ಪ್ರಾಕೃತಿಕ ವಿಕೋಪಕ್ಕೆ ಸಂಬAಧಿಸಿದAತೆ ಕೊಡಗು ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಾ. ಮಂತರ್ ಗೌಡ, ಧರ್ಮಜ ಉತ್ತಪ್ಪ, ವಿ.ಪಿ. ಶಶಿಧರ್, ಕೆ.ಪಿ. ಚಂದ್ರಕಲಾ ಮತ್ತಿತರರು ಇದ್ದರು. 
ಕೊಡಗು

ಹಾರಂಗಿಗೆ ಭೇಟಿ ನೀಡಿದ ಸಚಿವ ನರೇಂದ್ರ ಸ್ವಾಮಿ

ಮಡಿಕೇರಿ:
ಪ್ರಾಕೃತಿಕ ವಿಕೋಪಕ್ಕೆ ಸಂಬAಧಿಸಿದAತೆ ಕೊಡಗು ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಬುಧವಾರ ಕಾವೇರಿ ಕಣಿವೆಯ ಪ್ರಮುಖ ಜಲಾಶಯವಾದ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಣೆಕಟ್ಟೆಯ ಅಧಿಕಾರಿಗಳು ಹಾರಂಗಿ ಜಲಾಶಯಕ್ಕೆ ಸಂಬAಧಿಸಿದ ಮಾಹಿತಿಯನ್ನು ಸಚಿವರಿಗೆ ನೀಡಿದರು. ಜಲಾಶಯದ ಸಾಮರ್ಥ್ಯ, ನೀರಿನ ಒಳಹರಿವು, ಜಲಾನಯನ ಪ್ರದೇಶದಲ್ಲಿ ಮಳೆಯ ಸ್ಥಿತಿಗತಿ, ಇಲ್ಲಿಯ ತನಕ ನದಿಗೆ ಹರಿಸಿರುವ ನೀರಿನ ಪ್ರಮಾಣ, ಮುಂದೆ ಜಲಾಶಯಕ್ಕೆ ಹರಿದು ಬರಬಹುದಾದ ನೀರಿನ ಪ್ರಮಾಣ, ಅಣೆಕಟ್ಟೆಯ ಸುರಕ್ಷತೆ ಮತ್ತಿತರ ವಿಷಯಗಳಿಗೆ ಸಂಬAಧಿಸಿದAತೆ ಅಧಿಕಾರಿಗಳು ಸಚಿವ ನರೇಂದ್ರಸ್ವಾಮಿ ಅವರಿಗೆ ವಿವರಣೆ ನೀಡಿದರು.
ಈ ಸಂದರ್ಭ ಮಾತನಾಡಿದ ಸಚಿವರು, ಮೊದಲ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಇರುವ ಬರ ಮತ್ತು ಅತಿವೃಷ್ಟಿ ವಿಚಾದಲ್ಲಿ ಪ್ರತಿಯೊಬ್ಬ ಸಚಿವರಿಗೂ ಒಂದೊAದು ಜಿಲ್ಲೆಯ ಜವಾಬ್ದಾರಿ ಕೊಟ್ಟು ಪರಿಶೀಲನೆಗೆ ಆದೇಶ ಮಾಡಿದ್ದಾರೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮುಂಗಾರು ತಡವಾಗಿ ಆರಂಭವಾಗಿದ್ದು, ಮಳೆಯಿಂದ ಆಗಿರುವ ಅನಾಹುತಗಳ ಬಗ್ಗೆ ಸರ್ಕಾರಕ್ಕೂ ಮಾಹಿತಿ ಇದೆ. ಸಚಿವರುಗಳು ಖುದ್ದಾಗಿ ಹೋಗಿ ಇದನ್ನು ವೀಕ್ಷಣೆ ಮಾಡಿ ಜಿಲ್ಲಾಡಳಿತ, ಸ್ಥಳೀಯ ಶಾಸಕರುಗಳ ಜೊತೆ ಚರ್ಚೆ ಮಾಡಿ ಒಂದು ವರದಿಯನ್ನು ಕಂದಾಯ ಇಲಾಖೆಯ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು ಎಂದು ಸಿಎಂ ಸೂಚಿಸಿದ ಹಿನ್ನೆಲೆಯಲ್ಲಿ ಕೊಡಗಿಗೆ ಆಗಮಿಸಿ ಪರಿಶೀಲನೆ ನಡೆಸಲಾಗುತ್ತಿದೆ.
