24ನೇ ವರ್ಷದ 'ಮುಕ್ಕಾಟಿರ ಕ್ರಿಕೆಟ್ ನಮ್ಮೆ-2026'ರ ವೆಬ್ ಸೈಟ್ ಬಿಡುಗಡೆ ಮತ್ತು ತಂಡಗಳ ನೋಂದಣಿ ಪ್ರಕ್ರಿಯೆಯನ್ನು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಡಾ. ಮಂಡೇಪAಡ ಪುಷ್ಪ ಕುಟ್ಟಣ್ಣ ಉದ್ಘಾಟಿಸಿದರು. ಮಾದಂಡ ತಿಮ್ಮಯ್ಯ, ಅಜ್ಜೇಟಿರ ವಿಕ್ರಮ್ ಉತ್ತಪ್ಪ, ಮುಕ್ಕಾಟಿರ ಪೊನ್ನಣ್ಣ, ಮುಕ್ಕಾಟಿರ ಗಣಪತಿ ಮತ್ತಿತರರು ಇದ್ದರು.
ಸ್ತಿçÃ-ಪುರುಷ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಒಂದು ತಂಡವಾಗಿ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದು ಮತ್ತು ಅಮೋಘವಾದ ಕ್ರೀಡಾಸ್ಫೂರ್ತಿಯನ್ನು ಕೇವಲ ಕೊಡಗು ಜಿಲ್ಲೆಯಲ್ಲಿ ಮಾತ್ರ ಕಾಣಲು ಸಾಧ್ಯವೆಂದು ಅಂತರ್ ರಾಷ್ಟಿçÃಯ ಬಾಸ್ಕೆಟ್‌ಬಾಲ್ ಕ್ರೀಡಾಪಟುವೂ ಆದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಡಾ. ಮಂಡೇಪAಡ ಪುಷ್ಪ ಕುಟ್ಟಣ್ಣ ಹೇಳಿದರು. ಬೇತ್ರಿ ಮುಕ್ಕಾಟಿರ ಕುಟುಂಬಸ್ಥರು ಏಪ್ರಿಲ್ ಮತ್ತು ಮೇ ತಿಂಗಳಿನÀಲ್ಲಿ ಮೂರ್ನಾಡು ಹಾಗೂ ಅರಮೇರಿಯಲ್ಲಿ ನಡೆಸಲಿರುವ 24ನೇ ವರ್ಷದ ‘ಮುಕ್ಕಾಟಿರ ಕ್ರಿಕೆಟ್ ನಮ್ಮೆ-2026’ರ ವೆಬ್ ಸೈಟ್ ಬಿಡುಗಡೆ ಮತ್ತು ತಂಡಗಳ ನೋಂದಣಿ ಪ್ರಕ್ರಿಯೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಂಗಳವಾರ ಮಾತನಾಡಿದರು.
ವಿಶಿಷ್ಟ ಮತ್ತು ಹೊಂದಾಣಿಕೆಯ ಕ್ರೀಡಾಕೂಟಗಳು ಕೊಡಗು ಹೊರತು ಪಡಿಸಿದರೆ ದೇಶದ ಬೇರೆ ಯಾವ ಭಾಗದಲ್ಲಿಯೂ ಕಾಣಲು ಸಾಧ್ಯವಿಲ್ಲ. ದೇಶ ಸೇರಿದಂತೆ ಪ್ರಪಂಚದ ಎಲ್ಲಾ ಕಡೆಗಳಲ್ಲಿ ನಡೆಯುವ ಪಂದ್ಯಾವಳಿಗಳಲ್ಲಿ ಮಹಿಳೆಯರು ಹಾಗೂ ಪುರುಷರ ಪ್ರತ್ಯೇಕ ತಂಡಗಳಿರುತ್ತವೆ. ಒಂದಾಗಿ ಪಾಲ್ಗೊಳ್ಳಲು ಯಾವುದೇ ಕ್ರೀಡೆಯಲ್ಲಿಯೂ ಅವಕಾಶ ಇರುವುದಿಲ್ಲ. ಆದರೆ ಕೊಡಗಿನಲ್ಲಿ ಆಯೋಜಿಸುವ ಹಾಕಿ, ಕ್ರಿಕೆಟ್ ಸೇರಿದಂತೆ ಇತರ ಕ್ರೀಡಾಕೂಟಗಳಲ್ಲಿ ಒಂದು ತಂಡವಾಗಿ ಪುರುಷರು ಹಾಗೂ ಮಹಿಳೆಯರು ಜತೆಯಾಗಿ ಪಾಲ್ಗೊಳ್ಳುತ್ತಾರೆ. ಇದು ಹೆಮ್ಮೆಯ ಬೆಳವಣಿಗೆಯಾಗಿದೆ.
