ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಜನ್ಮಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಕರ್ನಾಟಕ ವಿಕಾಸ ರಂಗ ವಾಸವಿ ಕಲಾ ಮಂಡಳಿ ಸಹಕಾರದೊಂದಿಗೆ ಏರ್ಪಡಿಸಿದ್ದ ಮಾಸದ ನೆನಪು, ಕವಿ ಸಾಹಿತಿಗಳ ಸ್ಮರಣೆ ಕಾರ್ಯಕ್ರಮವನ್ನು ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಉದ್ಘಾಟಿಸಿದರು. ಹಂಡ್ರAಗಿ ನಾಗರಾಜ್, ಬಿ.ಎಸ್. ಲೋಕೇಶ್ ಸಾಗರ್, ಶಬ್ಬೀರ್ ಪಾಷಾ, ಉ.ರಾ. ನಾಗೇಶ್ ಮತ್ತಿತರರು ಇದ್ದರು.
ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಜನ್ಮಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಕರ್ನಾಟಕ ವಿಕಾಸ ರಂಗ ವಾಸವಿ ಕಲಾ ಮಂಡಳಿ ಸಹಕಾರದೊಂದಿಗೆ ಮಾಸದ ನೆನಪು, ಕವಿ ಸಾಹಿತಿಗಳ ಸ್ಮರಣೆ ಕಾರ್ಯಕ್ರಮ ಕುಶಾಲನಗರಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಮಾತನಾಡಿ ಕವಿತೆ ರಚನೆಯ ಲೋಕದಲ್ಲಿ ಪರಿಶ್ರಮ ಬಹುಮುಖ್ಯ. ಹಿರಿಯ ಕವಿಗಳ ಸಾಧನೆ ಮುಂದಿನ ಯುವಕರಿಗೆ ದಾರಿಯಾಗಿದೆ, ಬದುಕಿನ ಭಾವೈಕ್ಯತೆಯಲ್ಲಿ ಕವಿಗಳ ಪಾತ್ರ ಹಿರಿದು. ಪ್ರತಿಯೊಬ್ಬ ನಾಗರಿಕನು ಸಮಾಜದಲ್ಲಿ ಭಾವೈಕ್ಯತೆಯಿಂದ ಬದುಕಲು ನಮ್ಮ ಹಿರಿಯ ಕವಿಗಳು ತಮ್ಮ ಕೃತಿಗಳ ಮುಖಾಂತರ ಜಗತ್ತಿಗೆ ಉತ್ತಮ ಸಂದೇಶ ಕೊಟ್ಟು ಹೋಗಿದ್ದಾರೆ. ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ, ಪ್ರೊ. ಕೆ.ಎಸ್. ನಿಸಾರ್ ಅಹಮದ್, ಜಿ.ಎಸ್. ಸಿದ್ದಲಿಂಗಯ್ಯ ಹಾಗೂ ಚಿ. ಉದಯಶಂಕರ್ ತಮ್ಮ ಉತ್ತಮ ಕವನಗಳ ಮುಖಾಂತರ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ. ಅವರುಗಳ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ನಮ್ಮ ಹೊಣೆ ಎಂದು ಹೇಳಿದರು.
ಕೂಡಿಗೆ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಹಂಡ್ರAಗಿ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದ ನಿವೃತ್ತ ವಿಸ್ತಾರಣಾಧಿಕಾರಿ ಶಬ್ಬೀರ್ ಪಾಷಾ, ನಿವೃತ್ತ ಕಲಾ ಶಿಕ್ಷಕ ಉ.ರಾ. ನಾಗೇಶ್, ಕುಶಾಲನಗರ ಕರ್ನಾಟಕ ವಿಕಾಸರಂಗ ಉಪಾಧ್ಯಕ್ಷೆ ವಿನಯ ರಾಜಶೇಖರ್, ವಾಸವಿ ಕಲಾ ಮಂಡಳಿ ಅಧ್ಯಕ್ಷೆ ಲತಾ ರಮೇಶ್, ಬಳಗದ ಪ್ರಮುಖರಾದ ಟಿ.ಕೆ.ಪಾಂಡುರAಗ, ಕೆ.ಕೆ ನಾಗರಾಜಶೆಟ್ಟಿ, ಉಪನ್ಯಾಸಕಿ ಮಾಲಾದೇವಿ ಇದ್ದರು.
ಮಾಸದ ನೆನಪು ಕವಿ ಸಾಹಿತಿಗಳ ಸ್ಮರಣೆ ಕಾರ್ಯಕ್ರಮದಲ್ಲಿ ರಾಷ್ಟಕವಿ ಜಿ.ಎಸ್. ಶಿವರುದ್ರಪ್ಪ, ಪ್ರೊ. ನಿಸಾರ್ ಅಹಮದ್, ಚಿ. ಉದಯಶಂಕರ್, ಡಾ. ಸಿದ್ದಲಿಂಗಯ್ಯ ಅವರುಗಳ ಸ್ಮರಣೆಯ ಹಾಡುಗಳನ್ನು ಹಾಡಲಾಯಿತು.