ಬೆಟ್ಟಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಕ್ಕ ಗ್ರಾಮಕ್ಕೆ ಶಾಸಕ ಎ. ಎಸ್. ಪೊನ್ನಣ್ಣ ಶನಿವಾರ ಭೇಟಿ ನೀಡಿದ ಸಂದರ್ಭ ನಾಗರಿಕರು ಗೌರವಿಸಿದರು. ಮಡಿಕೇರಿ ಪುರಸಭೆ ಇಂಜಿನಿಯರ್ ಹೇಮಂತ್ ಕುಮಾರ್, ಮುಖಂಡರಾದ ಕೊಡಗನ ತೀರ್ಥ ಕುಮಾರ್, ಗೌರೀಶ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.   ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ
ಕೊಡಗು

ಸಮುದಾಯ ಭವನ ಸ್ಥಳ ಪರಿಶೀಲನೆ

* ಬಕ್ಕ ಗ್ರಾಮಕ್ಕೆ ಶಾಸಕ ಎ. ಎಸ್. ಪೊನ್ನಣ್ಣ ಭೇಟಿ

ನಾಪೋಕ್ಲು: ಬೆಟ್ಟಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಕ್ಕ ಗ್ರಾಮಕ್ಕೆ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ. ಎಸ್. ಪೊನ್ನಣ್ಣ ಶನಿವಾರ ಭೇಟಿ ನೀಡಿ, ಸಾರ್ವಜನಿಕರ ಕುಂದುಕೊರತೆ ಆಲಿಸಿದರು. ನಂತರ ಮಾತನಾಡಿದ ಪೊನ್ನಣ್ಣ, ಗ್ರಾಮಸ್ಥರು ಊರಿಗೆ ಸಮುದಾಯ ಭವನದ ಅಗತ್ಯತೆ ಇದೆ ಎಂದು ಈ ಹಿಂದೆ ಗಮನಕ್ಕೆ ತಂದಿದ್ದರು. ಹಾಗಾಗಿ ಗ್ರಾಮಕ್ಕೆ ಭೇಟಿ ನೀಡಿದ್ದೇನೆ ಎಂದರು.

ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರದಲ್ಲೇ ಅಗತ್ಯ ಕ್ರಮ ವಹಿಸುವೆ ಎಂದು ಗ್ರಾಮಸ್ಥರಿಗೆ ರವಸೆ ನೀಡಿದರು.ಸಾರ್ವಜನಿಕರಿಂದ ವಿವಿಧ ಕುಂದುಕೊರತೆ ಅಹವಾಲುಗಳನ್ನು ಸ್ವೀಕರಿಸಿದ ಶಾಸಕರು, ಸಮಸ್ಯೆ ನಿವಾರಣೆಗೆ ಸ್ಪಂದಿಸುವ ಭರವಸೆ ನೀಡಿದರು.

ಬಕ್ಕ ಗ್ರಾಮದ ಮುಖಂಡರು ಶಾಸಕ ಪೊನ್ನಣ್ಣ ಅವರನ್ನು ಗೌರವಿಸಿದರು. ಮಡಿಕೇರಿ ಪುರಸಭೆ ಇಂಜಿನಿಯರ್ ಹೇಮಂತ್ ಕುಮಾರ್, ಮುಖಂಡರಾದ ಕೊಡಗನ ತೀರ್ಥ ಕುಮಾರ್, ಗೌರೀಶ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.