ಸೋಮವಾರಪೇಟೆ ತಾಲೂಕಿನ ದೊಡ್ಡಮಳ್ತೆ ಶ್ರೀ ಹೊನ್ನಮ್ಮನ ಕೆರೆ ಕ್ಷೇತ್ರದಲ್ಲಿ ನಡೆದ ಜಾತ್ರೋತ್ಸವದಲ್ಲಿ ಭಾಗವಹಿಸಿದ್ದ ಶಾಸಕ ಡಾ. ಮಂತರ್‌ಗೌಡ ಕೆರೆಗೆ ಬಾಗಿನ ಅರ್ಪಿಸಿದರು. ಡಿ.ಬಿ.ವೀರೇಶ, ಪ್ರದೀಪ್, ಡಿ.ಬಿ.ಲೋಕೇಶ್, ಎಂ.ಬಿ.ವಸಂತ್, ಭರತ್ ಇತರರು ಇದ್ದರು.  
ಕೊಡಗು

ಹೊನ್ನಮ್ಮನಕೆರೆಗೆ ಶಾಸಕ ಮಂತರ್ ಗೌಡ ಬಾಗಿನ ಅರ್ಪಣೆ

ಸೋಮವಾರಪೇಟೆ: ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನಕೆರೆ ಕ್ಷೇತ್ರದಲ್ಲಿ ಸ್ವರ್ಣಗೌರಿ ಉತ್ಸವ ಅಂಗವಾಗಿ ಕೆರೆಗೆ ಬಾಗಿನ ಬಿಡುವ ಕಾರ್ಯಕ್ರಮ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಶ್ರದ್ಧಾ-ಭಕ್ತಿಯಿಂದ ಸೋಮವಾರ ನೆರವೇರಿತು.
ಬೆಳಗ್ಗೆ 10 ಗಂಟೆಗೆ ಸಂಪ್ರದಾಯದಂತೆ ಶ್ರೀ ಸಿದ್ದೇಶ್ವರ, ಬಸವೇಶ್ವರ, ಸ್ವರ್ಣಗೌರಿ ಹೊನ್ನಮ್ಮ ದೇವಾಲಯ ಸಮಿತಿ ಮತ್ತು ಹೊನ್ನಮ್ಮದೇವಿ ಕುಟುಂಬಸ್ಥರು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಾಗಿನವನ್ನು ಬಂಗಾರದ ಕಲ್ಲಿನ ಮೇಲಿಟ್ಟು ಪೂಜಿಸಿ, ನಂತರ ಕೆರೆಯ ನೀರಿನಲ್ಲಿ ವಿಸರ್ಜಿಸಿದರು. ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಗೌರಿ ಹಬ್ಬದಂದು ಇತಿಹಾಸ ಪ್ರಸಿದ್ಧ ಹೊನ್ನಮ್ಮ ಕೆರೆಗೆ ವಿವಿದೆಢೆಗಳಿಂದ ಆಗಮಿಸಿದ ನೂರಾರು ಭಕ್ತರು ಹೊನ್ನಮ್ಮನ ಆಶೀರ್ವಾದ ಪಡೆದರು. ವಿಶೇಷವಾಗಿ ನವದಂಪತಿಗಳು ಕೆರೆಗೆ ಬಾಗಿನ ಅರ್ಪಿಸಿ ಇಷ್ಟಾರ್ಥಗಳ ನೆರವೇರಿಸುವಂತೆ ಪೂಜೆ ಸಲ್ಲಿಸಿದರು.
ಜಾತ್ರೋತ್ಸವದಲ್ಲಿ ಭಾಗವಹಿಸಿದ್ದ ಶಾಸಕ ಡಾ.ಮಂತರ್ ಗೌಡ ಹೊನ್ನಮ್ಮ ತಾಯಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಇದೇ ಸಂದರ್ಭದಲ್ಲಿ ಕ್ಷೇತ್ರ ಹೊನ್ನಮ್ಮ ತಾಯಿ ದೇವಾಲಯ ಅಭಿವೃದ್ಧಿಗಾಗಿ 10 ಲಕ್ಷ ರೂ.ಗಳ ವೆಚ್ಚದ ಅಡುಗೆ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮುಂಬರುವ ದಿನಗಳಲ್ಲಿ ಸಾರ್ವಜನಿಕ ಶೌಚಗೃಹ, ಸಮುದಾಯ ಭವನ ನಿರ್ಮಾಣ ಮಾಡುವುದಕ್ಕೆ ಅನುದಾನ ಕಲ್ಪಿಸುವ ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ದೇವಾಲಯ ಸಮಿತಿ ಅಧ್ಯಕ್ಷ ಎಂ.ಬಿ ಚಂದ್ರಶೇಖರ್. ಉಪಾಧ್ಯಕ್ಷರು ಡಿ.ಬಿ ವೀರೇಶ. ಕಾರ್ಯದರ್ಶಿ ಪ್ರದೀಪ್. ಸದಸ್ಯರಾದ ಡಿ.ಬಿ.ಲೋಕೇಶ್ ಎಂ.ಬಿ ವಸಂತ್, ಭರತ್, ಡಿ.ಟಿ.ಮಂಜುನಾಥ್. ಡಿ.ಎಚ್.ಭರತ್, ಎಂ.ಎಲ್.ಆಕಾಶ್ ಇದ್ದರು.