ಜ್ಞಾನ-ವಿಜ್ಞಾನ ಸಮಿತಿಗೆ ಸದಸ್ಯತ್ವ ಆಂದೋಲನ 
ಕೊಡಗು

ಜ್ಞಾನ-ವಿಜ್ಞಾನ ಸಮಿತಿಗೆ ಸದಸ್ಯತ್ವ ಆಂದೋಲನ

ನಾಪೋಕ್ಲು: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಗೆ ಮಾ.10ರಿಂದ ಏ.10 ರವರೆಗೆ ಹೊಸ ಸದಸ್ಯರ ಸದಸ್ಯತ್ವ ನೋಂದಣಿ ನಡೆಸಲಾಗುತ್ತಿದೆ.
2012 ಮಾರ್ಚ್ 10ರಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸ್ಥಾಪನೆಯಾಗಿದ್ದು 14 ವರ್ಷಗಳು ಸಂದಿವೆ. ಈ ಸಮಿತಿಯು ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು, ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸುವುದು, ವಿಜ್ಞಾನ ಜನ ವಿಜ್ಞಾನವಾಗಿಸಲು ಪ್ರಯತ್ನ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಮುಂತಾದ ಶೈಕ್ಷಣಿಕ ಚಟುವಟಿಕೆ ಆಯೋಜಿಸುವುದು. ವಿಜ್ಞಾನ ಬೇಸಿಗೆ ಶಿಬಿರ, ಜನರಿಗೆ ಮಾರಕವಾಗಿರುವ ಯೋಜನೆಗಳ ವಿರುದ್ಧ ಜನಾಂದೋಲನ , ವಿಜ್ಞಾನ ಕಾರ್ಯಾಗಾರ ಮುಂತಾದ ವಿಚಾರಗಳನ್ನು ಒಳಗೊಂಡ ಕಾರ್ಯ ನಡೆಸುತ್ತಿದೆ. ಇದರ ಕೇಂದ್ರ ಕಚೇರಿ ಬೆಂಗಳೂರಿನ ವಸಂತನಗರದಲ್ಲಿದೆ ಎಂದು ಪ್ರಕಟಣೆ ತಿಳಿಸಿದೆ.