ವಿರಾಜಪೇಟೆ: ಇಲ್ಲಿನ ತೆಲುಗು ಶೆಟ್ಟರ ಬೀದಿಯ ಇತಿಹಾಸ ಪ್ರಸಿದ್ಧ ಶ್ರೀ ದಕ್ಷಿಣ ಮಾರಿಯಮ್ಮ ದೇವಸ್ಥಾನದ 12ನೇ ವರ್ಷದ ಮಹಾ ಕುಂಭಾಭಿಷೇಕ ಏ.18ರಿಂದ ಏ.20ರವರೆಗೆ ಮೂರು ದಿನಗಳವರೆಗೆ ನಡೆಯಲಿದೆ.
ಏ.18ರಂದು ಸಂಜೆ 6 ಗಂಟೆಗೆ ಗಣಪತಿ ಪೂಜೆ, ವಾಸ್ತುಶಾಂತಿ, ಮೃತ್ ಸಂಗ್ರಹಣ, ಅಂಕುರಾರ್ಪಣೆ, ರಕ್ಷಾಬಂಧನ, ಪ್ರಥಮ ಕಾಲಯಾಗ ಪೂಜೆ, ಪ್ರಾತಃಕಾಲ ಯಾಗ ಪ್ರವೇಶ, ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.
ಏ.19 ರಂದು ಬೆಳಗ್ಗೆ 8.30 ಗಂಟೆಗೆ ವಿಘ್ನೇಶ್ವರ ಪೂಜೆ, ಶಿವಸೂರ್ಯ ಪೂಜೆ, ವಿಶೇಷ ಸಂಧಿ, ಎರಡನೇ ಕಾಲಯಾಗ ಪೂಜೆ, ಮೂಲಮಂತ್ರ, ಅಸ್ತ್ರ ಮಂತ್ರಹೋಮ, ದ್ರವ್ಯಾಹುತಿ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ, ಸಂಜೆ 6 ಗಂಟೆಗೆ ವಿನಾಯಕ ಪೂಜೆ, ಸೋಮ ಕುಂಭ ಪೂಜೆ, ದ್ರವ್ಯಾಹುತಿ, ಲಲಿತ ತ್ರಿಷಾದಿ ಪಾರಾಯಣ, ಮಹಾಪೂರ್ಣಾಹುತಿ, ಮಹಾಮಂಗಳಾರತಿ, 10 ಗಂಟೆಗೆ ಯಂತ್ರ ಸ್ಥಾಪನೆ, ಅಷ್ಠಬಂಧನ ಪೂಜೆ, ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.
ಏ.20ರಂದು ಬೆಳಗ್ಗೆ 7.30 ಗಂಟೆಗೆ ಗಣಪತಿ ಪೂಜೆ, ಸೂರ್ಯ ಪೂಜೆ, ತತ್ವರ್ಚನ, ಶಡದ್ವ ಹೋಮ, ಬಿಂಬ ಶುದ್ಧಿ, ಸ್ವಶಾರ್ಹುತಿ ನಾಡಿಸಂಧಾನ, ದ್ರವ್ಯಾಹುತಿ, ಪೂರ್ಣಹುತಿ, ಮಹಾಪೂರ್ಣಾಹುತಿ, ಯಾತ್ರಾದಾನ, ಮಹಾಮಂಗಳಾರತಿ, ಬೆಳಗ್ಗೆ 9.15ರಿಂದ 10.15 ಗಂಟೆಗೆವರೆಗೆ ರೋಹಿಣಿ ನಕ್ಷತ್ರ ಮಿಥುನ ಲಗ್ನದಲ್ಲಿ ಗೋಪುರ ಕಲಶ ಕುಂಭಾಭಿಷೇಕ ನೆರವೇರಲಿದೆ. ತದನಂತರ ಗೋಪೂಜೆ, ಮಹಾಭಿಷೇಕ ಅಲಂಕಾರ ಪೂಜೆ, ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.
ದೇವಿಗೆ ಕುಂಭ ಕಳಶ ಪೂಜೆ ಮಾಡಿಸುವ ಭಕ್ತರು 1001 ರೂ.ಗಳನ್ನು ನೀಡಿ ರಶೀದಿ ಪಡೆದು, ಶನಿವಾರ ಸಂಜೆಯಿಂದ ಸೋಮವಾರ ಬೆಳಗ್ಗೆ 8 ಗಂಟೆಯವರೆಗೆ ಸಂಕಲ್ಪ ಮಾಡಬಹುದುದಾಗಿದೆ. ದೇವಸ್ಥಾನದ ವತಿಯಿಂದ ಪ್ರತಿ ಶುಕ್ರವಾರ ಮಧ್ಯಾಹ್ನ ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಸುತ್ತಿರುವದರಿಂದ ಅನ್ನ ಛತ್ರದ ಕಾಮಗಾರಿ ನಡೆಸಲು ಭಕ್ತಾದಿಗಳು ಸಹಕರಿಸುವಂತೆ ಶ್ರೀ ಮಾರಿಯಾಮ್ಮ ಮತ್ತು ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.