ಮೂರ್ನಾಡಿನ ಲಯನ್ಸ್ ಕ್ಲಬ್ಬಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ನೂತನ ಅಧ್ಯಕ್ಷರಾಗಿ ಮುಲ್ಲೇರ ಪಾಪ ಕಾವೆರಪ್ಪ, ಕಾರ್ಯದರ್ಶಿಯಾಗಿ ಪಳಂಗಂಡ ಕಾವೇರಿಯಪ್ಪ, ಖಜಾಂಚಿಯಾಗಿ ಬಡುವಂಡ ಅರುಣ್ ಅಪ್ಪಚ್ಚು ಇತರರು ಇದ್ದರು. 
ಕೊಡಗು

ಅಧಿಕಾರ ಸ್ವೀಕರಿಸಿದ ಮುಲ್ಲೇರ ಪಾಪ ಕಾವೆರಪ್ಪ

ನಾಪೋಕ್ಲು: ಸಮೀಪದ ಮೂರ್ನಾಡಿನ ಲಯನ್ಸ್ ಕ್ಲಬ್ಬಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ಮೂರ್ನಾಡಿನ ಕೊಡವ ಸಮಾಜದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಮುಲ್ಲೇರ ಪಾಪ ಕಾವೆರಪ್ಪ, ಕಾರ್ಯದರ್ಶಿಯಾಗಿ ಪಳಂಗಂಡ ಕಾವೇರಿಯಪ್ಪ, ಖಜಾಂಚಿಯಾಗಿ ಬಡುವಂಡ ಅರುಣ್ ಅಪ್ಪಚ್ಚು ಅಧಿಕಾರ ಸ್ವೀಕರಿಸಿದರು.
ಮುಖ್ಯ ಅತಿಥಿಗಳಾಗಿ ಲಯನ್ಸ್ ಮಾಜಿ ಪ್ರಾಂತಪಾಲ ಲಯನ್ ಅರುಣ್ ಶೆಟ್ಟಿ, ಎಂಜೆಎಸ್ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾರ್ಗದರ್ಶನ ಮಾಡಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ನಿರ್ಗಮಿತ ಅಧ್ಯಕ್ಷ ಅಮ್ಮತಂಡ ಚಂಗಪ್ಪ ವಹಿಸಿದ್ದರು. ಈ ಸಂದರ್ಭ ವಿವಿಧ ಲಯನ್ಸ್ ಕ್ಲಬ್ಬಿನ ಪದಾಧಿಕಾರಿಗಳು, ಸದಸ್ಯರು ಇದ್ದರು.