕುಲಾಲ್, ಧ್ಯಾನಿಕ್ ಕುಲಾಲ್ ಇದ್ದರು.