ಮುಳ್ಳೂರು ಇಂಟಿನಾಯಕನ ಕೆರೆಯಲ್ಲಿ ಗ್ರಾಮಸ್ಥರು ಮೀನು ಬೇಟೆಯಾಡಿದರು.
ಶನಿವಾರಸಂತೆ: ಸಮೀಪದ ಮುಳ್ಳೂರು ಗ್ರಾಮದ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಇಂಟಿನಾಯಕನ ಕೆರೆಯಲ್ಲಿ ಸಾರ್ವಜನಿಕರು ಮೀನು ಬೇಟೆಯಾಡಿದರು.
ಕೆರೆ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ಸಾಮೂಹಿಕ ಮೀನು ಬೇಟೆ ಕುರಿತು ಸ್ಥಳೀಯ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಪ್ರಚಾರ ಮಾಡಿದ್ದರು. ಬೇಟೆಗೆ ಬಳಸುವ ಗೋರಿ, ಕೂಳಿ, ಬಲೆ ಮುಂತಾದ ಪರಿಕರವೊಂದಕ್ಕೆ ಗುತ್ತಿಗೆದಾರ ಇಂತಿಷ್ಟು ಹಣವನ್ನು ನಿಗದಿ ಮಾಡಿದ್ದರು. ಅದರಂತೆ ಹಣ ನೀಡಿ ಜನರು ಮೀನು ಬೇಟೆಯಾಡಿದರು. ಅಕ್ಕ ಪಕ್ಕದ ಗ್ರಾಮಗಳಿಂದ ನೂರಾರು ಜನರು ಆಗಮಿಸಿ ಕೆರೆಯಲ್ಲಿ ಸಾಮೂಹಿಕವಾಗಿ ಮೀನು ಬೇಟೆಯಾಡಿ ಸಂಭ್ರಮಿಸಿದರು.