ಸಿದ್ದಾಪುರ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ(ಸಿಬಿಎಸ್‌ಇ) ನರ್ಸರಿ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ಬಹುಮಾನ ವಿತರಣಾ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
- ಸಂತ ಅನ್ನಮ್ಮ ವಿದ್ಯಾಸಂಸ್ಥೆ ವ್ಯವಸ್ಥಾಪಕಿ ಸಿಸ್ಟರ್ ಮಾರ್ಜೋರಿ ಸಲಹೆ
ಸಿದ್ದಾಪುರ: ನರ್ಸರಿ ಹಂತದಲ್ಲಿ ಮಕ್ಕಳು ತರಗತಿಯಲ್ಲಿ ತೋರಿಸುವ ಉತ್ಸಾಹ, ಕಲಿಯುವ ಕುತೂಹಲ, ಸೃಜನಶೀಲತೆ ಹಾಗೂ ಪ್ರತಿಭೆಗಳ ಅನಾವರಣ ಅತ್ಯಂತ ಮಹತ್ವದ್ದು ಎಂದು ಸಂತ ಅನ್ನಮ್ಮ ವಿದ್ಯಾಸಂಸ್ಥೆ ವ್ಯವಸ್ಥಾಪಕಿ ಸಿಸ್ಟರ್ ಮಾರ್ಜೋರಿ ಹೇಳಿದರು.
ಸಿದ್ದಾಪುರ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ(ಸಿಬಿಎಸ್‌ಇ) ನರ್ಸರಿ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ಬಹುಮಾನ ವಿತರಣಾ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಹುಮಾನ ಪಡೆದ ಪ್ರತಿಯೊಂದು ಮಗುವೂ ತನ್ನದೇ ಆದ ವಿಶಿಷ್ಟ ಪ್ರತಿಭೆಯನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲಿದ್ದಾರೆ ಎಂದು ಹೇಳಿದರು.
ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯ ಜಾಫರ್ ಅಲಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಯಾವುದೋ ಒಂದು ಪ್ರತಿಭೆ ಅಡಕವಾಗಿರುತ್ತದೆ. ಸತತ ಪರಿಶ್ರಮ ಮತ್ತು ಧನಾತ್ಮಕ ಚಿಂತನೆಯೊಂದಿಗೆ ಆ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು. ಬಹುಮಾನಗಳನ್ನು ಗೆಲ್ಲುವುದಕ್ಕಿಂತ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮುಖ್ಯ. ಪ್ರಯತ್ನ ನಿರಂತರವಾಗಿರಬೇಕು ಹಾಗೂ ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲೆ ಸಿಸ್ಟರ್ ಲೆನಿಟ್, ಶಾಲೆ ಸಂಚಾಲಕಿ ಸಿಸ್ಟರ್ ಅರ್ಪಿತಾ, ರಮ್ಯಾ ತಿಮ್ಮಯ್ಯ, ಕಲಾವಿದೆ ಭಾವ ಮಾಲ್ದಾರೆ ಇದ್ದರು. ನರ್ಸರಿ ವಿಭಾಗದ ಶಿಕ್ಷಕರಾದ ಲೇನ್ನಿ, ಸುನೀತಾ, ಟ್ರೀಜ, ತೆರೇಸಾ, ಎಲಿಸಾ, ಶೈನಿ, ಶೆರ್ಲಿ ಇತರರು ಇದ್ದರು.