ಸೋಮವಾರಪೇಟೆ ಅಂಜನೇಯ ದೇವಾಲಯದಲ್ಲಿ ಹನುಮದ್ ವ್ರತದ ಪ್ರಯುಕ್ತ ಮಂಗಳವಾರ ವಿಶೇಷ ಪೂಜೆ ಮತ್ತು ಹೋಮ ನೆರವೇರಿತು. ಪ್ರಧಾನ ಅರ್ಚಕ ನಂಜುಂಡೇಶ್ವರ ಮತ್ತು ಋತ್ವಿಜರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ಸೋಮವಾರಪೇಟೆ: ಹನುಮದ್ ವ್ರತದ ಅಂಗವಾಗಿ ಪಟ್ಟಣದ ಆಂಜನೇಯ ದೇವಾಲಯದಲ್ಲಿ ಮಂಗಳವಾರ ವಿಶೇಷ ಪೂಜೆ, ಹೋಮ ಇತ್ಯಾದಿ ಧಾರ್ಮಿಕ ಪ್ರಕ್ರಿಯೆಗಳು ವಿಧಿವತ್ತಾಗಿ ನೆರವೇರಿದವು.
ದೇವಾಲಯದ ಪ್ರಧಾನ ಅರ್ಚಕ ನಂಜುಂಡೇಶ್ವರ ಅವರ ನೇತೃತ್ವದಲ್ಲಿ ಆಂಜನೇಯ ಸ್ವಾಮಿಗೆ ಬೆಳಗ್ಗೆ ಪಂಚಾಮೃತ ಅಭಿಷೇಕ, ಅರ್ಚನೆ ಸೇವೆ ನಡೆಯಿತು. ಋತ್ವಿಜರಿಂದ ಮಾರುತಿ ಹೋಮ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು. ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ದೇವಾಲಯ ಸಮಿತಿ ಅಧ್ಯಕ್ಷ ಸಿ.ಪಿ. ಗೋಪಾಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಎಲ್.ಸೀತಾರಾಂ, ಸಮಿತಿ ಕಾರ್ಯದರ್ಶಿ ನಂದಕುಮಾರ್, ಸದಸ್ಯರಾದ ರಾಘವ, ಸುರೇಶ್, ಹಾಲಪ್ಪ, ಗಣೇಶ್ ಇತರರು ಇದ್ದರು. ನೂರಾರು ಭಕ್ತರು ದೇವರ ದರ್ಶನ ಪಡೆದು ಧನ್ಯತೆ ಮೆರೆದರು. ನಂತರ ಪ್ರಸಾದ ವಿನಿಯೋಗ ನೆರವೇರಿತು.