:ಪಾಲಕರು ಕ್ರೀಡಾಕೂಟದಲ್ಲಿ ತೊಡಗಿದ್ದ ಸಂದರ್ಭ. 
ಕೊಡಗು

ವಿದ್ಯಾರ್ಥಿಗಳು ದೇಶದ ಸತ್ಪ್ರಜೆಗಳಾಗಲಿ

ಪ್ರಮುಖ ಮುಖ್ಯಾಂಶಗಳು

  • ಗ್ರಾಮ ಪಂಚಾಯಿತಿ ಸದಸ್ಯ ರಫೀಕ್‌ಖಾನ್ ಕಿವಿಮಾತು
ಸುಂಟಿಕೊಪ್ಪ: ಉತ್ತಮ ಶಿಕ್ಷಣವನ್ನು ಪಡೆದು ವಿದ್ಯಾರ್ಥಿಗಳು ದೇಶದ ಸತ್ಪ್ರಜೆಗಳಾಗಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ರಫೀಕ್‌ಖಾನ್ ಕಿವಿಮಾತು ಹೇಳಿದರು.
ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಚಾಚಾ ನೆಹರು ಅವರ ಆದರ್ಶ ಗುಣಗಳನ್ನು ವಾಚಿಸಿ ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳು ಶ್ರದ್ಧೆಯಿಂದ ಈಗಿನಿಂದಲೇ ಪಾಠಪ್ರವಚನಗಳತ್ತ ಚಿತ್ತಹರಿಸುವುದರಿಂದ ಉನ್ನತ ಶಿಕ್ಷಣಗಳಿಗೆ ಅನುಕೂಲರವಾದ ವಾತಾವರಣ ಸೃಷ್ಟಿಯಾಗಲಿದೆ.ಉನ್ನತ ಶಿಕ್ಷಣಗಳನ್ನು ಪಡೆಯುವ ಮೂಲಕ ದೇಶದ ಉನ್ನತ ಹುದ್ದೆಗಳಲ್ಲಿ ಪಡೆದುಕೊಂಡಾಗ ಮಾತ್ರ ಪಾಲಕರು, ಗ್ರಾಮ, ಶಿಕ್ಷಣ ನೀಡಿದ ಶಾಲೆಗಳ ಕೀರ್ತಿ ಹೆಚ್ಚಿಸಬಹುದು ಎಂದರು.
ಮುಖ್ಯ ಅತಿಥಿಗಳಾಗಿ ನಾಕೂರು ಶಿರಂಗಾಲ ಗ್ರಾಪಂ ಮಾಜಿ ಸದಸ್ಯರಾದ ಪಿ. ಎಂ. ಬಿಜು ಪಾಲಕರಿಗೆ ಆಯೋಜಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸಹಶಿಕ್ಷಕಿ ಪ್ರೀತಿ ಜಾಯ್ಸ ಪೀಠೋ ಮಾತನಾಡಿದರು. ಮುಖ್ಯಶಿಕ್ಷಕಿ ಜೋವಿಟಾ ವಾಸ್, ವ್ಯವಸ್ಥಾಪಕರಾದ ಜೆಸ್ಸಿವೇಗಸ್, ಶಾಲೆಯ ಹಿರಿಯ ವಿದ್ಯಾರ್ಥಿ ಅಯ್ಯಪ್ಪ ಇದ್ದರು.