ಸೋಮವಾರಪೇಟೆ ತಾಲೂಕಿನ ಗೋಣಿಮರೂರು ಗ್ರಾಮದ ಗ್ರಾಮದೇವತೆ ಬಂಡಿಯಮ್ಮ ದೇವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು. 
ಕೊಡಗು

ಅಂತರಂಗ ಶುದ್ದಿಯಿಂದ ಮಾನಸಿಕ ನೆಮ್ಮದಿ

ರವಿಕುಮಾರ್ ಪಿ. ಕೆ
ಸೋಮವಾರಪೇಟೆ: ತಾಲೂಕಿನ ಗೋಣಿಮರೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಗ್ರಾಮ ದೇವತೆ ಬಂಡಿಯಮ್ಮ ದೇವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಶುಕ್ರವಾರ ನೆರವೇರಿತು.
ದೇವತಾ ವಿಗ್ರಹ ಪ್ರತಿಷ್ಠಾಪನೆಯ ಬಳಿಕ ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ವಿಜ್ಞಾನದೊಂದಿಗೆ ಧರ್ಮ ಮೇಳೈಸಿರುವ ಹಿಂದೂ ಧರ್ಮವು ಜಗತ್ತಿನ ಶ್ರೇಷ್ಠ ಧರ್ಮವಾಗಿದೆ ಎಂದು ಹೇಳಿದರು.
ಮನುಷ್ಯ ತನ್ನ ಅಂತರಂಗ ಶುದ್ದವಾಗಿಟ್ಟುಕೊಳ್ಳುವ ಮೂಲಕ ಮಾನಸಿಕ ನೆಮ್ಮದಿ ಪಡೆಯಬೇಕು. ಸಜ್ಜನರ ಸಂಘ ಹಾಗೂ ಸದ್ವಿಚಾರಗಳಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಿದೆ. ಪಾಲಕರಲ್ಲಿ ಉತ್ತಮ ಸಂಸ್ಕಾರಗಳಿದ್ದರೆ ಅದು ಮಕ್ಕಳಲ್ಲೂ ಸಹಜವಾಗಿ ಬೆಳೆಯುತ್ತದೆ. ಮಕ್ಕಳಿಗೆ ವಿದ್ಯೆಯ ಜತೆಗೆ ಸಂಸ್ಕಾರವೂ ಅತಿ ಮುಖ್ಯ ಎಂದು ತಿಳಿಸಿದರು.
ದೇವಾಲಯ ನಿರ್ಮಾಣಕ್ಕಾಗಿ ಶಾಸಕ ಡಾ.ಮಂತರ್ ಗೌಡ ಅವರು ವಿಶೇಷ ಆಸಕ್ತಿ ವಹಿಸಿ ಒಂದು ಲಕ್ಷ ರೂ.ಗಳ ಅನುದಾನ ನೀಡಿರುವುದನ್ನು ದೇವಾಲಯ ಸಮಿತಿ ಅಧ್ಯಕ್ಷ ಸಿದ್ದಪ್ಪ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಮಿತಿ ಉಪಾಧ್ಯಕ್ಷ ಧರ್ಮಪ್ಪ, ಕಾರ್ಯದರ್ಶಿ ಮೋಹನ್ ಮತ್ತು ನಿರ್ದೇಶಕರು ಇದ್ದರು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.