ಕಾವೇರಿ ತುಂಬಿದರೆ ಮಂಡ್ಯದಿAದ ಹಿಡಿದು ತಮಿಳುನಾಡಿನ ತನಕ ಸಮೃದ್ಧಿ ಸಾಧ್ಯ. ಇಲ್ಲಿ ಮಳೆ ಬಂದರೆ ಕೆಳಭಾಗದಲ್ಲಿ ಇರುವ ಸಂಭ್ರಮ ಕೊಡಗಿನಲ್ಲಿ ಇರುವುದಿಲ್ಲ. ಮಳೆಯ ಕಾರಣದಿಂದ ಇಲ್ಲಿನ ಜನರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಾರೆ. ಮೂಲಭೂತ ಸೌಕರ್ಯಕ್ಕೆ ಹಾನಿಯೂ ಆಗುತ್ತದೆ. ಇವೆಲ್ಲವನ್ನೂ ಜಿಲ್ಲಾಡಳಿತ ಮತ್ತು ಶಾಸಕರ ಜತೆ ಚರ್ಚೆ ಮಾಡಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ.
ತಾಯಿ ಕಾವೇರಿ ಮುನಿಸಿಕೊಂಡು ಬಿಟ್ಟಿದ್ದಾಳೆ ಎನ್ನುವಂಥ ವಾತಾವರಣ ಇಡೀ ದಕ್ಷಿಣ ಭಾರತದ ಜೀವನದಿಯ ವಿಚಾರವಾಗಿ ಎಲ್ಲರೂ ಆತಂಕಪಟ್ಟಿದ್ದರು. ಕರ್ನಾಟಕದ ಸುಮಾರು ಅರ್ಧ ಭಾಗದಷ್ಟು ಜನರಿಗೆ ನೀರು ಉಣಿಸುವ, ದಾಹ ತಣಿಸುವ, ನೀರಾವರಿಯ ಜವಾಬ್ದಾರಿ ನಿರ್ವಹಿಸುವ, ಹಲವಾರು ಜಲವಿದ್ಯುತ್ ಯೋಜನೆಗಳಿಗೆ ಶಕ್ತಿ ನೀಡುವ ಕಾವೇರಿ ತಾಯಿ ಮುನಿಸಿದರೆ ಬೆಳಕಿನಿಂದ ಹಿಡಿದು, ಬಾಯಾರಿಕೆ, ಅನ್ನ-ಆಹಾರಕ್ಕೂ ಸಮಸ್ಯೆ ಆಗುವ ಆತಂಕ ಕಾಣಿಸಿಕೊಂಡಿತ್ತು. ಅದು ಕಳೆದ ಒಂದು ವಾರದಲ್ಲಿ ಬಹುತೇಕ ನಿವಾರಣೆಯಾಗಿದೆ ಎಂದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಕುಶಾಲನಗರ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್, ಪ್ರಮುಖರಾದ ಕೆ.ಪಿ. ಚಂದ್ರಕಲಾ, ಮಂಜುನಾಥ್ ಗುಂಡೂರಾವ್, ಪುಷ್ಪಲತಾ, ಜಿಲ್ಲಾಧಿಕಾರಿ ಸೋಮಶೇಖರ್, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ನೀರಾವರಿ ಇಲಾಖೆ ಎಂಜಿನಿಯರ್‌ಗಳು, ವಿವಿಧ ಇಲಾಖೆ ಅಧಿಕಾರಿಗಳು ಈ ಸಂದರ್ಭ ಇದ್ದರು.
ಇದಕ್ಕೂ ಮೊದಲು ಜಿಲ್ಲೆಯ ಗಡಿಭಾಗ ಕೊಪ್ಪ ಗೇಟ್ ಬಳಿ ಸಚಿವರಾದ ನಂತರ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿದ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಅವರನ್ನು ಜಿಲ್ಲಾಡಳಿತ ಮತ್ತು ಕಾಂಗ್ರೆಸ್ ಪಕ್ಷದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.