ಕರ್ನಾಟಕ ಟೆಕ್ವಾಂಡೋ ವತಿಯಿಂದ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿನಡೆದ ಕರ್ನಾಟಕ ರಾಜ್ಯೋತ್ಸವ ಟೆಕ್ವಾಂಡೋ ಕಪ್ ಸ್ಪರ್ಧೆಯಲ್ಲಿ ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್‌ನ ವಿದ್ಯಾರ್ಥಿಗಳು ಚಾಂಪಿಯನ್‌ಶಿಪ್ ಕಪ್ ಗೆದ್ದುಕೊಂಡಿದ್ದಾರೆ. ಮಾಸ್ಟರ್ ಕುಶಾಲ್ ಇದ್ದರು.
ಕರ್ನಾಟಕ ಟೆಕ್ವಾಂಡೋ ವತಿಯಿಂದ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಕರ್ನಾಟಕ ರಾಜ್ಯೋತ್ಸವ ಟೆಕ್ವಾಂಡೋ ಕಪ್ ಸ್ಪರ್ಧೆಯಲ್ಲಿ ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್‌ನ ವಿದ್ಯಾರ್ಥಿಗಳು ಸ್ಪರ್ಧಿಸಿ ಚಾಂಪಿಯನ್‌ಶಿಪ್ ಕಪ್ ಗೆದ್ದುಕೊಂಡಿದ್ದಾರೆ.
ಸಬ್ ಜೂನಿಯರ್ ವಿಭಾಗದ 8 ವರ್ಷದೊಳಗಿನ ಸ್ಪರ್ಧೆಯಲ್ಲಿ ಕೊಡಗು ವಿದ್ಯಾಲಯದ ಜಿವಿನ್ ಅಯ್ಯಪ್ಪ, 10 ವರ್ಷದೊಳಗಿನ ವಿಭಾಗದಲ್ಲಿ ಸಂತ ಜೋಸೆಫರ ಶಾಲೆಯ ಆಲಿಯಾ ಪರ್ವಿನ್, 12 ವರ್ಷದೊಳಗಿನ ವಿಭಾಗದಲ್ಲಿ ಕೊಡಗು ವಿದ್ಯಾಲಯದ ಪಾವನಿ, ಎನ್.ಕೆ.ದಿವಿತ್, ಅಖಿಲ ರವಿ, ಲಕ್ಷಾ ಎ., ದಾನೀಶ್, ಜೀಯ ಬೋಜಮ್ಮ, ರಾಯಿಕ ಅಕ್ಕಮ್ಮ ಸ್ಪರ್ಧಿಸಿ ಕೊಡಗಿಗೆ ಕೀರ್ತಿ ತಂದಿದ್ದಾರೆ.
14 ವರ್ಷದೊಳಗಿನ ವಿಭಾಗದಲ್ಲಿ ಕೊಡಗು ವಿದ್ಯಾಲಯದ ಅಯಾನ್ ಖಾನ್, ದಕ್ಷ್ ಸೋಮಯ್ಯ, ಕೇಂದ್ರೀಯ ವಿದ್ಯಾಲಯದ ಋತ್ವಿಸನ, ನವನ್ಯ ಮತ್ತು ಸಂತ ಮೈಕಲರ ಶಾಲೆಯ ಆರೂಶ್ ಪರ್ವಿನ್ ಮತ್ತು 17 ವರ್ಷದೊಳಗಿನ ವಿಭಾಗದಲ್ಲಿ ಕೇಂದ್ರೀಯ ವಿದ್ಯಾಲಯ ಅವಿನಾಶ್ ಪದಕ ಪಡೆದು ಕೊಡಗಿಗೆ ಚಾಂಪಿಯನ್ ಶಿಪ್ ಕಪ್ ತರುವುದರಲ್ಲಿ ಯಶಸ್ವಿಯಾಗಿದ್ದಾರೆ. ಇವರು ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್‌ನ ಮಾಸ್ಟರ್ ಕುಶಾಲ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.