ಅಧ್ಯಕ್ಷ ಮಂಜಾಪುರ ಛಾಯಾ ಪ್ರಕಾಶ್ (ಚೇತನ್ ) 
ಕೊಡಗು

ಅಧ್ಯಕ್ಷರಾಗಿ ಮಂಜಾಪುರ ಛಾಯಾ ಪ್ರಕಾಶ್ ಆಯ್ಕೆ

ನಾಪೋಕ್ಲು: ಶ್ರೀ ಭಗವತಿ ಕ್ಷೇತ್ರಪಾಲ ಮತ್ತು ವಿಷ್ಣುಮೂರ್ತಿ ದೇವಸ್ಥಾನ ನರಿಯಂದಡ ಚೆಯ್ಯಂಡಾಣೆ ಇದರ ನೂತನ ಅಧ್ಯಕ್ಷರಾಗಿ ಮಂಜಾಪುರ ಛಾಯಾ ಪ್ರಕಾಶ್(ಚೇತನ್) ಕಾರ್ಯದರ್ಶಿಯಾಗಿ ಮಕ್ಕಿಮನೆ ಸುದೀರ್ ಆಯ್ಕೆಯಾಗಿದ್ದಾರೆ.
ಬಟ್ಯಂಡ ಜಯರಾಮ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಚೆಯ್ಯಂಡ ಶಂಕರಿ ಮತ್ತು ಬೆಳಿಯಂಡ್ರ ಹರಿಪ್ರಸಾದ್ ಸೇರಿದಂತೆ 20 ಸದಸ್ಯರು ಆಯ್ಕೆಯಾಗಿದ್ದಾರೆ. ಮಹಾಸಭೆಯಲ್ಲಿ ಅರ್ಚಕರಾದ ಶಿವ ಶರ್ಮ, ಬಟ್ಯಂಡ ಜಯರಾಮ್, ತೋಟಂಬೈಲ್ ಅನಂತ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮಹಾಸಭೆಯ ಬಳಿಕ ಮಂಜಾಪುರ ಕುಟುಂಬದಿಂದ ತಿಂಗಳ ಪೂಜೆ ನಡೆಯಿತು.
ಅಧ್ಯಕ್ಷ ಮಂಜಾಪುರ ಛಾಯಾ ಪ್ರಕಾಶ್ (ಚೇತನ್ )