ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ 
ಕೊಡಗು

ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ

ಮಡಿಕೇರಿ: ಮಡಿಕೇರಿ ತಾಲೂಕಿನ ಗಾಳಿಬೀಡು, ಉಡೋತ್‌ಮೊಟ್ಟೆ, ತಾಳತ್ತಮನೆ, ಬೆಟ್ಟಗೇರಿ, ಬೋಯಿಕೇರಿ, ಮದೆನಾಡು, ಸಂಪಾಜೆ ಹಾಗೂ ಮಡಿಕೇರಿ, ಸಿದ್ದಾಪುರ, ಗೋಣಿಕೊಪ್ಪ, ಕುಶಾಲನಗರ ವ್ಯಾಪ್ತಿಯಲ್ಲಿ ಗುರುವಾರ ಸಾಧಾರಣ ಮಳೆಯಾಗಿದೆ.
ಕಳೆದ 24 ಗಂಟೆಯಲ್ಲಿ 11.28 ಮಿ.ಮೀ. ಮಳೆ: ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 11.28 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ 19.90 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ 7.40 ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ 13.30 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ 12 ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ ಸರಾಸರಿ 3.80 ಮಿ.ಮೀ. ಮಳೆಯಾಗಿದೆ.
ಮಡಿಕೇರಿ 18.10, ನಾಪೋಕ್ಲು 9.30, ಸಂಪಾಜೆ 28.20, ಭಾಗಮಂಡಲ 24.30, ವಿರಾಜಪೇಟೆ 11.30, ಅಮ್ಮತ್ತಿ 9.90, ಹುದಿಕೇರಿ 22, ಶ್ರೀಮಂಗಲ 12.40, ಪೊನ್ನಂಪೇಟೆ 9.90, ಬಾಳೆಲೆ 8.20, ಸೋಮವಾರಪೇಟೆ 8.50, ಶನಿವಾರಸಂತೆ 5.80, ಶಾಂತಳ್ಳಿ 22, ಕೊಡ್ಲಿಪೇಟೆ 9.60, ಕುಶಾಲನಗರ 4.50, ಸುಂಟಿಕೊಪ್ಪ 3.80 ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳಿದ್ದು, ಗುರುವಾರ 2855.18 ಅಡಿ ನೀರು ಸಂಗ್ರಹವಾಗಿದೆ. ಇಂದಿನ ನೀರಿನ ಒಳಹರಿವು 4326 ಕ್ಯೂಸೆಕ್ ಇದ್ದು, ನದಿಗೆ 180 ಕ್ಯೂಸೆಕ್ ನೀರುಬಿಡಲಾಗುತ್ತಿದೆ.