ಕೆಲವು ಸಮಯದ ಹಿಂದೆ ಬೇತ್ರಿ ಮುಕ್ಕಾಟಿರ ಕುಟುಂಬಸ್ಥರು ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿದ್ದರು. ಇದೀಗ ಕ್ರಿಕೆಟ್ ನಮ್ಮೆಯ ಆತಿಥ್ಯ ವಹಿಸಿರುವುದು ಕುಟುಂಬದ ಸಂಘಟನಾ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಕ್ರೀಡಾಕೂಟಗಳÀ ಆಯೋಜನೆ ಅಷ್ಟು ಸುಲಭ ಸಾಧ್ಯವಲ್ಲ. ಅದರ ಹಿಂದೆ ಸಾಕಷ್ಟು ಪರಿಶ್ರಮ ಮತ್ತು ಒಗ್ಗಟ್ಟು ಇರುತ್ತದೆ ಎಂದು ಹೇಳಿದರು.
ಅಂತರ್ ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಹಾಕಿ ಕ್ರೀಡೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಕ್ರೀಡಾಕೂಟಗಳ ಆಯೋಜನೆ ಸಂದರ್ಭ ಹಣಕಾಸಿನ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಕೊಡವ ಕುಟುಂಬಗಳ ಹಲವು ಮಂದಿ ಇಂದು ಹೊರ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಯಶಸ್ವಿ ಉದ್ಯಮಿಗಳಾಗಿ ಗುರುತಿಸಿಕೊಂಡಿದ್ದಾರೆ. ಪಂದ್ಯಾವಳಿ ಆಯೋಜಿಸುವ ಕುಟುಂಬಕ್ಕೆ ಕೊಡವ ಉದ್ಯಮಿಗಳು ಆರ್ಥಿಕ ನೆರವು ನೀಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ವೆಬ್‌ಸೈಟ್ ಮತ್ತು ತಂಡಗಳ ನೋಂದಣಿ ಪ್ರಕ್ರಿಯೆಗಳ ಕುರಿತು ಅಜ್ಜೇಟಿರ ವಿಕ್ರಮ್ ಉತ್ತಪ್ಪ ವಿವರಿಸಿದರು. ಇದೇ ಸಂದರ್ಭ ಕ್ರಿಕೆಟ್ ನಮ್ಮೆಯ ಕುರಿತು ಮುಕ್ಕಾಟಿರ ಮೌನಿ ಬರೆದಿರುವ ಸಣ್ಣುವಂಡ ನಿಶ್ಮಾ ಅವರ ಕಂಠದಲ್ಲಿ ಮೂಡಿ ಬಂದಿರುವ ಹಾಡಿನ ವಿಡಿಯೋವನ್ನು ಬಿಡುಗಡೆ ಮಾಡಲಾಯಿತು.
ಮುಕ್ಕಾಟಿರ ಕ್ರಿಕೆಟ್ ನಮ್ಮೆಯ ಅಧ್ಯಕ್ಷ ಸುರೇಶ್ ಪೆಮ್ಮಯ್ಯ, ಪಂದ್ಯಾವಳಿಯ ಕಾರ್ಯದರ್ಶಿ ಮುಕ್ಕಾಟಿರ ಪೊನ್ನಣ್ಣ, ಖಜಾಂಚಿ ಮುಕ್ಕಾಟಿರ ಗಣಪತಿ, ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಎನ್. ಕಾರ್ಸನ್ ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಕುಂಡ್ರAಡ ಎಂ.ಬೋಪಣ್ಣ, ಕಾಂತಮೂರ್ನಾಡು ನಾಡು ತಕ್ಕ ಪಳಂಗAಡ ಮೇದಪ್ಪ, ಕೋಟೇರ ಮುತ್ತಣ್ಣ, ಮಡೆೆಯಂಡ ಚಂಗಪ್ಪ, ಮುಕ್ಕಾಟಿರ ರವಿ ಚೀಯಣ್ಣ, ಮುಕ್ಕಾಟಿರ ಸರಸು ನವೀನ್, ಮೂಕಚಂಡ ಬೊಳ್ಳಮ್ಮ, ಕೊಡವ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರು ಮತ್ತಿತರರು ಇದ್ದರು.